ಉಚಿತ ಧವಸ ಧಾನ್ಯ ವಿತರಣೆ

ಮೈಸೂರು. ಮಾ.6- ಕೋವಿಡ್-19 ಕೊರೋನಾ ರೋಗ ನಿಯಂತ್ರಣದ ಲಾಕ್ ಡೌನ್ ನಿಮಿತ್ತ ಕಡುಬಡವರಿಗೆ ಜೈನ ಸಮುದಾಯದ ವತಿಯಿಂದ 1000 ಬಡ ಕುಟುಂಬಗಳಿಗೆ ಧವಸಧಾನ್ಯ ವಿತರಣೆ ಮಾಡಿದರು.
ಇಂದು ಬೆಳಿಗ್ಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ನಗರದ ಹಳ್ಳದಕೇರಿಯಲ್ಲಿ ಜೈನ ಸಮುದಾಯದ ಜೈನ ಮಂದಿರದಲ್ಲಿ ಜೈನ ಗುರುಗಳಾದ ನಯಾಚಂದ್ರ ಜೈನ್ ಹಾಗೂ ಅಜಿತ್ ಜೈನ್ ರವರ ಆಶೀರ್ವಾದ ಪಡೆದು ಮಹಾವೀರ ಜಯಂತಿಯ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ತದನಂತರ ಜೈನ ಸಮುದಾಯದ ವತಿಯಿಂದ 1000 ಬಡ ಕುಟುಂಬಗಳಿಗೆ ಉಚಿತ ಧವಸ ಧಾನ್ಯ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಜೈನ ಸಮುದಾಯದ ಮುಖಂಡರುಗಳಾದ ಶ್ರೀ ಶಾಂತಿಲಾಲ್ ಜೈನ್, ಶ್ರೀ ಹಂಸರಾಜ್ ಜೈನ್, ನವಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಪ್ರವೀಣ್ ಜೈನ್, ಶ್ರೀ ಪ್ರವೀಣ್ ಹರಣ್ ಮುಂತಾದವರು ಹಾಜರಿದ್ದರು.

Leave a Comment