ಉಚಿತ ಇಂಗ್ಲೀಷ್ ತರಬೇತಿ

ಬೆಂಗಳೂರು,ಜ.೩೦- ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವ ಡಿಜಿಟಲ್ ಅಕಾಡೆಮಿ ೩೬೦ ‘ಅಪ್‌ಸ್ಕಿಲ್‌ಯೂತ್’ ಎನ್ನುವ ಉಚಿತ ಇಂಗ್ಲೀಷ್ ಭಾಷೆ ತರಬೇತಿಯನ್ನು (ಇಎಲ್‌ಟಿ) ಆರಂಭಿಸಿದೆ.

ತರಬೇತಿಯು ಉಚಿತವಾಗಿದ್ದು ನಗರದ ೫ ಕೇಂದ್ರಗಳಲ್ಲಿ ಲಭ್ಯವಿದೆ.ಯುವ ಜನಾಂಗಕ್ಕೆ ಉಚಿತವಾಗಿ ಇಂಗ್ಲೀಷ್ ಸ್ಪೀಕಿಂಗ್ ಮತ್ತು ಸಾಫ್ಟ್ ಸ್ಕಿಲ್ ಟ್ರೇನಿಂಗ್ ಕೋರ್ಸ್‌ಗಳನ್ನು ನೀಡಲಿದೆ. ಇಂಗ್ಲೀಷ್ ಭಾಷೆಗೆ ಸಂಬಂಧಿಸಿದಂತೆ ಈ ಕ್ಷೇತ್ರದ ಪರಿಣತರು ಈ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಇಂಗ್ಲೀಷ್ ವ್ಯಾಕರಣವನ್ನು ಒಳಗೊಂಡಿರುತ್ತದೆ. ಅಲ್ಲದೇ, ಉದ್ಯೋಗಶೀಲತೆಯ ಪ್ರಯತ್ನಗಳನ್ನು ಹೆಚ್ಚಿಸುವುದರ ಜತೆಗೆ ವೃತ್ತಿಪರತೆಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಿದೆ.

ಅಪ್‌ಸ್ಕಿಲ್‌ಯೂತ್ ಕಾರ್ಯಕ್ರಮ ಸಂಪೂರ್ಣವಾಗಿ ಉಚಿತವಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ೫ ಕೇಂದ್ರಗಳಲ್ಲಿ ಲಭ್ಯವಿದೆ. ದೇಶಾದ್ಯಂತ ೨೫ ಕ್ಕೂ ಹೆಚ್ಚು ಡಿಜಿಟಲ್ ಅಕಾಡೆಮಿ ಕೇಂದ್ರಗಳನ್ನು ಆರಂಭಿಸುವ ಉದ್ದೇಶವನ್ನು ಹೊಂದಿದೆ. ವಾಕ್ಯ ರಚನೆ, ಕಾಲಗಳು, ಮಾತಿನ ಭಾಗಗಳು, ಮಾಡಲ್ ವರ್ಬ್ಸ್, ಸ್ವಯಂ ಪರಿಚಯ ಭಾಷಣಗಳು ಮತ್ತು ಪ್ರಬಂಧಗಳನ್ನು ಬರೆಯುವುದು ಸೇರಿದಂತೆ ಇನ್ನೂ ಹಲವು ಬಗೆಯಲ್ಲಿ ತರಬೇತಿ ನೀಡಲಾಗುತ್ತದೆ.

ಇದಲ್ಲದೇ, ಇಂಗ್ಲೀಷ್ ಮಾತನಾಡುವುದು, ಬರೆಯುವುದು, ಓದುವುದು ಮತ್ತು ಕೇಳಿಸಿಕೊಳ್ಳುವ ಕುರಿತಾಗಿಯೂ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್ ಪೂರ್ಣಗೊಂಡ ನಂತರ ಅಪ್‌ಸ್ಕಿಲ್‌ಯೂತ್ ಅಭ್ಯರ್ಥಿಗಳಿಗೆ ಎರಡು ಪ್ರಮಾಣ ಪತ್ರಗಳನ್ನು ನೀಡಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಯೋಗೇಶ್ ಸಿ ತಿಳಿಸಿದ್ದಾರೆ.

Leave a Comment