ಉಚಿತ ಆರೋಗ್ಯ ತಪಾಸಣ ಶಿಬಿರ

ಚಾಮರಾಜನಗರ ಜೂ.13- ಮನುಷ್ಯನು ಆರೋಗ್ಯವಾಗಿರಲು ಗ್ರಾಮಗಳಲ್ಲಿ ನಡೆಸುವ ಆರೋಗ್ಯ ತಪಾಸಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಚಾರಗಳನ್ನು ತಿಳಿದುಕೊಳ್ಳುವುದು ಉತ್ತಮ ಎಂದು ಬಿಸಲ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪಲ್ಲವಿ ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ ಬಿಸಲ್ವಾಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆ ಮತ್ತು ಓ.ಡಿ.ಪಿ ಸಂಸ್ಥೆ ಹಾಗೂ ಬಿಸಲ್ವಾಡಿ ಗ್ರಾಮ ಪಂಚಾಯಿತ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರಕ್ಕೆ ಚಾಲನೆ ನೀಡಿ ಅವರು ಮತನಾಡಿದರು ಅಗತ್ಯ ವಿದ್ದ ರೋಗಿಗಳಿಗೆ ಆರೋಗ್ಯ ಕೇಂದ್ರ ದಿಂದ ಉಚಿತ ಜೌಷಧಿಗಳನ್ನು ವಿತರಿಸಲಾಗುವುದು. ಈ ತಪಾಸಣೆ ಶಿಬಿರದಲ್ಲಿ ರಕ್ತ ಪರಿಕ್ಷೆ ,ಬಿ.ಪಿ, ಶುಗರ್, ಮಹಿಳೆಯಾರಿಗೆ ಕ್ಯಾನ್ಸರ್ (ಸ್ತನ. ಗರ್ಭಕೋಶ ಕ್ಯಾನ್ಸರ್) ಪತ್ತೆ ತಪಾಸಣೆ ಹಾಗೂ ಸುಲು, ದಮ್ಮು, ಹಾಗೂ ಇನ್ನು ಮುಂತಾದ ರೋಗಗಳನ್ನು ತಪಾಸಣೆ ಮಾಡಿ ಉಚಿತವಾಗಿ ಚಿಕಿತ್ಸೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಓ.ಡಿ.ಪಿ ಸಂಸ್ಥೆಯ ತರಬೇತಿ ಸಂಯೋಜಕಿ ಯಮುನಾ ಮಾತನಾಡಿ ನಮ್ಮ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಗ್ರಾಮಗಳನ್ನು ಸ್ವಚ್ಚತೆಯಾಗಿ ಇಡುವುದರಿಂದ ರೋಗಗಳನ್ನು ದೂರ ವಿಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗಿರೀಶ್, ಪಿ.ಡಿ.ಓ ಚಿಕ್ಕಸಿದ್ದೇಗೌಡ, ವಲಯ ಸಂಯೋಕರು ಸಿದ್ದರಾಜು, ಸ್ಥಳಿಯ ಕಾರ್ಯಕರ್ತ ರವಿಕುಮಾರ್, ರಾಮಕೃಷ್ಣ, ಭಾಗ್ಯಲಕ್ಷ್ಮಿ, ಸರೋಜ, ಸಂಘದ ಪದಾಧಿಕಾರಿಗಳಾದ ಆರೋಗ್ಯಸ್ವಾಮಿ, ವೆಂಕಟರಾಜು, ಆಶಾ ಕಾರ್ಯಕರ್ತೆಯರಾದ ರಾಜಮ್ಮ, ನಾಗಮ್ಮ, ಮಂಜುಳ ಇವರುಗಳು ಸಹಕಾರ ನೀಡಿದರು.
ಆರೋಗ್ಯ ತಪಾಸಣ ಶಿಬಿರದಲ್ಲಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆ ವೈದ್ಯರುಗಳು ಶಿಬಿರವನ್ನು ಯಶಸ್ವಿಗೊಳಿಸಿದರು. 180ಕ್ಕು ಹೆಚ್ಚು ಜನರನ್ನು ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದರು.

Leave a Comment