ಉಗ್ರರ ಬೆದರಿಕೆ ನಡುವೆ ಕುಂಭ ಮೇಳಕ್ಕೆ ಸೇನಾ ಭದ್ರತೆ

ನವದೆಹಲಿ, ಆ. ೨೩- ಮುಂದಿನ ವರ್ಷ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಅರ್ಧ ಕುಂಭಮೇಳದಲ್ಲಿ ಸೇನಾ ಯೋಧರು ಭದ್ರತೆ ಒದಗಿಸುತ್ತಿದ್ದು, ಭಯೋತ್ಪಾದಕರ ಬೆದರಿಕೆ ನಡುವೆ ಸೇನಾ ಯೋಧರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.
ವಿಶ್ವದಲ್ಲಿ ಇದು ಅತಿದೊಡ್ಡ ಕುಂಭಮೇಳವಾಗಿದ್ದು, ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೇನಾ ಪಡೆ ಯೋಧರು ಬಿಗಿ ಭದ್ರತೆ ಒದಗಿಸಲಿದ್ದಾರೆ.
ಸೇನಾ ಪಡೆ ಸ್ಥಳೀಯ ನಾಗರಿಕ ಆಡಳಿತ, ಇಂಜಿನಿಯರ್‌ಗಳ ಸಹಕಾರದೊಂದಿಗೆ ಕುಂಭ ಮೇಳದ ಮೇಲೆ ಹದ್ದಿನ ಕಣ್ಣಿಡಲಿದೆ. ಕುಂಭ ಮೇಳಕ್ಕೆ ಭದ್ರತೆ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಭಯೋತ್ಪಾದಕರ ಬೆದರಿಕೆ ನಡುವೆಯೂ ಮೇಳಕ್ಕೆ ಬಿಗಿ ಭದ್ರತೆ ಒದಗಿಸಿ, ಎಚ್ಚರದಿಂದ ಕಾವಲು ಕಾಯಬೇಕಿದೆ ಎಂದು ಸೇನಾಪಡೆಯ ಭದ್ರತೆ ವಿಭಾಗದ ಮೂಲಗಳು ತಿಳಿಸಿವೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್‌ರವರು ನಿನ್ನೆ ಕುಂಭಮೇಳ ನಡೆಯುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Comment