ಉಗ್ರರಿಗೆ ಪಾಕ್ ಸ್ವರ್ಗ: ಅಮೇರಿಕ ಆತಂಕ

ವಾಷಿಂಗ್‌ಟನ್, ಆ. ೨೧- ಪಾಕಿಸ್ತಾನದಲ್ಲಿ ಭಯೋತ್ಪಾದಕರ ಘೋಷಣೆ ಮುಂದುವರೆದಿರುವುದನ್ನು ಗಂಭೀರವಾಗಿ ಗಮನಿಸಿರುವ ಅಮೆರಿಕಾ, ಅಂತಹ ಗುಂಪುಗಳ ವಿರುದ್ಧ ಕಠಿಣ ಕಾರ್ಯಾಚರಣೆಗೆ ಪಾಕಿಸ್ತಾನದ ಮೇಲೆ ಇನ್ನಷ್ಟು ಒತ್ತಡ ತರಲು ಮುಂದಾಗಿದೆ.

ಪಾಕಿಸ್ತಾನ ಭಯೋತ್ಪಾದಕರ ನಿಗ್ರಹ ಆ ಮೂಲಕ ಆಫ್ಘಾನಿಸ್ತಾನದಲ್ಲಿ ಸ್ಥಿರತೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ. ಆದರೆ ಪಾಕ್ ನೆಲೆಯಿಂದ ಕಾರ್ಯನಿರ್ವಹಿಸುವ ತಾಲಿಬಾನ್ ಮತ್ತು ಹಕ್ಕಾನಿ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನವನ್ನು ಸ್ವರ್ಗ ಸಮಾನ ಆಶ್ರಯ ತಾಣವನ್ನಾಗಿ ಮಾಡಿಕೊಂಡಿವೆ.

ತಾಲಿಬಾನಿಗಳನ್ನು ಪಾಕಿಸ್ತಾನದಿಂದ ಹೊರ ಹಾಕಲು ಅಥವಾ ಅವರನ್ನು ಸಂಧಾನದ ಟೇಬಲ್‌ಗೆ ಕರೆಯಲು ಪಾಕಿಸ್ತಾನವನ್ನು ಪದೇ ಪದೇ ಕೋರಲಾಗುತ್ತಿದ್ದರೂ ಪಾಕಿಸ್ತಾನ, ಉಗ್ರರರನ್ನು ಘೋಷಿಸುವ ತನ್ನ ಧೋರಣೆಯನ್ನು ಮುಂದುವರೆಸಿದೆ ಎಂದು ಅಮೆರಿಕಾದ ವಿದೇಶಾಂಗ ಇಲಾಖೆಯ ಉಪ ಕಾರ್ಯದರ್ಶಿ ಅಲೀಸ್ ವೆಲ್ಸ್ ಹೇಳಿದ್ದಾರೆ.

`ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ಖಾನ್, ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಗೊಳ್ಳುವುದಾಗಿ ಹೇಳಿದ್ದಾರೆ. ಅವರ ಈ ನಿಲುವನ್ನು ಅಮೆರಿಕಾ ಸ್ವಾಗತಿಸುತ್ತದೆ. ಆದರೆ, ನೆರೆ ರಾಷ್ಟ್ರಗಳಾದ ಆಫ್ಘಾನಿಸ್ತಾನ ಮತ್ತು ಭಾರತದೊಂದಿಗೆ ಅದರ ಸಂಬಂಧಿಗಳು ಸುಧಾರಿಸಲು ಅಡ್ಡಿಯಾಗಿರುವ ಭಯೋತ್ಪಾದಕ ರಫ್ತು ಕ್ರಮ ನಿಲ್ಲಬೇಕು. ಅವರ ನಿಗ್ರಹ ಕಾರ್ಯಕ್ಕೆ ಪಾಕಿಸ್ತಾನ ನಿರ್ಣಯ ಈ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಅಂತರರಾಷ್ಟ್ರೀಯ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮುಂದಿನ ತಿಂಗಳು 27ರಿಂದ 28ರ ವರೆಗೆ ಹನೋಯ್‌ನಲ್ಲಿ ನಡೆಯುವ ಇಂಡಿಯನ್ ಓಷನ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸುದ್ಧಿಗೋಷ್ಠಿಲ್ಲಿ ಮಾತನಾಡುತ್ತಿದ್ದ ಅಲೀಸ್ ವೆಲ್ಸ್, ಆಫ್ಘಾನಿಸ್ತಾನದಲ್ಲಿಯ ಶಾಂತಿ ಸ್ಥಿರತೆಯಲ್ಲಿ ಭಾರತ ಸಕ್ರಿಯವಾಗಿ ತೊಡಗಿಕೊಂಡಿರುವುದನ್ನು ಸ್ವಾಗತಿಸಿದ್ದಾರೆ. 2022ರವರೆಗೆ ಆಫ್ಘಾನಿಸ್ತಾನದ ಸ್ಥಿರತೆ ನಿರ್ಮಾಣ ಕಾರ್ಯದಲ್ಲಿ 3 ಶತಕೋಟಿ ಡಾಲರ್ ತೊಡಗಿಸುವ ಭಾರತದ ಬದ್ಧತೆಯನ್ನು ಅಮೆರಿಕಾ ಸ್ವಾಗತಿಸಿದೆ ಎಂದಿದ್ದಾರೆ. ಆಫ್ಘಾನಿಸ್ತಾನದ ಸ್ಥಿರತೆ ಮತ್ತು ಭದ್ರತೆ ವಿಷಯದಲ್ಲಿ ಭಾರತದಂತೆ, ಪಾಕಿಸ್ತಾನವೂ ಪ್ರಮುಖ ಪಾತ್ರ ವಹಿಸಬಹುದಾಗಿದೆ. ಆದರೆ ಪಾಕಿಸ್ತಾನ ಆ ನಿಟ್ಟಿನಲ್ಲಿ ತಾನು ನೀಡಿದ ವಚನವನ್ನು ಪಾಲಿಸುತ್ತಿಲ್ಲ. ಹೀಗಾಗಿ ಅಮೆರಿಕಾ ಮತ್ತೊಮ್ಮ ಆ ಕುರಿತಂತೆ ಆಗ್ರಹಿಸುತ್ತದೆ ಎಂದಿದ್ದಾರೆ.

Leave a Comment