ಈ ವಾರ 8 ಚಿತ್ರ ಬಿಡುಗಡೆ

 ಕತ್ತಲಕೋಣೆ

ಸೈನಿಕನಾಗ ಬಯಸುವ ಹುಡುಗನ ಆಸೆ ಕಮರಿ ಹೋಗುವುದು. ವ್ಯವಸ್ಥೆ ಆತನ ಕನಸನ್ನೆ ದಾಳವಾಗಿಸಿಕೊಂಡು ಯಾವ ರೀತಿ ಸೈಕೋ ಆಗಿ ಪರಿವರ್ತನೆ  ಮಾಡುವಂತೆ ಆಗುತ್ತದೆ ಎನ್ನುವ ಎಳೆಯನ್ನೊಳಗೊಂಡ  ಸೈಕಲಾಜಿಕಲ್ ಹಾರರ್, ಥ್ರಿಲ್ಲರ್ ಚಿತ್ರ ’ಕತ್ತಲ ಕೋಣೆ’ ಈ ವಾರ ಬಿಡುಗಡೆಯಾಗಿದೆ.

ಈ ವಾರ ‘ಹೊಸ ಕ್ಲೈಮ್ಯಾಕ್ಸ್‘, ವಂದನ , ಅತಂತ್ರ  ಸೇರಿ  ಎಂಟು 

ಸಿನಿಮಾಗಳು  ತೆರೆಗೆ ಬಂದಿವೆ.  ಅದರಲ್ಲಿ ಜೊಳ್ಳು

ಯಾವುದು ಗಟ್ಟಿಯಾವುದು ಎನ್ನುವುದು ಸದ್ಯದಲ್ಲಿಯೇ ಗೊತ್ತಾಗಲಿದೆ.

ಕತ್ತಲ ಕೋಣೆ’ ಶೀರ್ಷಿಕೆಯಡಿ ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎನ್ನುವ ಅಡಿಬರಹವಿದೆ.ಸಿನಿಮಾದಲ್ಲಿ ಒಂದು ಕುಟುಂಬದ ಐಷಾರಾಮಿ ಜೀವನ,  ವಿದ್ಯಾರ್ಥಿಯ ಕನಸು, ಹೆಚ್ಚಾಗಿ ಪತ್ರಿಕೋದ್ಯಮದ ಎರಡು ಮುಖಗಳು, ವ್ಯವಸ್ಥೆಗಳನ್ನು ದುಷ್ಟ ಶಕ್ತಿಗಳು ಹೇಗೆ ಬಳಸಿಕೊಳ್ಳುತ್ತವೆ. ಇವೆಲ್ಲವು  ವಿಚಿತ್ರ ಘಟನೆಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ.

೧೯೯೩ರಂದು ಮಲೆನಾಡಿನ ತಗ್ಗು ಪ್ರದೇಶದಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡಿದೆ. ಕಳೆದ ಹದಿನೈದು ವರ್ಷಗಳಿಂದ ಉಡುಪಿ ಸ್ಥಳೀಯ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಸಂದೇಶ್‌ಶೆಟ್ಟಿಅಜ್ರಿ  ಕತೆ ಬರೆಯಲು ಎರಡು ವರ್ಷ ಸಮಯ ತೆಗೆದುಕೊಂಡಿದ್ದಾರೆ. ಇದರ ಅನುಭವದಿಂದ ಚಿತ್ರಕತೆ, ಸಂಭಾಷಣೆ, ನಿರ್ದೇಶನ ಜೊತೆಗೆ ನಾಯಕನಾಗಿ ರಿರ್ಪೋಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಹತ್ತು ನಿಮಿಷದ ಕ್ಲೈಮಾಕ್ಸ್‌ಗೆ ಕಾಡು, ಚಳಿಯಲ್ಲಿ ಒಳಉಡುಪು ಮಾತ್ರ ಧರಿಸಿಕೊಂಡು ಮೂರು ದಿವಸ ಶೂಟಿಂಗ್ ಮಾಡಿದ್ದಾರಂತೆ. ಮಂಗಳೂರಿನ ಮಾಡೆಲ್ ಹಳ್ಳಿಹುಡುಗಿ ಹಾಗೂ ಪತ್ರಕರ್ತೆಯಾಗಿ ಹನ್ನಿಕಾರಾವ್ ನಾಯಕಿಯಾಗಿ ಮೊದಲ ಚಿತ್ರ. ಇವರೊಂದಿಗೆ ವೈಶಾಖ್‌ಅಮೀನ್, ರತಿಕ್‌ಮುರುಡೇಶ್ವರ್, ಅಶ್ವಥ್‌ಆಚಾರ್ಯ, ಶ್ರೀನಿವಾಸ್‌ಪೈ, ಮಂಜುನಾಥ್‌ಸಾಲಿಯಾನ್, ನಾಗರಾಜ್‌ರಾವ್ ನಟಿಸಿದ್ದಾರೆ.

ಸರಿಗಮಪ ವಿಜೇತ ಮಹಬೂಬ್‌ಸಾಬ್  ಗೀತೆಗೆ ಕಂಠದಾನ ಮತ್ತು   ಚಿತ್ರದ ಪರಿಚಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಪಶ್ವಿಮಘಟ್ಟಗಳ ದಟ್ಟವಾದ ಕಾಡಿನಲ್ಲಿ ಹೆಚ್ಚು ರಾತ್ರಿವೇಳೆ ಚಿತ್ರೀಕರಣ ನಡೆಸಿರುವುದು ವಿಶೇಷ. ಅಶೋಕ್‌ನೀಲಾವರ-ನಾಗರಾಜ್‌ರಾವ್ ಸಾಹಿತ್ಯದ  ಗೀತೆಗಳಿಗೆ  ಅರುಣ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ.  ಪುರುಷೋತ್ತಮ್‌ಅಮೀನ್ ನಿರ್ಮಾಪಕರು. ಇವರೊಂದಿಗೆ  ಶ್ರೀನಿವಾಸ ಶಿವಮೊಗ್ಗ ಪಾಲುದಾರರಾಗಿದ್ದಾರೆ.

abhisarike_145

ಅಭಿಸಾರಿಕೆ

ಮಧುಸೂಧನ್ ನಿರ್ದೇಶನದ ಅಭಿಸಾರಿಕೆ ಚಿತ್ರ ಈ ವಾರಾ ೮೦ಕ್ಕೂ ಅಧಿಕ ಚಿತ್ರಮಂದಿರದಲ್ಲಿ ತೆರೆಗೆ ಬಂದಿದೆ. ಪ್ರಶಾಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸೋನಾಲ್ ಮತ್ತು ತೇಜುಗೌಡ ನಾಯಕ ನಾಯಕಿಯರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಣ್ ಬಿ. ಕೃಪಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ನಿರ್ದೇಶಕ ಪ್ರಶಾಂತ್ ಮಾತನಾಡಿ ಕಳೆದ ಫೆಬ್ರವರಿಯಲ್ಲಿಯೇ ಚಿತ್ರವನ್ನು ಬಿಡುಗಡೆಗೆ ಸಿದ್ದವಾಗಿತ್ತು. ಚಿತ್ರದಲ್ಲಿನ ಕಂಪ್ಯೂಟರ್ ಗ್ರಾಫಿಕ್ ಕೆಲಸ ವಿಳಂಬವಾಗಿಯಿತು. ಈ ವಾರಾ ರಾಜ್ಯಾದ್ಯಂತ ತೆರೆಗೆ ಬಂದಿದೆ.ಒಳ್ಳೆಯ ಚಿತ್ರವಾಗಲಿದೆ ಎಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡಿದ್ದಾರೆ.

ನಾಯಕಿ ಸೋನಾಲ್,ಮೊದಲನೆ ಚಿತ್ರ. ಚೆನ್ನಾಗಿ ಮೂಡಿ ಬಂದಿದೆ. ಎಂದರೆ ನಾಯಕ ತೇಜ್ ಗೌಡ ಕೂಡ ಉತ್ತಮ ಚಿತ್ರ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.ಮಾರ್‍ಸ್ ಸುರೇಶ್ ೮೦ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ತೆರೆಗೆ ತಂದಿದ್ದಾರೆ.

puttaraju_150

ಪುಟ್ಟರಾಜ್ ಲವ್ವರ್ ಆಫ್ ಶಶಿಕಲಾ

ಸಹದೇವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅಪ್ಪಟ ಗ್ರಾಮೀಣ ಹಿನ್ನೆಲೆ ಇರುವ “ಪುಟ್ಟರಾಜ್ ಲವ್ವರ್ ಆಫ್ ಶಶಿಕಲಾ ಚಿತ್ರ ಈವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಹೈಸ್ಕೂಲಿ ದಿನಗಳನ್ನು ನೆನಪಿಸುವ ಮತ್ತು ಆ ಕಾಲಘಟ್ಟಕ್ಕೆ ಕರೆದೊಯ್ಯುವ ಚಿತ್ರ ಮಾಡಲಾಗಿದೆ. ಚಿತ್ರ ಎಲ್ಲಿಗೂ ಇಷ್ಟವಾಗಲಿದೆ ಎಂದು ಹೇಳಿದರು ಸಹದೇವ್.

ಚಿತ್ರದಲ್ಲಿ ಅಮಿತ್, ಜಯಶ್ರೀ ಆರಾಧ್ಯ ಮತ್ತು ಸುಶ್ಮಿತಾ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸದಭಿರುಚಿಯ ನೆಲೆಗಟ್ಟಿನಲ್ಲಿ ಚಿತ್ರವನ್ನು ಮಾಡಲಾಗಿದೆ. ವಿದ್ಯಾರ್ಥಿ ಹಿನ್ನೆಲೆಯಲ್ಲಿ ಚಿತ್ರ ಮಾಡಲಾಗಿದೆ. ಚಿತ್ರ ಎಲ್ಲರಿಗೂ ಹಿಡಿಸಲಿದೆ ಎನ್ನುವ ವಿಶ್ವಾಸ ನಿರ್ದೇಶಕರದ್ದು. ಚಿತ್ರದಲ್ಲಿ ಡಿಂಗ್ರಿ ನರೇಶ್, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನನ್ನದು ಸನ್ನಿ ಲಿಯೋನ್ ಅಭಿಮಾನಿಯ ಪಾತ್ರ. ನಾಯಕನಿಗೆ ಬೆನ್ನೆಲುಬಾಗಿ ನಿಂತಿರುತ್ತೇನೆ, ಒಳ್ಳೆಯ ಚಿತ್ರವಾಗಲಿದೆ ಎಂದು ಹೇಳಿಕೊಂಡರು.

ಲೌಡ್ ಸ್ಪೀಕರ್ 

ಡಾ||ಕೆ.ರಾಜು  ನಿರ್ಮಿಸಿರುವ ‘ಲೌಡ್ ಸ್ಪೀಕರ್‘ ಚಿತ್ರ  ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಿವತೇಜಸ್ ನಿರ್ದೇಶಿಸಿರುವ ಚಿತ್ರಕ್ಕೆ ಹರ್ಷವರ್ಧನ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ  ಚಿತ್ರದ ತಾರಾಬಳಗದಲ್ಲಿ ಭಾಸ್ಕರ್ ನೀನಾಸಂ, ಕಾವ್ಯಾ ಶಾ, ಸುಮಂತ್ ಭಟ್, ದಿಶಾ ದಿನಕರ್, ರಂಗಾಯಣ ರಘು, ದತ್ತಣ್ಣ, ಅಭಿಶೇಕ್ ಮುಂತಾದವರಿದ್ದಾರೆ.

hh4a0374ಪಾದರಸ 

“ಪಾದರಸ” ಚಿತ್ರ  ರಾಜ್ಯಾದ್ಯಂತ  ಬಿಡುಗಡೆಯಾಗಿದೆ. ಹೃಷಿಕೇಶ್ ಜಂಬಗಿ ನಿರ್ದೇಶನದ ಚಿತ್ರಕ್ಕೆ ಎ.ಟಿ ರವೀಶ್ ಸಂಗೀತವಿದೆ.  ತಾರಾಗಣದಲ್ಲಿ – ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ,  ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್, ಮುಂತಾದವರಿದ್ದಾರೆ.

Leave a Comment