ಈ ವಾರ ಬೆಳ್ಳಿತೆರೆಯ ಮೇಲೆ ಮೂವರು ಸೋದರಿಯರ `ಯಾನ’

ಬೆಂಗಳೂರು, ಜು 9 -ಖ್ಯಾತ ನಟಿ, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದಲ್ಲಿ ಅವರ ಮೂವರು ಪುತ್ರಿಯರ ಚೊಚ್ಚಲ ಚಿತ್ರ ‘ಯಾನ’  ಈ ವಾರ ತೆರೆಗೆ ಬರುತ್ತಿದೆ ಚಿತ್ರೋದ್ಯಮದದಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ಮೂರನೇ ತಲೆಮಾರಿನ ಮೂವರು ಸೋದರಿಯರು ಒಟ್ಟಿಗೆ ನಿರ್ಮಿಸಿ, ನಟಿಸುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ ‘ಯಾನ’ ಪಾತ್ರವಾಗಿದೆ

 i entertainment  ಹಾಗೂ acme ಮೂವೀಸ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಜೈಜಗದೀಶ್ ಅವರು ಅರ್ಪಿಸಿ, ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್, ವೈಭವಿ, ವೈನಿಧಿ, ವೈಸಿರಿ ಅವರು ನಿರ್ಮಿಸಿರುವ `ಯಾನ` ಚಿತ್ರದ ಟ್ರೇಲರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ

ಮೂವರು ಹುಡುಗಿಯರ ಬದುಕಿನಲ್ಲಿ ಬಂದು ಹೋಗಬಹುದಾದ ಘಟನೆಗಳೇ ‘ಯಾನ’ ಚಿತ್ರದ ತಿರುಳು    ವಿಜಯಲಕ್ಷ್ಮೀಸಿಂಗ್ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ  ವಿಜಯಲಕ್ಷ್ಮೀಸಿಂಗ್, ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ ಸುನಿ ಹಾಗೂ ಅಭಿಷೇಕ್ ಸಂಭಾಷಣೆ ಜೋಶ್ವಾ ಶ್ರೀಧರ್ ಸಂಗೀತ ಸಂಯೋಜನೆ ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿರುವ ಚಿತ್ರದ ತಾರಾಬಳಗದಲ್ಲಿ ವೈಭವಿ, ವೈನಿಧಿ, ವೈಸಿರಿ, ಚಕ್ರವರ್ತಿ, ಸುಮುಖ, ಅಭಿಷೇಕ್, ಅನಂತನಾಗ್, ಸುಹಾಸಿನಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರಿದ್ದಾರೆ.

Leave a Comment