ಈ ವಾರ ಬಿಡುಗಡೆ

ಒಂಥರ ಬಣ್ಣಗಳು

ಯೋಗೇಶ್ ಬಿ ದೊಡ್ಡಿ ನಿರ್ಮಿಸಿರುವ ‘ಒಂಥರ ಬಣ್ಣಗಳು‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸುನೀಲ್ ಭೀಮರಾವ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಮನೋಹರ್ ಜೋಶಿ  ಛಾಯಾಗ್ರಹಣವಿದೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಭರತ್ ಬಿ ಜೆ ಸಂಗೀತ ಸಂಗೀತ ನೀಡಿದ್ದಾರೆ.

ತಾರಾಬಳಗದಲ್ಲಿ ಕಿರಣ್ ಶ್ರೀನಿವಾಸ್, ಹಿತಾ ಚಂದ್ರಶೇಖರ್, ಸೋನು ಗೌಡ, ಪ್ರತಾಪ್ ನಾರಾಯಣ್, ಪ್ರವೀಣ್ ಜೈನ್, ಲೋಹಿತಾಶ್ವ, ಶರತ್ ಲೋಹಿತಾಶ್ವ, ದತ್ತಣ್ಣ, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಸುಚೀಂದ್ರಪ್ರಸಾದ್, ಆಶಾಲತ, ಸುಂದರ್, ವೀಣಾಸುಂದರ್, ಮಾಲತಿ ಸರ್ ದೇಶಪಾಂಡೆ, ಅರುಣ ಬಾಲರಾಜ್, ಗೋವಿಂದೇ ಗೌಡ, ಕೆಂಪೇಗೌಡ ಮುಂತಾದವರಿದ್ದಾರೆ.

img_6674ಅಯೋಗ್ಯ  

ಮಂಡ್ಯ ಸೊಗಡಿನ ಕೂತೂಹಲಕಾರಿ ಕತೆಯುಳ್ಳ ’ಅಯೋಗ್ಯ ಚಿತ್ರ ಈ ವಾರ ಬಿಡುಗಡೆಯಾಗಿದೆ.ಚಿತ್ರ ತೆರೆಗೆ ಬರುವ ಮುನ್ನ ಕಳೆದ ಶನಿವಾರ ಚಿತ್ರದ ಹಾಡುಗಳ ಸಿಡಿಯನ್ನು ಬಿಡುಗಡೆ ಮಾಡಲಾಯಿತು ಈ ವೇಳೆ ಮಾತನಾಡಿದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್  ಗ್ರಾಮೀಣ ಹಿನ್ನಲೆಯ ಕತೆಯಲ್ಲಿ ಹಾಸ್ಯ, ಉತ್ತಮ ಸಂದೇಶ, ಮನರಂಜನೆ ಎಲ್ಲವು ಸೊಗಸಾಗಿ ಮೂಡಿಬಂದಿದೆ ಎನ್ನುತ್ತಾರೆ.

ಚಿತ್ರ ನೋಡಿದ ಸೆನ್ಸಾರ್ ಸದಸ್ಯರೊಬ್ಬರು ಬೆನ್ನುತಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಇದಕ್ಕೆಲ್ಲಾ ನೀನಾಸಂಸತೀಶ್, ರಚಿತಾರಾಮ್. ಮಹೇಶ್‌ಕುಮಾರ್ ಕಾರಣಿಭೂತರಾಗಿದ್ದಾರೆ. ಕಾಪೋರೇಟ್ ಸ್ಟೈಲ್‌ನಲ್ಲಿ ೨೫೦+ ಚಿತ್ರಮಂದಿರ ಹಾಗೂ ವಿದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಿಂದ ಎರಡನೆ ಚಿತ್ರವಾಗಿದ್ದು, ಮುಂದೆ ಬೀರ್‌ಬಲ್, ಜಾನ್‌ಸೀನಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬರಲಿದೆ ಎಂದು ವಿವರ ನೀಡಿದರು.

ಟೈಟಲ್ ಇಷ್ಟವಾಗಿ, ಕೇರ್‌ಲೆಸ್ ಆಗಿ ಕತೆ ಕೇಳುತ್ತಾ, ಕೊನೆಗೆ  ಖುಷಿಯಿಂದ ಉರುಳಾಡಿದೆ. ಮೊದಲ ನಿರ್ಮಾಪಕರು ಮಹೂರ್ತ ಹಿಂದಿನ ದಿನದಂದು ಹಿಂದೆ ಸರಿದಾಗ ದೇವರಂತೆ  ಬಂದು ಕೊರತೆ ಮಾಡದಂತೆ ಚಿತ್ರ ಮುಗಿಸಿದ್ದಾರೆ. ಆತ್ಮಹತ್ಯೆ ಹಂತಕ್ಕೆ ಹೋಗಿದ್ದ ಗೆಳೆಯ ಮಹೇಶ್‌ಕುಮಾರ್‌ಗೆ  ಧೈರ್ಯ ಹೇಳಲಾಗಿತ್ತು.ರಚಿತರಾಮ್ ನಾಯಕಿಯಾಗಿ ಬಂದದ್ದು ಅಯೋಗ್ಯನಿಗೆ ಕಳೆ ಬಂದಿತು  ಎಂದರು ನೀನಾಸಂಸತೀಶ್.

ಅಂಬರೀಷ್, ಪುನೀತ್, ಶ್ರೀಮುರಳಿ, ಧ್ರುವಸರ್ಜಾ ತಲಾ ಒಂದು ಗೀತೆಯನ್ನು ಬಿಡುಗಡೆ ಮಾಡಿರುವುದಕ್ಕೆ ಥ್ಯಾಂಕ್ಸ್, ಮಂಡ್ಯಾ ಭಾಷೆಯಲ್ಲಿ ಡಬ್ ಮಾಡಿದ್ದೇನೆ. ಏನಮ್ಮಿ ಗೀತೆ ಹಿಟ್ ಆಗಿರುವುದು ಪ್ಲಸ್ ಪಾಯಿಂಟ್. ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಾಗ ಸತೀಶ್ ಹಾಗೆ, ಹೀಗೆ ಎಂದು ಹೇಳಿದ್ದರು. ಎಲ್ಲಾ  ಸ್ಟಾರ್ ಕಲಾವಿದರ ಜೊತೆ ನಟಿಸಿದ್ದೇನೆ. ಅವರುಗಳು ಎಲ್ಲಿಯೂ  ಬಿಲ್ಡ್‌ಪ್ ತೋರಿಸಿಲ್ಲ,ಆತ್ಮಹತ್ಯೆ ಒಂದೇ ಪರಿಹಾರವಲ್ಲ.ಇನ್ನು ಮುಂದೆ  ಜೀವನದಲ್ಲಿ  ಈ ಪದ ಬಳಸಬಾರದೆಂದು ತಿಳಿವಳಿಕೆ ಹೇಳಿದ್ದು  ರಚಿತರಾಮ್.

ಕೇವಲ ೩೦ ದಿನದಲ್ಲಿ ೫೬ ಲಕ್ಷ ಜನರು ವೀಕ್ಷಣೆ ಮಾಡಿರುವುದು  ರೆಕಾರ್ಡ್ ಅಗಿದೆ ಎಂದು ಆನಂದ್ ಆಡಿಯೋದ ಆನಂದ್ ಹೇಳಿದರು. ಚಿತ್ರರಂಗದಲ್ಲಿ ಆಶ್ರಯ, ವಿದ್ಯೆ, ಅನ್ನ ನೀಡಿದ ಭಟ್ಟರು, ಸೂರಿ ಅವರ ಆರ್ಶಿವಾದದಿಂದ  ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಎಲ್ಲಾ ಪಾತ್ರಗಳು ಚೆನ್ನಾಗಿ ಬಂದಿವೆ. ನಿರ್ಮಾಪಕರು ನನ್ನ ದಾರಿಗೆ ದೇವರಾಗಿ ಬಂದರು ಎಂದು  ಭಾವುಕರಾದರು ನಿರ್ದೇಶಕ ಎಸ್.ಮಹೇಶ್‌ಕುಮಾರ್.

poster_frames-8023731

ದಿವಂಗತ  ಮಂಜುನಾಥನ ಗೆಳೆಯರು

ಎನ್.ಡಿ ಅರುಣ್ ಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ದಿವಂಗತ ಮಂಜುನಾಥನ ಗೆಳೆಯರು ಬಿಡುಗಡೆಯಾಗಿದೆ. ಐದು ಜನ ಇಂಜಿನಿಯರಿಂಗ್ ಕಾಲೇಜ್ ಸ್ನೇಹಿತರು ಬಹಳ ವರ್ಷಗಳ ನಂತರ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸೇರುವುದು ಒಂದು ಪೊಲೀಸ್ ಸ್ಟೇಷನ್‌ನಲ್ಲಿ ಆ ಸಂದರ್ಭ ಸೃಷ್ಟಿಯಾಗುವುದು ಏಕೆ ಮತ್ತು ಹೇಗೆ ಎಂಬ ಕಥಾಹಂದರವೊಂದಿದೆ.

ಮೋಹಮದ್ ಅಮಿನ್ ಛಾಯಾಗ್ರಹಣ, ವಿನಯ್‌ಕುಮಾರ್ ಸಂಗೀತವಿದೆ.ತಾರಾಬಳಗದಲ್ಲಿ ರುದ್ರಪ್ರಯಾಗ್, ಶೀತಲ್ ಪಾಂಡ್ಯ, ಶಂಕರ್ ಮೂರ್ತಿ, ರವಿಪೂಜಾರ್, ಮೋಹನ್ ದಾಸ್, ಸುಂಗಾರಿ ನಾಗರಾಜ್, ಸತ್ಯಜಿತ್, ನವೀನ್, ಜ್ಯೋತಿ ಮೂರೂರು, ಪ್ರಭಾರಕರ್ ರಾವ್ ಮತ್ತಿತರಿದ್ದರೆ.

Leave a Comment