ಈ ವಾರ ತೆರೆಗೆ : ಗಲ್ಲಿ ಬೇಕರಿ

ಎಂ.ಎಂ.ನಿರ್ಮಾಣದ “ಗಲ್ಲಿ ಬೇಕರಿ”  ರಾಜ್ಯಾದ್ಯಂತ ಬಿಡುಗಡೆಯಾಗಿದೆ. ವಿ.ಆರ್.ಕೆ. ರಾಧಾಕೃಷ್ಣನ್ ನಿರ್ದೇಶನದ ಚಿತ್ರಕ್ಕೆ ಛಾಯಾಗ್ರಹಣ -ರಮೇಶ್ ಕೊಯಿರಾ, ಸಂಗೀತ – ಸುನಾದ್ ಗೌತಮ್, ತಾರಾಗಣದಲ್ಲಿ – ಸಂತೋಷ್‌ಕಿರಣ, ಪ್ರಜ್ವಲ್ ಪೂವಯ್ಯ, ಆರ್ಯನ್,  ಉಗ್ರಂ ರೆಡ್ಡಿ, ಸೂರ್ಯ, ರಮೇಶ್ ಭಟ್, ಸುಚೀಂದ್ರ ಪ್ರಸಾದ್, ಯಮುನಾ ಶ್ರೀನಿಧಿ, ಪ್ರದೀಪ್ ಮುಂತಾದವರಿದ್ದಾರೆ.

manasinamareyalli

ಮನಸಿನ ಮರೆಯಲಿ

ಆಸ್ಕರ್, ಮಿಸ್ ಮಲ್ಲಿಗೆಯಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ನಿರ್ದೇಶನದ ಮನಸಿನ ಮರೆಯಲಿ ಈ ವಾರ ಬಿಡುಗಡೆಯಾಗಿದೆ.

ಥ್ರೀಲ್ಲರ್, ರೋಮ್ಯಾಂಟಿಕ್ ಸಿನಿಮಾಗಳನ್ನೇ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಇದೇ ಮೊದಲ ಬಾರಿಗೆ ಒಂದು ಅಪ್ಪಟ ಪ್ರೇಮ ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಿಶೋರ್ ಯಾದವ್ ಹಾಗೂ ದಿವ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ  ಚಿತ್ರಕ್ಕೆ ಕಿಂಗ್ ಲಿಂಗರಾಜು ಬಂಡವಾಳ ಹಾಕಿದ್ದಾರೆ

ಶಬೀನಾ ಅರಾ ಸಹ ನಿರ್ಮಾಪಕಿ. ಸಾಯಿರಾಂ ಚಿತ್ರಕತೆ. ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ಕೃಷ್ಣ ಲವ್ ಸ್ಟೋರಿ ನನ್ನ ಮೊದಲ ಪ್ರಯತ್ನ ಈವರೆಗೆ ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗಳನ್ನೆ ಮಾಡಿದ್ದ ನಾನು ಹೊಸದಾಗಿ ಟ್ರೈ ಮಾಡಿದ್ದೇನೆ. ಇಂತಹ ಸಿನಿಮಾಗಳಲ್ಲಿ ಗಿಮಿಕ್ ಮಾಡಲು ಸಾದ್ಯವಿಲ, ನೈಜತೆಗೆ ಹತ್ತಿರವಿದ್ದರೆ ಜನ ಪಾತ್ರಗಳಿಗೆ ರಿಲೇಟ್ ಮಾಡಿಕೊಳ್ಳುತ್ತಾರೆ.ಟೈಟಲ್ ಹಿಂದೆಯೇ ಅಂದುಕೊಂಡಿದ್ದೇ ಅದು ಈ ಕಥೆಗೆ ಸೂಟ್ ಆಯಿತು.ಒಂದು ಪ್ರೀತಿಯನ್ನು ಹಲವಾರು ಸಂದಂರ್ಭಗಳು ಭಾರ ಮಾಡುತ್ತವೆ ಸಣ್ಣದೊಂದು ಇಗೋ, ಕ್ಲಾಶ್‌ನಿಂದ ನಾಯಕ ನಾಯಕಿ ಇಬ್ಬರೂ ಬೇರೆಯಾಗುತ್ತಾರೆ ಎಂದರು.

ಕಿಶೋರ್ ಮಾತಾನಾಡಿ ಇದು ನನ್ನ ಪಸ್ಟ್ ಸಿನಿಮಾ ಕಮರ್ಷಿಯಲ್ ಎಲಿಮೆಂಟ್ಸ್ ಇರುವಂತಹ ಲವ್‌ಸ್ಟೋರಿ, ಪ್ರೀತಿ ಬಗ್ಗೆ ಯಾವುದೇ ನಂಬಿಕೆ ಇರದ ನಾಯಕ ಒಬ್ಬ ಹುಡುಗಿಯ ವಿಷಯದಲ್ಲಿ ಹೇಗೆ ನಂಬಿಕೆ ಉಳಿಸಿಕೊಳ್ಳುತ್ತಾನೆ ಎಂಬುದೇ ಈ ಚಿತ್ರದ ಎಳೆ ಎಂದು ಹೇಳಿದರು.

ನಿರ್ಮಾಪಕ ಕಿಂಗ್ ಲಿಂಗರಾಜು ಮಾತಾನಾಡಿ ಎಲ್ಲರೂ ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರಿಂದ ಸಿನಿಮಾ ಒಳ್ಳೆ ಸಮಯದಲ್ಲಿ ಹೊರಬರುತ್ತಿದೆ ಎಂದರೆ ಖಳನಟನಾಗಿ ಕಾಣಿಸಿದ್ದ ವರ್ಧನ ಪಾತ್ರದ ಬಗ್ಗೆ ವಿವರ ನೀಡಿದರು.

mla

ಎಂ ಎಲ್ ಎ

ವೆಂಕಟೇಶ್ ರೆಡ್ಡಿ ನಿರ್ಮಿಸಿರುವ ‘ಎಂ ಎಲ್ ಎ‘ ಚಿತ್ರ ತೆರೆಗೆ ಬಂದಿದೆ. ಮೌರ್ಯ ನಿರ್ದೇಶಿಸಿರುವ ಚಿತ್ರದಲ್ಲಿ  ಪ್ರಥಮ್,.ಸೋನಾಲ್ ಮಾಂಟೆರೊ ನಾಯಕ,ನಾಯಕಿ. ಸ್ಪರ್ಷ ರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು  ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಂಸುಬ್ರಮಣ್ಯ ಸಂಗೀತ ನಿರ್ದೇಶನ,ಕೃಷ್ಣಸಾರಥಿ ಛಾಯಾಗ್ರಹಣವಿದೆ.

ಜಗತ್ ಕಿಲಾಡಿ

ಲಯನ್ ಆರ್ ರಮೇಶ್‌ಬಾಬು ನಿರ್ಮಿಸಿರುವ ‘ಜಗತ್ ಕಿಲಾಡಿ’ ತೆರೆಗೆ ಬಂದಿದೆ. ಧೀರೇಂದ್ರ ನಿರ್ದೇಶಿಸಿರುವ ಸಿನಿಟೆಕ್ ಸೂರಿ ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತವಿದೆ. ನಿರಂಜನ್‌ಕುಮಾರ್ ಶೆಟ್ಟಿ  ಅಮಿತಾ ಕುಲಾಳ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಮುಂತಾದವರಿದ್ದಾರೆ.

Leave a Comment