ಈ ವರ್ಷ ಪ್ರವಾಹಗಳಿಗೆ ೯೯೩ ಮಂದಿ ಬಲಿ

ನವದೆಹಲಿ,ಆ.೨೭- ದೇಶದಲ್ಲಿ ಈ ವರ್ಷ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ, ಕೇರಳ ಸೇರಿದಂತೆ ಬರೋಬ್ಬರಿ ೯೯೩ ಮಂದಿ ಅಸುನೀಗಿದ್ದು, ೭೦ ಲಕ್ಷಕ್ಕೂ ಅಧಿಕ ಮಂದಿಗೆ ಪ್ರವಾಹದ ಬಿಸಿತಟ್ಟಿದೆ, ಅಲ್ಲದೇ, ೧೭ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ ಎಂದು ಗೃಹ ಸಚಿವಾಲಯದ ನಿರ್ವಹಣಾ ವಿಭಾಗ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳ ಮಾತ್ರವಲ್ಲದೇ, ಪ್ರವಾಹ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕರ್ನಾಟಕದಲ್ಲೂ ಪ್ರವಾಹ ಅಬ್ಬರಿಸಿದೆ. ಆದರೆ ದೇಶದಲ್ಲೇ ಕೇರಳದಲ್ಲೇ ಅತೀ ಹೆಚ್ಚು ಸಾವು-ನೋವು ಸಂಭವಿಸಿದೆ.

ಪ್ರವಾಹದಿಂದಾಗಿ ಕೇರಳದಲ್ಲಿ ೪೦೦ ಮಂದಿ ಸಾವು ಸಂಭವಿಸಿ ದಾಖಲೆ ನಿರ್ಮಿಸಿದರೆ, ಉತ್ತರಪ್ರದೇಶದಲ್ಲಿ ೨೦೪ ಸಾವು, ಪಶ್ಚಿಮ ಬಂಗಾಳದಲ್ಲಿ ೧೯೫, ಅಸ್ಸಾಂ ೪೬ ಮತ್ತು ಕರ್ನಾಟಕ ೧೬೧ ಮಂದಿ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ೫೪ಲಕ್ಷ ಮಂದಿ ಪ್ರವಾಹದ ಭೀಕರತೆಗೆ ನಲುಗಿದ್ದಾರೆ, ೧೪.೫೨ಮಂದಿ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಇಷ್ಟೆಲ್ಲಾ ಸಾವು-ನೋವು ಸಂಭವಿಸಿದ್ದರೂ ಇನ್ನೂ ಹೆಚ್ಚಿನ ಸಾವು-ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ವಿಪತ್ತು ನಿರ್ವಹಣಾ ಮಂಡಳಿ ಎಚ್ಚರಿಕೆ ನೀಡಿದೆ.

Leave a Comment