ಈ ರಸ್ತೆ ದುರಸ್ಥಿ ಯಾವಾಗ

ಬಳ್ಳಾರಿ, ಸೆ.4: ತಾಲೂಕಿನ  ಹಲಕುಂದಿಯಿಂದ ಸಾಗುವ ಮಿಂಚೇರಿ, ಸಂಜೀವರಾಯನ ಕೋಟೆ ಹಾಗೂ ಬುರ್ರ ನಾಯಕನಹಳ್ಳಿಯ ಸುಮಾರು 12 ಕಿ.ಮೀ ರಸ್ತೆಯು ಸಂಪೂರ್ಣವಾಗಿ ತಗ್ಗು ಗುಂಡಿಗಳಿಂದ ಹದಗೆಟ್ಟಿದ್ದು ಇದರ ದುರಸ್ತಿಯಾವಾಗ ಎನ್ನುತ್ತಿದ್ದಾರೆ ಈ ಗ್ರಾಮಗಳ ಜನತೆ.

ಈಗ್ಗೆ ಇಪ್ಪತ್ತೆರಡು ವರ್ಷಗಳ ಹಿಂದೆ ಈ ಗ್ರಾಂಗಳ ಜನತೆಗೆ  ಉಪಯೋಗವಾಗಲೆಂದು ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ಎರಡು ದಶಕ ಕಳೆದರೂ ಈ ವರೆಗೆ ರಸ್ತೆ ದುರಸ್ಥಿ ಮಾಡಲಿಲ್ಲ.  ಇದಕ್ಕೆ ರಸ್ತೆಗಳ ಮೇಲೆ ಕಂಡುಬರುತ್ತಿರುವ ಬೃಹತ್ ಗುಂಡಿಗಳೇ ಸಾಕ್ಷಿಯಾಗಿವೆ.

ಕೂಲಿ ಕಾರ್ಮಿಕರು, ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರತಿಯೊಬ್ಬರೂ ಈ ರಸ್ತೆ ಮಾರ್ಗವಾಗಿ ನಿತ್ಯ ಬಳ್ಳಾರಿಗೆ ಸಂಚರಿಸುತ್ತೇವೆ. ಎಷ್ಟೋ ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸಿವೆ. ಮಳೆಗಾಲದಲ್ಲಂತೂ ಇಲ್ಲಿ ಸಂಚರಿಸಲು ಹರಸಾಹಸ ಪಡಬೇಕು ಎನ್ನುತ್ತಾರೆ ಇಲ್ಲಿನ ತಿಪ್ಪೇಸ್ವಾಮಿ ಎನ್ನುವವರು.
ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಒಳರಾಜಕೀಯದಿಂದ ಇದು ದುರಸ್ಥಿ ಕಾಣುತ್ತಿಲ್ಲ. ತುಂಬು ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸಲು ಪಡುವ ನೋವು ಅ ದೆವರಿಗೇ ಗೊತ್ತು ಎನ್ನುತ್ತಿದ್ದಾರೆ ಭೀರಲಿಂಗಪ್ಪ.

ಅಷ್ಟೇ ಅಲ್ಲದೆ ಅಧಿಕಾರದಲ್ಲಿ ಕೂತು ಹುಸಿ ಭರವಸೆಕೊಡುವ ನಾಯಕರಿಗಾಗಲಿ, ಕಾಮಗಾರಿಯಲ್ಲಿ ಎಷ್ಟು ಕೊಳ್ಳೆಹೊಡೆಯೋಣ ಎಂಬ ಗುತ್ತಿಗೆದಾರನಿಗಾಗಲಿ ಸಾರ್ವಜನಿಕರ ಸಂಕಷ್ಟಗಳು ಹೇಗೆ ತಾನೆ ಅರ್ಥವಾಗುತ್ತೆ. ಕಳೆದ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಾಯಕರು ಓಟು ಕೇಳೊಕೆ ಬಂದವರು ಈತನಕ ಇತ್ತ ತಲೆಯೇ ಹಾಕಿಲ್ಲ ಇನ್ನುಯಾವ ಅಭಿವೃದ್ಧಿ ಮಾಡ್ತಾರೆ  ಎಂಬುದು ಈ ನಾಲ್ಕೂ ಗ್ರಾಮಸ್ಥರ ಮಾತಾಗಿದೆ.

Leave a Comment