ಈ ನಿಂಬೆ ಹಣ್ಣು ರೇವಣ್ಣ ಕಳಿಸಿದ್ದಲ್ಲ

ಬಳ್ಳಾರಿ, ಸೆ.11: ಈ ನಿಂಬೆ ಹಣ್ಣುಗಳು ಪಕ್ಷದ ಮುಖಂಡ ಹೆಚ್.ಡಿ.ರೇವಣ್ಣ ಕಳಿಸಿದ್ದಲ್ಲ ಎಂದು ಪಕ್ಷದ ಹಿರಿಯ ಉಪಾಧ್ಯಕ್ಷ ಮಾಜಿ ಸಚಿವ ಎನ್.ಎಂ.ನಬಿ ಸ್ಪಷ್ಟಪಡಿಸಿದರು.

ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಎನ್.ಟಿ.ಬೊಮ್ಮಣ್ಣ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಬಿ ಅವರು ತಮ್ಮೆರೆಡು ಕೈಗಳಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ಆತ್ತ ಇತ್ತ ಆಡಿಸುತ್ತಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರು ಅವೇನು ರೇವಣ್ಣನವರ ನಿಂಬೆ ಹಣ್ಣೇ ಎಂದು ಪ್ರಶ್ನಿಸಿದ್ದಕ್ಕೆ ಇಲ್ಲಾ ಇಲ್ಲ, ಇವು ಲೋಕಲ್ ನಿಂಬೆ ಹಣ್ಣು ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ನೀಡಿದ್ದವು ಎಂದು ಪಕ್ಕದಲ್ಲಿದ್ದ ಮುಖಂಡರೊಬ್ಬರು ವಿವರಣೆ ಕೊಟ್ಟರು.

ಈ ಸಂದರ್ಭದಲ್ಲಿ ನಬಿ ಅವರು ಕೂಡ್ಲಿಗಿಯಲ್ಲಿ ಪರಸ್ಪರ ವಿರೋಧಿಗಳಾಗಿದ್ದ ನಾವು ಒಂದಾಗಿದ್ದೇವೆ. ಅದೇ ರೀತಿ ಪಕ್ಷದಲ್ಲಿದ್ದ ಹಿಂದಿನ ನಾಯಕರನ್ನು ಕರೆ ತರಲಿದೆ, ಮುಂಬರುವ ಎಲ್ಲಾ ಹಂತದ ಚುನಾವಣೆಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆಂದರು.

Leave a Comment