ಈಶ್ವರಪ್ಪಗೆ ನರ, ಗಂಡಸ್ತನದ ಅರಿವಿಲ್ಲ: ಸಂಸದ ಸುರೇಶ

ಹುಬ್ಬಳ್ಳಿ, ಮೇ 15- ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪನವರಿಗೆ ನರ ಯಾವುದು, ಗಂಡಸ್ತನ ಎಂದರೆ ಏನು ಎಂಬುದರ ಅರಿವೇ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ ಇಂದಿಲ್ಲಿ ತಿರುಗೇಟು ನೀಡಿದರು.
ನಗರದ ಖಾಸಗಿ ಹೊಟೇಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಇಲ್ಲಿಯವರೆಗೂ ಯಾವುತ್ತೂ ಒಳ್ಳೆಯದನ್ನು ಮಾಡಿಲ್ಲ, ಮಾತನಾಡಿಲ್ಲ, ಕಾಂಗ್ರೆಸ್‌ನವರು ನರಸತ್ತವರೆಂದು ಹೇಳಿದ್ದಾರಲ್ಲ, ಆದರೆ ಈಶ್ವರಪ್ಪನವರಿಗೆ ನರ ಯಾವುದು, ಗಂಡಸ್ತನ ಯಾವುದು ಎಂಬುದು ಈವರೆಗೂ ತಿಳಿದೇಯಿಲ್ಲ ಎಂದು ಸುರೇಶ ಕಟುಕಿದರು.
ಈಶ್ವರಪ್ಪನವರ ಮೆದುಳು ಸರಿಯಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದಂತೆ ಅವರನ್ನು ನಿಮಾನ್ಸ ಆಸ್ಪತ್ರೆಗೆ ಸೇರಿಸಬೇಕು ಎಂದರು.
ಮೇ. 23 ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ದೇಶದ ರಾಜಕೀಯದಲ್ಲಿ ಖಂಡಿತ ಬದಲಾವಣೆಯಾಗುತ್ತದೆ ಎಂದು ಹೇಳಿದ ಅವರು, ನಾವು ಕುಂದಗೋಳ ಉಪಕದನದಲ್ಲಿ ಗೆಲುವು ಸಾಧಿಸುವುದು ಶತಸಿದ್ಧ ಎಂದರು.
ಆದರೆ ಗೆಲುವು ಸಾಧಿಸಿದ ನಂತರ ಮೈಮರೆತು ಕೂಡಬಾರದು, ಬಿಜೆಪಿಯವರ ಮುಖದ ಮೇಲೆ ಹೊಡೆಯುವ ರೀತಿಯಲ್ಲಿ ಕೆಲಸ ಮಾಡಿ ತೋರಿಸಬೇಕೆಂದು ಅವರು ಹೇಳಿದರು.

Leave a Comment