ಈಜು- ಫೈನಲ್ ಪ್ರವೇಶಿಸಿದ ಸಜನ್ ಪ್ರಕಾಶ್

ಜಕಾರ್ತ್, ಆ ೧೯- ಏಷ್ಯನ್ ಗೇಮ್ಸ್‌ರಲ್ಲಿ ಇಂದು ಭಾರತ ಉತ್ತಮ ಆರಂಭ ಕಂಡಿದೆ. ಭಾನುವಾರ ಮಹಿಳಾ ಕಬಡ್ಡಿ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದ ಬಳಿಕ ಇತ್ತ ಬಟರ್ ಫ್ಲೈ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪದಕ ಬರೋದು ನಿಶ್ಚಿತವಾಗಿದೆ. ೨೦೦ ಮೀಟರ್ ಬಟರ್ ಫ್ಲೈ ಚಾಂಪಿಯನ್‌ಶಿಪ್‌ನಲ್ಲಿ ಈಜುಗಾರ ಸಜನ್ ಪ್ರಕಾಶ್ ಫೈನಲ್ ಪ್ರವೇಶ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಭಾರತದ ಸಜನ್, ಅಂತಿಮ ಹಂತದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯಲು ಯಶಸ್ವಿಯಾದರು. ಈ ಮೂಲಕ ೨೦೦ ಮೀಟರ್ ಬಟರ್ ಫ್ಲೈ ಚಾಂಪಿಯಶಿಪ್‌ನ ಫೈನಲ್ ಪ್ರವೇಶ ಮಾಡಿದ್ದಾರೆ. ಸಜನ್ ಹಿಟ್-೩ನಲ್ಲಿ ಒಂದು ನಿಮಿಷ ೫೮.೧೨ ಸೆಕೆಂಡ್ ಸಮಯ ತೆಗೆದುಕೊಂಡು ಮೊದಲ ಸ್ಥಾನ ಪಡೆದ್ರು. ನಂತರ ನಡೆದ ಅಂತಿಮ ಪಟ್ಟಿಯಲ್ಲಿ ಟಾಪ್ -೮ರಲ್ಲಿ ಸ್ಥಾನ ಪಡೆದರು.

ಇದಲ್ಲದೆ ೧೭ ವರ್ಷದ ಭಾರತದ ಶ್ರೀಹರಿ ನಟರಾಜ್ ಪುರುಷರ ೧೦೦ ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದಾರೆ. ಹಿಟ್ -೧ರಲ್ಲಿ ಮೊದಲ ಸ್ಥಾನ ಪಡೆದ ಶ್ರೀಹರಿ ನಟರಾಜನ್ ಅಂತಿಮ ಪಟ್ಟಿ ಟಾಪ್ ೮ನಲ್ಲಿ ಸ್ಥಾನ ಪಡೆದಿದ್ದಾರೆ.

Leave a Comment