ಈಜು ಕಲಿಯಲು ಹೋದ ವಿದ್ಯಾರ್ಥಿ ಸಾವು

ಗುಬ್ಬಿ, ಅ. ೧೨- ಈಜು ಕಲಿಯಲು ಹೋಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಕೆರೆಯಲ್ಲಿ ನಡೆದಿದೆ.

ಗ್ರಾಮದ ನರಸಿಂಹಮೂರ್ತಿ ಅವರ ಪುತ್ರ ಮಂಜುನಾಥ್ (17) ಎಂಬಾತನೇ ಮೃತಪಟ್ಟಿರುವ ದುರ್ದೈವಿ ವಿದ್ಯಾರ್ಥಿ. ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಂಜುನಾಥ್ ಕಾಲೇಜು ಮುಗಿಸಿ ಮನೆಗೆ ಹಿಂತಿರುಗಿದ ಬಳಿಕ ಕುರಿಗಳನ್ನು ಮೇಯಿಸಲು ಕೆರೆ ಅಂಗಳಕ್ಕೆ ತೆರಳಿದ್ದ. ಗುಂಡಿಯಲ್ಲಿ ನಿಂತಿದ್ದ ನೀರಲ್ಲಿ ಈಜು ಕಲಿಯುವಾಗ ಮೃತಪಟ್ಟಿದ್ದಾನೆ ಎಂದು ಸಿ.ಎಸ್.ಪುರ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸಿ.ಎಸ್.ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment