ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ ನನ್ನು ಹಸ್ತಾಂತರಿಸಲು ಮಲೇಷ್ಯಾಕ್ಕೆ ಭಾರತ ಮನವಿ

ನವದೆಹಲಿ, ಜೂ 13 -ವಿವಾದಾತ್ಮಕ ಇಸ್ಲಾಮಿಕ ಬೋಧಕ ಝಾಕೀರ್ ನಾಯ್ಕ್ ನನ್ನು ಹಸ್ತಾಂತರಿಸುವಂತೆ ಮಲೇಷ್ಯಾಕ್ಕೆ ಮನವಿ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಮಾತುಕತೆ ಮುಂದುವರಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತ ಸರ್ಕಾರವು ಝಾಕೀರ್ ನಾಯ್ಕ್ ನನ್ನು ಹಸ್ತಾಂತರಿಸಲು ಔಪಚಾರಿಕ ಮನವಿ ಮಾಡಿದ್ದು, ಮಲೇಷ್ಯಾ ಜೊತೆ ಈ ಕುರಿತು ಮಾತುಕತೆ ಮುಂದುವರಿಯಲಿದೆ” ಎಂದರು.

“ಭಾರತ ಹಲವು ದೇಶಗಳೊಂದಿಗೆ ಹಸ್ತಾಂತರ ಸಿದ್ಧತೆಗಳನ್ನು ಹೊಂದಿದೆ. ಈ ಹಿಂದೆ ಭಾರತಕ್ಕೆ ಯಶಸ್ವಿಯಾಗಿ ಹಸ್ತಾಂತರಿಸಿರುವ ಅನೇಕ ಪ್ರಕರಣಗಳಿವೆ. ಭಾರತದ ನ್ಯಾಯಿಕ ವ್ಯವಸ್ಥೆಯ ನ್ಯಾಯೋಚಿತತೆ ಕುರಿತು ಪ್ರಶ್ನೆಯೇ ಉದ್ಭವಿಸಿಲ್ಲ” ಎಂದು ರವೀಶ್ ಕುಮಾರ್ ಹೇಳಿದರು.

“ಭಾರತದಲ್ಲಿ ನನ್ನ ಜೊತೆ ನ್ಯಾಯೋಚಿತ ವಿಚಾರಣೆ ನಡೆಯುವುದಿಲ್ಲ ಎಂದು ಝಾಕೀರ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ” ಎಂದು ಮಲೇಷ್ಯಾ ಪ್ರಧಾನಿ ಮಹಥೀರ್ ಮೊಹ್ಮದ್ ಹೇಳಿಕೆ ನೀಡುವ ವಿವಾದವನ್ನು ಸೃಷ್ಟಿಸಿದ್ದರು.

ಝಾಕೀರ್, ವಿದ್ಯುನ್ಮಾನ ಮಾಧ್ಯಮದ ವಿವಾದಾತ್ಮಕ ಬೋಧಕ ಉಗ್ರಗಾಮಿತ್ವವನ್ನು ಪಸರಿಸಿದ ಆರೋಪ ಎದುರಿಸುತ್ತಿದ್ದು, 2016ರಿಂದ ಭಾರತಕ್ಕೆ ಬರಲು ನಿರಾಕರಿಸುತ್ತಿದ್ದಾನೆ. 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಯೋತ್ಪಾನಾ ದಾಳಿ ನಡೆಸಿದ ಹದಿಹರೆಯದವರ ಗುಂಪನ್ನು ತೀವ್ರಗಾಮಿಯಾಗಿ ಪರಿವರ್ತಿಸಿದ ಆರೋಪ ಕೂಡ ನಾಯ್ಕ್ ಎದುರಿಸುತ್ತಿದ್ದಾನೆ.

ಭಾರತದಲ್ಲಿ ಉಪಗ್ರಹ ದೂರದರ್ಶನ ಮಾಧ್ಯಮ ಪೀಸ್ ಟಿವಿಯನ್ನು ನಡೆಸುತ್ತಿದ್ದ  ಹಾಗೂ ಇಸ್ಲಾಮಿಕ್ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ, ಬೋಧಕ ಝಾಕೀರ್ ನಾಯ್ಕ್ ಅಕ್ರಮ ಹಣ ವರ್ಗಾವಣೆ ಹಾಗೂ ಉಗ್ರಗಾಮಿತ್ವ ಹರಡಿದ ಆರೋಪ ಎದುರಿಸುತ್ತಿದ್ದು, ಭಾರತೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳು ಆತನನ್ನು ಹಸ್ತಾಂತರಿಸುವಂತೆ ಕೋರಿದ್ದಾರೆ.

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಾಳಿಗೆ ಝಾಕೀರ್ ಉಪದೇಶವೇ ಕಾರಣ ಎಂದು ಪರಿಗಣಿಸಲಾಗುತ್ತಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸುತ್ತಿದ್ದಾನೆ.

 

Leave a Comment