ಇಸ್ಲಾಮಿಕ್ ದೇಶಗಳ ಸಭೆಯಲ್ಲಿ ಭಾರತದ ಪರ ಧ್ವನಿ ಎತ್ತಿ ಪಾಕಿಸ್ತಾನಕ್ಕೆ ಪೆಟ್ಟುಕೊಟ್ಟ ಮಾಲ್ಡೀವ್ಸ್….!

ನವದೆಹಲಿ, ಮೇ23- ಭಾರತದಲ್ಲಿ ಮುಸ್ಲಿಂ ವಿರೋಧಿ ಮನೋಭಾವ ತೀವ್ರಗೊಳ್ಳುತ್ತಿದೆ ಎಂದು ಭಾರತವನ್ನು ಗುರಿಯಾಗಿಸಿ ಪಾಕಿಸ್ತಾನ ಅಂತರಾಷ್ಟ್ರೀಯಮಟ್ಟದಲ್ಲಿ ನಡೆಸುತ್ತಿರುವ ಅಪ ಪ್ರಚಾರಗಳಿಗೆ ತೀವ್ರ ಹೊಡೆತ ಬಿದ್ದಿದೆ.
ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ದೇಶಗಳು( ಓಐಸಿ) ಸಮಾವೇಶದಲ್ಲಿ ಭಾರತದ ವಿರುದ್ಧ ಮುಸ್ಲಿಂ ರಾಷ್ಟ್ರಗಳಲ್ಲಿ ಒಗ್ಗಟ್ಟು ಮೂಡಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳನ್ನು ಮಾಲ್ಡೀವ್ಸ್ ತೀವ್ರವಾಗಿ ವಿರೋಧಿಸಿದೆ.
ಭಾರತದಲ್ಲಿ ಮುಸ್ಲಿಂ ವಿರೋಧಿ ಮನೋಭಾವ ತೀವ್ರಗೊಳ್ಳುತ್ತಿದೆ ಎಂಬ ಆರೋಪಗಳು ನಿಜವಲ್ಲ ಎಂದು ಓಐಸಿಯಲ್ಲಿ ಮಾಲ್ಡೀವ್ಸ್‌ನ ಖಾಯಂ ಪ್ರತಿನಿಧಿ ತಿಲ್ಮಿಜಾ ಹುಸೇನ್ ಸ್ಷಷ್ಟಪಡಿಸಿದ್ದಾರೆ. ಭಾರತವನ್ನು ಗುರಿಯಾಗಿಸಿ ನಡೆಸಲಾಗುವ ಯಾವುದೇ ಪ್ರಯತ್ನಗಳನ್ನು ಮಾಲ್ಡೀವ್ಸ್ ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ೫೭ ಸದಸ್ಯ ದೇಶ ಹೊಂದಿರುವ ಓಐಸಿ ಸಮಾವೇಶ ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಯಿತು . ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಲ್ಡೀವ್ಸ್ ಈ ವಿಷಯವನ್ನು ಸ್ಪಷ್ಟಪಡಿಸಿದೆ.
ಉದ್ದೇಶಪೂರ್ವಕವಾಗಿ ಕೆಲವರು ನಡೆಸುತ್ತಿರುವ ಅಪಪ್ರಚಾರ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳ ಸುದ್ದಿಗಳನ್ನು .. ೧೩೦ ಕೋಟಿ ಮಂದಿ ಭಾರತೀಯರ ಅಭಿಪ್ರಾಯದ ಪ್ರತಿರೂಪದಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾರಣವಿಲ್ಲದೆ, ಭಾರತದ ವಿರುದ್ದದ ಯಾವುದೇ ಆರೋಪಗಳಿಗೆ ತಮ್ಮ ದೇಶ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಓಐಸಿಯ ಪ್ರಮುಖ ಸದಸ್ಯ ದೇಶಗಳಾಗಿರುವ ಸೌದಿ ಅರೇಬಿಯಾ, ಯುಎಇ, ಅಫ್ಘಾನಿಸ್ತಾನ ಮತ್ತು ಪ್ಯಾಲೆಸ್ಟೈನ್ ದೇಶಗಳೊಂದಿಗೆ ಭಾರತ ನಿಕಟ ರಾಜತಾಂತ್ರಿಕ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.
ಈ ದೇಶಗಳು ಭಾರತ ಪ್ರಧಾನಿ ನರೇಂದ್ರ ಮೋದಿಯವರಿಗೆ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಿ ಗೌರವಿಸಿರುವುದನ್ನು ಹುಸೇನ್ ಈ ಸಂದರ್ಭದಲ್ಲಿ ನೆನಪಿಸಿದರು. ಭಾರತದಲ್ಲಿ ಮುಸ್ಲಿಂ ವಿರೋಧಿ ಮನೋಬಾವ ಹೆಚ್ಚುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಪ ಪ್ರಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇದೆ ಎಂಬ ಆರೋಪದ ನಡುವೆ ಮಾಲ್ಡೀವ್ಸ್ ನಿಲುವು ಮಹತ್ವ ಪಡೆದುಕೊಂಡಿದೆ

Leave a Comment