ಇಸ್ರೊದಿಂದ ಸಾಗರೋತ್ತರ ಭೂನಿಯಂತ್ರಣ ಕೇಂದ್ರ

ಬೆಂಗಳೂರು, ಸೆ. ೪- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ದೂರಸಂವೇದಿ ಉಪಗ್ರಹಗಳ ಕಾರ್ಯಾಚರಣೆಗಾಗಿ ಮೊಟ್ಟ ಮೊದಲ ಸಾಗರೋತ್ತರ ಭೂನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.
ಉತ್ತರ ಧೃವದಲ್ಲಿ ಇಂತಹ ಭೂ ನಿಯಂತ್ರಣ ಕೇಂದ್ರ ನಿರ್ಮಾಣ ಮಾಡಲು ಇಸ್ರೊ ಯೋಜನೆಯ ತಯಾರಿಯಲ್ಲಿ ತೊ‌ಡಗಿದೆ. ಚೀನಾ 2 ವರ್ಷಗಳ ಹಿಂದೆಯೇ ಉತ್ತರ ಧೃವದಲ್ಲಿ ಅಂತ ಭೂ ಕೇಂದ್ರವನ್ನು ಹೊಂದಿದ್ದು, ಈಗ ಭಾರತವೂ ಸಹ ತನ್ನ ಉಪಗ್ರಹಗಳಿಗೆ ಅಲ್ಲಿ ಭೂಕೇಂದ್ರ ನಿರ್ಮಾಣ ಮಾಡಲು ತೀವ್ರ ಆಸಕ್ತಿ ಹೊಂದಿದೆ. ಇದಕ್ಕೆ ಕಾರಣ ದೂರಸಂವೇದಿ ಉಪಗ್ರಹಗಳಿಂದ ಸುಲಭವಾಗಿ ಹಾಗೂ ನಿಖರ ಮಾಹಿತಿ ರವಾನೆಗೆ ಇದು ಹೆಚ್ಚು ಸಹಕಾರಿಯಾಗಲಿದೆ. ಆದರೆ, ಉತ್ತರ ಧೃವದಲ್ಲಿ ಅಂತ ಕೇಂದ್ರ ನಿರ್ಮಾಣಕಾರ್ಯ ಕಷ್ಟದಾಯಕವಾದದ್ದು. ನಿರ್ಮಾಣ ಕಾರ್ಯಕ್ಕಾಗಿ ಅಲ್ಲಿಗೆ ಸಲಕರಣೆಗಳ ಸಾಗಣಿಕೆ ಕಾರ್ಯ ತುಂಬ ದುಸ್ಥರ. ಹಾಗೂ ಅಲ್ಲಿ ಭಾರಿ ಪ್ರತಿಕೂಲ ವಾತಾವರಣವಿರುವ ಹಿನ್ನೆಲೆಯಲ್ಲಿ ಕೇಂದ್ರದ ನಿರ್ವಹಣೆಯೂ ಅಷ್ಟೇ ಕಠಿಣವಾದದ್ದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಂಟಾರ್ಟಿಕಾದಲ್ಲಿ ಭೂಕೇಂದ್ರ ಹೊಂದಲು ಈಗಾಗಲೇ ಇಸ್ರೋ ಕಾರ್ಯಾರಂಭಿಸಿದೆ. ಆದರೆ, ಉತ್ತರ ಧೃವದಲ್ಲಿ ಇಂತ ನಿರ್ಮಾಣ ಕಾರ್ಯ ತುಂಬಾ ಕಠಿಣವಾಗಿದ್ದರೂ ಉಪಗ್ರಹಗಳಿಂದ ನಿಖರ ಹಾಗೂ ಶೀಘ್ರ ಮಾಹಿತಿ ಸಂಗ್ರಹಣೆಯ ದೃಷ್ಠಿಯಿಂದ ಇಸ್ರೋ ಈ ಸವಾಲಿನ ಕಾರ್ಯಕ್ಕೆ ಮುಂದಾಗಿದೆ.

Leave a Comment