ಇಸ್ರೇಲ್‌ನ ಚೊಚ್ಚಲ ಚಂದ್ರ ಶೋಧನಾ ನೌಕೆ

  • ಉತ್ತನೂರು ವೆಂಕಟೇಶ್

ಚಂದ್ರ ಶೋಧನಾ ಹಾದಿಯಲ್ಲಿ ಪುಟ್ಟ ದೇಶವಾದ  ಇಸ್ರೇಲ್  ಅಂಬೆಗಾಲು ಇಟ್ಟಿದೆ. ಇಸ್ರೇಲ್‌ನ ಚೊಚ್ಚಲ ಚಂದ್ರ ನೌಕೆಯನ್ನು  ಸ್ಪೇಸ್ ಎಕ್ಸ್‌ನ ಪಾಲ್ಕನ್-೯ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿದೆ. ಪ್ಲಾರಿಡಾದ ಕೇಪ್ ಕಾನರವೆಲ್ ವಾಯು ನೆಲೆಯಲ್ಲಿಯ ಬಾಹ್ಯಾಕಾಶ ಕೇಂದ್ರದಿಂದ ಬೆರ್ ಷೀಟ್ ಹೆಸರಿನ ಇಸ್ರೇರಿನ ಮೂನ್ ಲ್ಯಾಂಡರ್ ನೌಕೆಯನ್ನು ಯಶಸ್ವಿಯಾಗಿ ಫೆ೨೨ ರ ಶುಕ್ರವಾರ ಉಡಾವಣೆ ಮಾಡಲಾಗಿದೆ.

  • ಪುಟ್ಟ ದೇಶವಾದ ಇಸ್ರೇಲ್ ಚಂದ್ರನಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ದೊಡ್ಡ ಸಾಧನೆ ಹಾದಿಯಲ್ಲಿ ಅಂಬೆಗಾಲು ಇಟ್ಟಿದೆ.

  • ಖಾಸಗಿ ಬಾಹ್ಯಾಕಾಶ ಶೋಧನಾ ಸಂಸ್ಥೆಯ ಹಣದ ಪೂರೈಕೆಯೊಂದಿಗೆ ಹಮ್ಮಿಕೊಳ್ಳಲಾಗಿರುವ ಇಸ್ರೇಲ್ ನ ಮೊದಲ ಚಂದ್ರ ಶೋಧನಾ ನೌಕೆ ಕಳೆದ ೨೨ ರಂದು ಉಡಾವಣೆ ಗೊಂಡಿದೆ.

  • ಸ್ಪೇಸ್ ಎಕ್ಸ್‌ನ ಪಾಲ್ಕನ್ – 9  ದೈತ್ಯ ರಾಕೆಟ್ ಬೆನ್ನೇರಿ ಹೊರಟಿರುವ ಈ ನೌಕೆ ೨ ತಿಂಗಳ ದೀರ್ಘಾಯಾನದ ನಂತರ ಚಂದ್ರಮಂಗಲ ತಲುಪಲಿದೆ.

  • ಇಂಡೋನೇಷ್ಯಾದ ಸಂಪರ್ಕ ಉಪಗ್ರಹದ ಜೊತೆಗೆ ಇಸ್ರೇಲ್ ನ ಬೆರ್ ಷೀಟ್ ಹೆಸರಿನ ಈ ಚಂದ್ರ ನೌಕೆಯನ್ನು ಉಡಾವಣೆ ಮಾಡಲಾಗಿದೆ.

  • ಈ ಯಾನ ಯಶಸ್ವಿಯಾದರೆ ಚಂದ್ರನಲ್ಲಿ ಶೋಧನಾ ನೌಕೆಯನ್ನು ಇಳಿಸಿಲ್ಲ. ವಿಶ್ವದ ೪ನೇ ರಾಷ್ಟ್ರ ಎಂಬ ಖ್ಯಾತಿ ಇಸ್ರೇಲ್ ಭಾಜನವಾಗುತ್ತಿದೆ.  

24vichara2

ಉಡಾವಣೆ ಗೊಂಡ ೩೦ ನಿಮಿಷದಲ್ಲಿ ನೌಕೆ ರಾಕೆಟ್ ನಿಂದ ಬೇರ್ಪಟ್ಟು ೩೭,೦೦೦ ಕಿ.ಮೀ. ಎತ್ತರದ  ಭೂ ಕ್ಷೆಯನ್ನು ತಲುಪಿದೆ. ಚಂದ್ರನ ಅಂಗಳ ತಲುಪಲು ನೌಕೆ ಇಲ್ಲಿಂದ ೩,೮೬,೨೪೨ ಕಿ.ಮೀ.ದೂರ ಕ್ರಮಿಸ ಬೇಕದೆ. ಈ ದೂರ ಕ್ರಮಿಸಲು ನೌಕೆಗೆ ಸುಮಾರು ಎರಡು  ತಿಂಗಳಕಾಲ ಹಿಡಿಯುತ್ತದೆ. ಈಗಿನ ಅಂದಾಜಿನಂತೆ ಬೆಷೀಡ್ ನೌಕೆ ಏಪ್ರಿಲ್ ೧೧ ರಂದು ಚಂದ್ರನ ಅಂಗಳವನ್ನು ತಲುಪಲಿದೆ ಎಂದು  ಸ್ಪೆಸ್ ಎಕ್ಸ್ ಮೂಲಗಳು ತಿಳಿಸಿವೆ. ೧೦೦ ದಶಲಕ್ಷ ಡಾಲರ್‍ಸ್ ಮೊತ್ತದ ಈಯೋಜನೆ ಇಸ್ರೇಲ್ ನ ಖಾಸಗಿ ಬಾಹ್ಯಾಕಾಸ ಶೋಧನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಲಲಾಗಿದೆ.

ಬೆರ್ ಷೀಟ್ ಎಂದರೆ ಹಿಬ್ರೂ ಭಾಷೆಯಲ್ಲಿ ಆರಂಭ (ಬಿಗಿನಿಂಗ್) ಎಂದು ಅರ್ಥ. ೫೮೫ ಕೆ.ಜಿ ತೂಕದ .ವಾಷಿಂಗ್ ಮಿಷನ್ ಗಾತ್ರದ  ಈನೌಕೆ , ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗುವ ವರೆವಿಗೆ ಭೂಮಿಯನ್ನು ದೀರ್ಗವೃತ್ತದಲ್ಲಿ ಸುತ್ತುತ್ತ ಕಕ್ಷೆ  ಏರಿಕೆಪ್ರ ಕ್ರಿಯೆಗೆ ಒಳಗಾಗುತ್ತಿರುತ್ತದೆ.ಪ್ರಿಲ್ ತಿಂಗಳಲ್ಲಿ ಚಂದ್ರನ ಮೇಲೆ ಇಳಿಯಲಿರುವ  ನಾಲ್ಕುಕಾಲಿನ ಈಲ್ಯಾಂಡರ್ ಮೂರು ನಾಲ್ಕು ದಿನಗಳ ಕಾಲ ಅಲ್ಲಿ ಕಾರ್ಯ ನಿರ್ವಹಿಸುವ ಸಾಮರ್ತ್ಯದೊಂದಿಗೆ ನೌಕೆಯನ್ನು ನಿರ್ಮಾಣ ಮಾಡಲಾಗಿದೆ.

ಆ ದಿನಗಳಲ್ಲಿ ನೌಕೆ ತಾನು ಇಳಿದ ಪ್ರದೇಶದ ಚಂದ್ರನ ಚಿತ್ರಗಳನ್ನು ಮತ್ತು ಚಂದ್ರನ ಆಯಸ್ಕಾಂತೀಯ ನಲಯದ ವಿಸ್ತಾರ ಕುರಿತಂತೆ ಭೂ ಕೇಂದ್ರಕ್ಕೆ ಮಾಹಿತಿ ರವಾನಿಸುತ್ತದೆ.ಈ ಮಾಹಿತಿ ನಾಸದ ಡೀಪ್ ಸ್ಪೇಸ್ ನೆಟ್ ವರ್ಕ್ ಮೂಲಕ ಇಸ್ರೇಲ್ ನಯೆಹುಡ್ ನಲ್ಲಿರುವ ಭೂ ಕೇಂದ್ರ ತಲುಪುತ್ತದೆ ಎಂದು ಇಸ್ರೇಲ್‌ನ ಸರಕಾರಿ ಸ್ವಾಮ್ಯದ ಇಸ್ರೇಲ್ ಸ್ಪೇಸ್ ಐಎಲ್ ಸಹ ಸ್ಥಾಪಕ ಯೊನಾಟಾ ವಿನೆಟ್ರಬ್ ಹೇಳಿದ್ದಾರೆ.

Leave a Comment