ಇಸ್ಪೀಟ್ ಜೂಜಾಟ: 6 ಜನರ ಬಂಧನ

ಹುಬ್ಬಳ್ಳಿ, ಡಿ 7: ಇಸ್ಪೀಟ್ ಜೂಜಾಟವಾಡುತ್ತಿದ್ದ 6 ಜನರ ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿದ ಘಟನೆ ಉಣಕಲ್ಲ ಕೆರಿ ಓಣಿಯಲ್ಲಿ ನಡೆದಿದೆ.
ಇಲ್ಲಿನ ಉಣಕಲ್ಲ ಸಿದ್ಧೇಶ್ವರ ನಗರದ ನಿವಾಸಿ ಸಚಿನ ರಮೇಶ ಪರದೇಶಿ ಹಾಗೂ ಇತರ ಐವರು ಸೇರಿ  ಉನಕಲ್ಲ ಕೆರಿ ಓಣಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟ್ ಜೂಜಾಟವಾಡುತ್ತಿದ್ದ ಸಂದರ್ಭದಲ್ಲಿ ಹಠಾತ್ ದಾಳಿ ನಡೆಸಿದ ಪೊಲೀಸರು ಇವರನ್ನು ಬಂಧಿಸಿದ್ದು, 56,100 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಕೆ ಪೆಟ್ಟೆಗೆ ಹಣ ಕಳ್ಳತನ:
ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿನ ಹಣವನ್ನೇ ಕಳ್ಳರು ಕೊಳ್ಳೆ ಹೊಡೆದ ಘಟನೆ ಇಲ್ಲಿನ ಶಿರಡಿ ನಗರದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದಿದೆ.
ಶ್ರಿ ಸಾಯಿಬಾಬಾ ದೇವಸ್ಥಾನದ ಕಿಡಕಿಯ ಗ್ರಿಲ್ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಕಾಣಿಕೆ ಪೆಟ್ಟಿಗೆಯಲ್ಲಿನ 10 ಸಾವಿರ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment