ಇಸ್ಕಾನ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ವೈಭವದ ಆಚರಣೆ

ಧಾರವಾಡ,3-ಶ್ರೀಕೃಷ್ಣನು ಅವತರಿಸಿದ ದಿನವಾದ ಜನ್ಮಾಷ್ಟಮಿಯನ್ನು ಹುಬ್ಬಳ್ಳಿ –ಧಾರವಾಡದ ಇಸ್ಕಾನ್ ನಲ್ಲಿ ವೈಭವದಿಂದ ಆಚರಿಸಲಾಯಿತು. ಈ ಉತ್ಸವದಲ್ಲಿ ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಪಾಲ್ಗೊಂಡಿದ್ದರು. ಮಂದಿರದ ಕಟ್ಟಡ, ಹುಲ್ಲು ಹಾಸು ಮತ್ತು ಸುತ್ತಮುತ್ತಲಿನ ಪರಿಸರವನ್ನು ಬಣ್ಣ ಬಣ್ಣದ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಇಡೀ ಮಂದಿರದ ಪರಿಸರವು ನೋಡುಗರ ಮನಸೂರೆಗೊಳ್ಳುವಂತಿತ್ತು.
ಎರಡು ದಿನಗಳÀ ಕಾರ್ಯಕ್ರಮವು ರವಿವಾರ ದಿನಾಂಕ 2 ಸೆಪ್ಟೆಂಬರ 2018ರ ಬೆಳಗಿನ ಜಾವ 4:30ಕ್ಕೆ ಮಂಗಳಾರತಿಯೊಂದಿಗೆ 2 ದಿನಗಳ ಈ ಉತ್ಸವದ ಆಚರಣೆಯು ಶುಭಾರಂಭಗೊಂಡಿತು. ವಿಗ್ರಹಗಳಿಗೆ ಅಭಿಷೇಕವನ್ನು ನಡೆಸಿ, ಕಣ್ಣು ಕೋರೈಸುವ ಹೊಳಪುಳ್ಳ ಸುಂದರವಾದ ಆಭರಣಗಳಿಂದ ಅಲಂಕರಿಸಲಾಯಿತು. 7:30ಕ್ಕೆ ಈ ವಿಶಿಷ್ಟವಾದ ದರ್ಶನವನ್ನು ಭಕ್ತಾದಿಗಳು ಪಡೆದರು. ಬೆಳಗಿನ 8:00 ಗಂಟೆಗೆ ಆರಂಭವಾದ ಅರ್ಚನೆಗಳು ಹಾಗೂ ವಿವಿಧ ಸೇವೆಗಳನ್ನು ಅರ್ಪಿಸಿ ಶ್ರೀಕೃಷ್ಣ ಬಲರಾಮರ ದರ್ಶನ ಪಡೆಯಲು ಹುಬ್ಬಳ್ಳಿ ಧಾರವಾಡದ ಭಕ್ತಾದಿಗಳು ಮಂದಿರಕ್ಕೆ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು.
ಭಕ್ತಾದಿಗಳಿಂದ ಲಡ್ಡು ಗೋಪಾಲನಿಗೆ ತೊಟ್ಟಿಲೋತ್ಸವವು ಬೆಳಗಿನ ಜಾವ 10.30 ಯಿಂದ ಸಾಯಂಕಾಲ 7.30 ವರೆಗೆ ದೇವಸ್ಥಾನದ ಸಾಂಸ್ಕøತಿಕ ಸಭಾಂಗಣದಲ್ಲಿ ಜರುಗಿತು ಮತ್ತು 10.30 ಯಿಂದ 2.30 ವರೆಗೆ ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಉಡುಗೊರೆಗಳನ್ನು ಪಡೆದುಕೊಂಡರು.
ಸಾಯಂಕಾಲ, ಹುಬ್ಬಳ್ಳಿ ಧಾರವಾಡದ ವಿವಿಧ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿಗೀತೆಗಳ ಸಂಗೀತ ಸೇವೆಯು ನಡೆದು ಉತ್ಸವಕ್ಕೆ ಮೆರುಗು ಬಂದಿತು. ಸಾಯಂಕಾಲ ನಾಟ್ಯಾಂಜಲಿ ಕಲಾಕೇಂದ್ರ ಹುಬ್ಬಳ್ಳಿಯ ಶ್ರೀಮತಿ ವನಿತಾ ಮಹಾಲೆ ಹಾಗೂ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಲೀಲೆಯ ಶಾಸ್ತ್ರೀಯ ನೃತ್ಯವನ್ನು ಪ್ರಸ್ತುತ ಪಡಿಸಿದರು. ನಂತರ 6.00 ಗಂಟೆಗೆ ಶ್ರೀಮತಿ ಹೇಮಾ ವಾಗ್ಮೋಡೆ ಮತ್ತು ಸಂಗಡಿಗರು “ಯಶೋದಾ ವಿಸ್ಮಯ” ಎನ್ನುವ  ನೃತ್ಯನಾಟಕವನ್ನು ಪ್ರಸ್ತುತ ಪಡಿಸಿದರು.
ಸಾಯಂಕಾಲ 7.30ಗೆ ಅರ್ಚಕರಿಂದ ವೇದ ಮಂತ್ರ ಪಠಣದೊಂದಿಗೆ, ವಿಗ್ರಹಗಳಿಗೆ ವೈಭವದ  ಅಭಿಷೇಕವನ್ನು ನೆರವೇರಿಸಲಾಯಿತು. ವಿಗ್ರಹಗಳಿಗೆ ಪರಿಶುದ್ಧವಾದ ಹಾಲು, ಮೊಸರು, ಜೇನುತುಪ್ಪ, ತುಪ್ಪ, ಬೆಲ್ಲದ ನೀರು, ಅರಿಶಿನದ ನೀರು ಮತ್ತು ವಿಧ ಬಗೆಯ ಹಣ್ಣಿನ ರಸಗಳಿಂದ ಅಭಿಷೇರ್ಕ ಮಾಡಲಾಯಿತು. ಭಕ್ತಿಯ ಪರಾಕಷ್ಟತೆಯಿಂದ ಭಕ್ತರೆಲ್ಲರು “ಹರಿ ಬೋಲ್” “ಹರಿ ಬೋಲ್” ಎನ್ನುತ್ತಾ ವಿಗ್ರಹಗಳ ಮೇಲೆ ಪುಷ್ಫ ವೃಷ್ಟಿ ಮಾಡಿದರು. 9:30ಕ್ಕೆ ದಿನದ ಕಾರ್ಯಕ್ರಮಗಳು ಎಲ್ಲರಿಗೂ ಪ್ರಸಾದ ವಿತರಣೆಯೊಂದಿಗೆ ಸಮಾರೋಪಗೊಂಡಿತು.

Leave a Comment