ಇಶಾ ಮೈಮಾಟ ಅನಾವರಣ ಮಾದಕ ಫೋಟೋ ವೈರಲ್

ಬಾಲಿವುಡ್ ನಟಿ ಇಶಾ ಗುಪ್ತ ತನ್ನ ಇಸ್ಟಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದ ಮಾದಕ ಮೈಮಾಟದ ಪೋಟೋಗಳು ವೈರಲ್ ಆಗಿವೆ. ತರಾವೇರಿಯ ಚಿತ್ರಗಳು ಅಭಿಮಾನಿಗಳನ್ನು ಬೆರಳ ತುದಿಯಲ್ಲಿ ನಿಲ್ಲಿಸುವಂತೆ ಮಾಡಿದೆ.

 

ಬಾಲಿವುಡ್‌ನಲ್ಲಿ ಇತ್ತೀಚೆಗೆ ನಟಿಯರಲ್ಲಿ ಸೆಕ್ಸಿ ಟ್ರೆಂಡ್ ಹೆಚ್ಚಾಗುತ್ತಿದೆ.ಇದೀಗ ಮತ್ತೊಬ್ಬ ನಟಿ ಇಶಾ ಗುಪ್ತ ತನ್ನ ದೇಹ ಸೌಂದರ್ಯವನ್ನು ಅನಾವರಣ ಮಾಡಿದ್ದಾರೆ.

ಚಿತ್ರಗಳನ್ನು ನೋಡಿದ ಅಭಿಮಾನಿಗಳು ಮುಂಬರುವ ’ಬಾದ್‌ಶಾಹೂ’ ಚಿತ್ರದ್ದಾ ಎನ್ನುವ ಪ್ರಶ್ನೆಯನ್ನು ಇಶಾ ಗುಪ್ತ ಮುಂದಿಟ್ಟಿದ್ದಾರೆ. ಅದಕ್ಕೆ ತಣ್ಣನೆಯಗಿ ಪ್ರತಿಕ್ರಿಯಿಸಿರುವ ಇಶಾ ಗುಪ್ತ ಯಾವುದೇ ಚಿತ್ರಕ್ಕೆ ಸಬಂಧಿಸಿದ ಫೋಟೋಗಳಲ್ಲ. ಬದಲಾಗಿ ಇತ್ತೀಚೆಗೆ ಹೊಸದಾಗಿ ಮಾಡಿಸಿ ಫೊಟೋಗಳು ಎಂದಿದ್ದಾರೆ.
ಇಶಾ ಗುಪ್ತ ಅವರ ಭಿನ್ನ ಭಿನ್ನವಾದ ಫೋಟೋಗಳು ಎಲ್ಲರ ಕಣ್ಣುಕುಕ್ಕುವಂತೆ ಮಾಡಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ತನ್ನ ಮಾದಕ ಮೈಮಾಟದಿಂದಲೇ ಹೆಚ್ಚು ಪ್ರಚಾರ ಪಡೆಯುತ್ತಿದ್ದ ನಟಿಯರಿಗಂತೂ ಹೊಟ್ಟೆ ಹುರಿಯುವಂತೆ ಮಾಡಿದ್ದಾರೆ ಇಶಾ.
ಇತ್ತೀಚಿನ ವರ್ಷದಲ್ಲಿ ನಟಿಯರು ಸಿನಿಮಾಗಳಲ್ಲಿನ ನಟನೆಗಿಂತ ಸೆಕ್ಸಿ ಫೋಟೋ ಶೂಟ್‌ಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೊಸ ಮಾದರಿಯ ಫೋಟೋ ಶೂಟ್‌ಗಳಿಂದ ನಟಿಯರಿಗೆ ಸಾಕಷ್ಟು ಅವಕಾಶ ಸಿಕ್ಕಿವೆ. ಮೂಲೆಗುಂಪಾದ ನಟಿಯರಿಗೆ ಮತ್ತೆ ಮುಖ್ಯವಾಹಿನಿಗೆ ಬರುವಂತಾಗಿದೆ.
ಒಂದು ಪೋಟೋ ಶೋಟ್ ಮೂಲೆಗುಂಪಾಗಿದ್ದ ನಟಿಯರಿಗೆ ಚಿತ್ರರಂಗದಲ್ಲಿ ಮತ್ತೆ ನೆಲೆ ಕಲ್ಪಿಸಿದ ಅನೇಕ ಉದಾಹರಣೆಗಳಿವೆ. ಅಂತಹುದರಲ್ಲಿ ಇಶಾ ಗುಪ್ತ ಪೋಟೋ ಶೂಟ್ ಕೂಡ ಒಂದು.
ಹಸಿ ಬಿಸಿ ದೃಶ್ಯಗಳಲ್ಲಿ ಇಶಾ ಗುಪ್ತ ಕಾಣಿಸಿಕೊಂಡಿರುವ ಪರಿಗೆ ಇಡೀ ಬಾಲಿವುಡ್ ಮಂದಿ ಬೆಕ್ಕಸ ಬೆರಗಾಗಿದೆ. ಮಾದಕ ಮೈಮಾಟ ಅನಾವರಣ ಮಾಡಿರುವುದು ಸಿನಿಮಾಕ್ಕೋಸ್ಕರ ಅಲ್ಲ ಎನ್ನುವುದನ್ನು ಇಶಾ ಸ್ಪಷ್ಟ ಪಡಿಸಿದ್ದಾರೆ.
ಕಿಸ್ಸಿಂಗ್ ಬಾಯ ಎಂದೇ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಇಮ್ರಾನ್ ಹಶ್ಮಿ ಅವರ ಜೊತೆ ನಟಿಸಿರುವುದು ಖುಷಿಕೊಟ್ಟಿದೆ. ಬಾದ್‌ಶಾಹೂ ಚಿತ್ರ ಎಲ್ಲರಿಗೂ ಇಡಿಸಲಿದೆ ಎನ್ನುವ ವಿಶ್ವಾಸವೊಂದಿರುವ ಅವರಿಗೆ ಚಿತ್ರ ಒಳ್ಳೆಯ ಅನುಭವ ನೀಡಿದೆಯಂತೆ.ಹಾಗಂತ ಅವರು ತಮ್ಮ ಮನದಾಳದ ಇಂಗಿತ ಹೊರಹಾಕಿದ್ದಾರೆ.
ಬಾದ್‌ಶಾಹೂ ಚಿತ್ರವನ್ನು ಮಿಲನ್ ಲೂತ್‌ರಿಯಾ ನಿರ್ದೇಶನ ಮಾಡಿದ್ದು ಅಜಯ್ ದೇವಗನ್, ಇಲಿಯಾನ ಡಿ ಕ್ರೂಜ್, ವಿದ್ಯುತ್ ಜಾಮ್ವಾಲ್, ಇಶಾಗುಪ್ತ, ಇಮ್ರಾನ್ ಹಶ್ಮಿ ಮತ್ತಿತರ ದೊಡ್ಡ ತಾರಾಬಳಗವಿದೆ.

Leave a Comment