ಇರುವೆ ಮೊಟ್ಟೆ ಸೇವಿಸಿ ಜೀವಿಸುತ್ತಿರುವ ಪದ್ಮಶ್ರೀ ಪುರಸ್ಕೃತ ರೈತ

ಭುವನೇಶ್ವರ ,ಜೂ. ೨೫- ಪದ್ಮಶ್ರೀ ಪ್ರಶಸ್ತಿ ಇದು ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ. ಇಂತಹ ಒಂದು ಗೌರವ ಒಡಿಶಾದ ಕೆನೋಜಹರ್ ಜಿಲ್ಲೆಯ ತಾಲಾಬೈತರಾನಿ ಗ್ರಾಮದ ರೈತ ದೈತ್ರಿ ನಾಯಕ್ ಲಭಿಸಿದೆ. ಆದರೆ ಏನು ಪ್ರಯೋಜನ. ೭೫ ವರ್ಷದ ಇಳಿವಯಸ್ಸಿನಲ್ಲು ದಿನಗೂಲಿ ನೌಕರನಾಗಿ ದುಡಿಯುತ್ತಿದ್ದು. ಇದರಿಂದ ಬರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಬದುಕಲು ಇರುವೆಯ ಮೊಟ್ಟೆಯನ್ನು ಸೇವಿಸುವ ದಯನೀಯ ಪರಿಸ್ಥಿತಿಯಲ್ಲಿ ಕಾಲ ದೂಡುತ್ತಿದ್ದಾರೆ.
ಕೆಂಜೋಹಾರ್ ಅತ್ಯಂತ ಸಂಪದ್ಬರಿತ ಜಿಲ್ಲೆ. ಗೊನಾಸಿಕಾ ಗುಡ್ಡಗಾಡು ಪ್ರದೇಶದ ಮೂರು ಕಿ,ಮೀ ವರೆಗೆ ನಾಲೆ ಅಗೆಯುವ ಕಾರ್ಯವನ್ನು ದೈತ್ರಿ ನಾಯಕ್ ನೆರವೇರಿಸಿದ್ದನು. ಇದಕ್ಕಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ ಈ ಪ್ರಶಸ್ತಿ ತನ್ನ ಜೀವನ ಮಟ್ಟವನ್ನು ಸುಧಾರಿಸಲಿಲ್ಲ. ಒಪ್ಪೊತ್ತಿನ ಕೂಳಿಗೂ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ರೋಸಿ ಹೋಗಿರುವ ನಾಯಕ್ ತಮಗೆ ಲಭಿಸಿರುವ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುಲು ಮುಂದಾಗಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ನಾಲೆ ನಿರ್ಮಿಸುವ ಸಲುವಾಗಿ ಮೂರು ಕಿ.ಮೀ ಉದ್ದದ ಕಾಲುವೆಯನ್ನು ನಾಯಕ್ ೨೦೧೦ ಮತ್ತು ೨೦೧೩ರಲ್ಲಿ ಅಗೆದಿದ್ದರು. ಇದರಿಂದ ಈ ಭಾಗದ ೧೦೦ ಎಕರೆ ಜಮೀನು ನೀರಾವರಿ ಭೂಮಿಯಾಗಿ ಪರಿವರ್ತನೆಯಾಗಿದೆ. ಇಂತಹ ಮಹತ್ವದ ಕಾರ್ಯ ಮಾಡಿದ ರೈತ ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದಾರೆ. ಪದ್ಮಶ್ರೀ ಗೌರವ ತಮ್ಮ ಬದುಕನ್ನು ಸಂಕಷ್ಟಕ್ಕೆ ದೂಡಿತು. ಈ ಪ್ರಶಸ್ತಿಗೆ ಪಾತ್ರವಾಗುವ ಮುನ್ನ ತಾವು ದಿನಗೂಲಿ ಕಾರ್ಮಿಕನಾಗಿದ್ದೆ. ಆದರೆ ಈಗ ತಮಗೆ ಪದ್ಮಶ್ರೀ ಪ್ರಶಸ್ತಿಗೆ ಲಭಿಸಿರುವುದರಿಂದ ಯಾರೂ ಕೂಡ ಕೆಲಸ ಕೊಡುತ್ತಿಲ್ಲ. ಇದು ತಮ್ಮ ಘನೆತೆಗೆ ತಕ್ಕ ಉದ್ಯೋಗವಲ್ಲ ಎಂದು ಹೇಳುತ್ತಿದ್ದಾರೆ. ಕೆಲಸವಿಲ್ಲದೇ ಬದುಕುವುದಾದರೂ ಹೇಗೆ ಅದಕ್ಕಾಗಿ ಇರುವೆಯ ಮೊಟ್ಟೆಗಳನ್ನು ಸೇವಿಸಿ ಬದುಕುತ್ತಿದ್ದೇನೆ ಎಂದು ಹೇಳುತ್ತಾರೆ.
ನಾನು ಈಗ ಬೀಡಿ ಕಟ್ಟುವ ಎಲೆ ಮತ್ತು ಮಾವಿನ ಹಣ್ಣಿನ ಹಪ್ಪಳ ಮಾರಾಟ ಮಾಡಿ ತನ್ನ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಪದ್ಮ ಪ್ರಶಸ್ತಿಯಿಂದಾಗಿ ತನ್ನ ಎಲ್ಲ ಮೌಲ್ಯವನ್ನು ಕಳೆದುಕೊಂಡಿದ್ದೇನೆ. ಹೀಗಾಗಿ ಈ ಪ್ರಶಸ್ತಿಯನ್ನು ವಾಪಸ್ ನೀಡಿದರೆ ನನಗೆ ಕೆಲಸ ದೊರೆಯಲು ಅನುಕೂಲವಾಗುತ್ತದೆ. ತನಗೆ ಬಂದಿರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಎಂದು ಹೇಳಬೇಕಾದರೆ ನಾಯಕ್ ಮನೆಯಲ್ಲಿ ಇನ್ನೆಷ್ಟು ಬಡತನವಿದೆ ಎಂಬುದು ಊಹಿಸುವುದು ಕಷ್ಟ ಸಾಧ್ಯ. ಅದರೆ ಯಾವುದೇ ಪ್ರಶಸ್ತಿಯ ದೊರೆತರೂ ತಮ್ಮ ಜೀವನದ ಮಟ್ಟ ಸುಧಾರಿಸುವುದಿಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.
ತಿಂಗಳಿಗೆ ೭೦೦ ರೂ ಪಿಂಚಣಿ ದೊರೆತರೂ ತನ್ನ ಸಂಸಾರದ ನೊಗ ಎಳೆಯುವುದು ತುಂಬಾ ಕಷ್ಟ. ಇಂದಿರಾ ಅವಾಸ ಯೋಜನೆಯಡಿ ಮನೆಯನ್ನು ಕೆಲವು ವರ್ಷಗಳ ಹಿಂದೆ ನಿಗದಿ ಮಾಡಿದ್ದರು, ಆದರೆ ಇನ್ನು ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಈಗ ವಿಧಿಯಿಲ್ಲದೆ ನನ್ನ ಹಳೆಯ ಮುರುಕಲು ಮನೆಯಲ್ಲೆ ವಾಸ ಮಾಡುತ್ತಿದ್ದೇನೆ.ತನಗೆ ಎದುರಾಗಿರುವ ಸಂಕಷ್ಟದಿಂದ ಬೇಸತ್ತು ತನಗೆ ದೊರೆತ ಪದ್ಮಶ್ರೀ ಪ್ರಶಸ್ತಿಯನ್ನು ಎಮ್ಮೆ ದೊಡ್ಡಿಯಲ್ಲಿ ಇಟ್ಟಿದ್ದೇನೆ ಎಂದು ಹೇಳುತ್ತಾರೆ.
ನಾಯಕ್ ಪುತ್ರ ಅಲೆಖ್ ಕೂಲಿ ಕಾರ್ಮಿಕನಾಗಿದ್ದು, ತಮ್ಮ ತಂದೆ ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲ. ಇದು ಅವರನ್ನು ಸದಾ ಕಾಡುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರೈತರಿಗೆ ಕಾಲಿಯಾ ಯೋಜನೆ ಆರಂಭಿಸಿದ್ದಾರೆ. ಆದರೆ ರೈತರಿಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ.

Leave a Comment