ಇರುವುದೆಲ್ಲವ ಬಿಟ್ಟು

ಪ್ರಕಾಶ್

ಇರುವುದೆಲ್ಲವ ಬಿಟ್ಟು’ ಸಿನೆಮಾದ ಚಿತ್ರೀಕರಣ ಮುಗಿದಿದೆ ಚಿತ್ರವನ್ನು ತೆರೆಗೆ ತರುವ ಸಿದ್ದತೆ  ನಡೆಸಲಾಗಿದ್ದು ಚಿತ್ರದ  ಟ್ರೇಲರ್‌ನ್ನು   ಕಳೆದ ಸೋಮವಾರ ಬಿಡುಗಡೆ ಮಾಡಿದ ದರ್ಶನ್ ಸಿನೆಮಾದ ಛಾಯಗ್ರಹಣ ಕೆಲಸ ಚೆನ್ನಾಗಿ ಬಂದಿದೆ.

ದರ್ಶನ್, ಶ್ರೀ ಮುರುಳಿ ಹಾಗು ತಮಿಳು ನಟ ಸಿಂಬು ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಹೀಗಾಗಿ ಇರುವುದೆಲ್ಲವೂ ಬಿಟ್ಟು ಚಿತ್ರ ನಾನಾ ಕಾರಣಗಳಿಂದ ಕುತೂಹಲಹಲ ಕೆರಳಿಸಿದೆ. ಸದ್ಯದಲ್ಲಿಯೇ ಚಿತ್ರ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.

iruvudellava-bittu_168

ಮೇಘನಾರಾಜ್  ಅನುಭವ ಈ ಚಿತ್ರದಿಂದ ಸಾಬೀತು ಆಗಿದೆ. ತಿಲಕ್ ನಟನೆ ಮಾದರಿ ಭಿನ್ನವಾಗಿದೆ. ಅದು ನನಗೂ ಇಲ್ಲ. ಜೀವನದಲ್ಲಿರುವ ಎಲ್ಲಾ ತರಹದ ಅಂಶಗಳನ್ನು ಹೇಳಿದ್ದಾರೆ. ಹೊಸ ನಿರ್ಮಾಪಕರನ್ನು ಹೊರಗೆ ಹೋಗದಂತೆ ಹಿಡಿದಿಟ್ಟುಕೊಳ್ಳಬೇಕು ಎಂದು ತಂಡಕ್ಕೆ ಶುಭ ಹಾರೈಸಿದರು.

ಇದಕ್ಕೂ ಮುನ್ನ ಮೈಕ್ ತೆಗೆದುಕೊಂಡ ನಿರ್ದೇಶಕ ಕಾಂತಕನ್ನಲ್ಲಿ  ಚಿತ್ರವನ್ನು ಬಣ್ಣಿಸಿದ ರೀತಿ ಹೀಗಿತ್ತು:

ಪ್ರಚಲಿತ ಅವಿಭಕ್ತ-ವಿಭಕ್ತ ಕುಟುಂಬದಲ್ಲಿ ನಮ್ಮನ್ನು ನಾವು ದೂರ ಮಾಡಿಕೊಳ್ಳುತ್ತಿದ್ದೇವೆ. ಒಂದು ಮಗುವಿದ್ದರೆ ಸಾಕೆಂದು ಅದರ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತೇವೆ. ಇದರಿಂದ ಖುಷಿ ಕೊಡುತ್ತೆ ಹೊರತು, ಸಂಬಂಧಗಳು ಕನೆಕ್ಟ್ ಆಗೋಲ್ಲ. ಬದುಕು ಎಲ್ಲದನ್ನು ಕಲಿಸುತ್ತೆ. ಆದರೆ ಹೇಗೆ ಬದುಕುವುದು ಎಂದು ಹೇಳುವುದಿಲ್ಲ. ನಾವುಗಳು ಅರ್ಥಮಾಡಿಕೊಂಡರೆ ಸುಂದರ ಬದುಕು ಆಗುತ್ತದೆ. ಇದನ್ನೆ ಹೇಳುವ ಪ್ರಯತ್ನ ಮಾಡಲಾಗಿದೆ.

ಕತೆಗೆ  ನಿರೂಪಣೆಯನ್ನು ಶ್ರೀಮುರಳಿ ನೀಡಿದ್ದಾರೆ. ಸಿಂಬು  ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ದರ್ಶನ್ ಸರ್ ಬಂದಿದ್ದಕ್ಕೆ ಥ್ಯಾಂಕ್ಸ್.  ಈ ಚಿತ್ರವು ನನ್ನ ಸಿನಿಮಾ ಜೀವನದಲ್ಲಿ ವಿಶೇಷವಾಗಿದೆ. ಪ್ರತಿಯೊಬ್ಬರಿಗೂ ಬಿಂದಾಸ್ ಆಗಿ ಇರಬೇಕೆಂದು ಆಸೆ ಇರುತ್ತದೆ. ಅಂತಹುದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ನಾಯಕಿ ಮೇಘನಾರಾಜ್ ಹೇಳಿದರು.

ನಾಯಕ ತಿಲಕ್, ನವ ಪ್ರತಿಭೆ ಶ್ರೀಮಹದೇವ ಕಡಿಮೆ ಸಮಯ ತೆಗೆದುಕೊಂಡರು. ದರ್ಶನ್ ಲಕ್ಕಿ ಹ್ಯಾಂಡ್. ಅವರು ಶುಭ ಹಾರೈಸಿದ ಚಿತ್ರಗಳು ಯಶಸ್ಸು ಕಂಡಿವೆ. ನಮ್ಮದು  ಅದೇ ಸಾಲಿಗೆ ಸೇರುತ್ತದೆ ಎಂಬುದು ಸಂಗೀತ ನಿರ್ದೇಶಕ ಶ್ರೀಧರ್‌ಸಂಭ್ರಮ್ ಮಾತು. ಇಂದು ಖುಷಿಯಾಗಿದೆ. ಏನು ಹೇಳಬೇಕೆಂದು ತೋಚುತ್ತಿಲ್ಲ. ಸಿನಿಮಾ ಮಾಡುವ ಆಸೆ ಇತ್ತು. ಅದು ಈಡೇರಿದೆ. ಮುಂದೆ ಒಳ್ಳೆ ಚಿತ್ರಗಳನ್ನು ಮಾಡುವ ಬಯಕೆ ಇದೆ ಎಂದು ನಿರ್ಮಾಪಕ ದೇವರಾಜ್‌ದಾವಣಗೆರೆ ತಿಳಿಸಿದರು.  ಆನಂದ್‌ಆಡಿಯೋದ ಶ್ಯಾಂ, ನಿರ್ದೇಶಕ ಶಶಾಂಕ್ ಶಿಷ್ಯನ ಚಿತ್ರಕ್ಕೆ ಹಾರೈಸಲು ಆಗಮಿಸಿದ್ದರು.

Leave a Comment