ಇಬ್ಬರು ಬಂಧನ – 17 ಕುರಿ ವಶ

ರಾಯಚೂರು.ಫೆ.23- ಮಸ್ಕಿ ತಾಲೂಕಿನ ಸಿಂಗಸನಹಳ್ಳದ ಹತ್ತಿರ 17 ಕುರಿ ಕಳುವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿ, ಕುರಿ ಮಾಲೀಕರ ವಶಕ್ಕೆ ನೀಡಲಾಗಿದೆ.
ಶಂಕ್ರಪ್ಪ ತಂದೆ ಮಾರೆಪ್ಪ ಎನ್ನುವವರಿಗೆ ಸೇರಿದ ಕುರಿ ಕಳುವು ಮಾಡಲಾಗಿತ್ತು. ಈ ಕುರಿತು ತನಿಖೆಗೆ ತಂಡ ರಚಿಸಲಾಗಿತ್ತು. ವೀರೇಶ ತಂದೆ ದುರ್ಗಪ್ಪ ಪೂಜಾರ, ಫಕೀರಪ್ಪ ತಂದೆ ಮುದಿಯಪ್ಪ ಇವರು ಕುರಿಗಳನ್ನು ಕದ್ದಿರುವ ಸಂಗತಿ ಪತ್ತೆ ಮಾಡಿದ ಇಬ್ಬರನ್ನು ಬಂಧಿಸಿ, 17 ಕುರಿಗಳನ್ನು ವಶಪಡಿಸಿಕೊಂಡಿದ್ದರು. ಫೆ.16 ರಂದು 27 ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನ‌ಡೆದಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಪೊಲೀಸ್ ಅಧಿಕಾರ ಹರಿಬಾಬು ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ತನಿಖೆ ಮಾಡಿದ ಪಿಎಸ್ಐ ದೀಪಕ್ ಭೂಸರೆಡ್ಡಿ ಸೇರಿದಂತೆ ಇನ್ನಿತರರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು.

Leave a Comment