ಇನ್ ಸ್ಟಾಗ್ರಾಂಗೆ ರಾಮ್ ಚರಣ್ ಎಂಟ್ರಿ..!

ಹೈದಾರಬಾದ್‌, ಜು ೧೩- ಮೆಗಾ ಸ್ಟಾರ್ ಫ್ಯಾಮಿಲಿಯ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿ. ಶುಭ ಶುಕ್ರವಾರದಂದು ಸೋಷಿಯಲ್ ಮೀಡಿಯಾದ ವೇದಿಕೆ ಇನ್ ಸ್ಟಾಗ್ರಾಂಗೆ ನಟ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ.
ಚೊಚ್ಚಲ ಪ್ರವೇಶದಲ್ಲಿ ತನ್ನ ಮೊದಲ ಪೋಸ್ಟರ್ ತಾಯಿ ಸುರೇಖಾ ಚಿರಂಜೀವಿ ಅವರಿಗೆ ಅರ್ಪಿಸಿದ್ದಾರೆ. 34 ವರ್ಷದ ಈ ಹೀರೋ, ತನ್ನ ಬಾಲ್ಯ ಹಾಗು ಕಾಲೇಜು ದಿನಗಳ ಫೋಟೋಗಳನ್ನು ತಮ್ಮ ಪ್ರೊಫೈಲ್ ನಲ್ಲಿ ಮೊದಲ ಬಾರಿಗೆ ಶೇರ್ ಮಾಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯೊಂದಿಗೆ ಕಳೆದ ಹಾಗೂ ಇತ್ತೀಚಿಗೆ ತನ್ನ ತಾಯಿಯ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಕ್ಯಾಪ್ಷನ್ ಕೊಟ್ಟಿರುವ ರಾಮ್ ಚರಣ್, ‘ಕೆಲವು ಸಂಗತಿಗಳು ಯಾವತ್ತಿಗೂ ಬದಲಾಗುವುದಿಲ್ಲ’. ನನ್ನ ಮೊದಲ ಪೋಸ್ಟ್ ನಿಮಗೆ ಅರ್ಪಣೆ. ಐ ಲವ್ ಯೂ ಅಮ್ಮʼ ಎಂದು ಬರೆದುಕೊಂಡಿದ್ದಾರೆ.

Leave a Comment