ಇನ್‌ಸ್ಟಾಗ್ರಾಮ್‌ಗೆ ಪ್ರಭಾಸ್ ಎಂಟ್ರಿ

ಅಭಿಮಾನಿಗಳ ಒತ್ತಾಸೆಗೆ ಮಣಿದ ಬಾಹುಬಲಿ

ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲೆ ಸಖತ್ ಸೌಂಡ್ ಮಾಡಿದ ಚಿತ್ರ. ಈ ಚಿತ್ರದಿಂದ  ಪ್ರಭಾಸ್‌ಗೆ ಭಾರೀ ಹೆಸರು ತಂದುಕೊಡುವುದರ ಜತೆಗೆ ಗಲ್ಲಾಪೆಟ್ಟಿಗೆಯಲ್ಲಿ ಧೊಳೆಬಿಸಿತ್ತು. ಇಷ್ಟೊಂದು ಜನಪ್ರಿಯತೆ ಪಡೆದ ಪ್ರಭಾಸ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲು  ಸಂಕೋಚಪಡುತ್ತಿದ್ದ ಸೂಪರ್ ಸ್ಟಾರ್  ಪ್ರಭಾಸ್ ಕೊನೆಗೂ ತಮ್ಮ ಅಭಿಮಾನಿಗಳ  ಒತ್ತಡಕ್ಕೆ ಮಣಿದು ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರದಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ಅಭಿಮಾನಿಗಳ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ.

ಪ್ರಭಾಸ್, ಶ್ರದ್ಧಾ ಕಪೂರ್ ಫೋಟೋ ವೈರಲ್!

  • ಬಾಹುಬಲಿ ಚಿತ್ರದ ಭರ್ಜರಿ ಯಶಸ್ಸಿನ ನಂತರ ‘ಸಾಹೋ’ ಆಗಿ ತೆರೆ ಮೇಲೆ ಬರಲು ನಟ ಪ್ರಭಾಸ್ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ನೆಚ್ಚಿನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್, ಪ್ರಭಾಸ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಶ್ರದ್ಧಾ ಹಾಗೂ ಪ್ರಭಾಸ್ ಒಟ್ಟಿಗೆ ನಟಿಸುತ್ತಿರುವುದು ವಿಶೇಷ. ಈ  ಇಬ್ಬರ ಕಾಂಬಿನೇಷನ್ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ  ಕುತೂಹಲ ಉಂಟಾಗಿದೆ. ಈಗ ಚಿತ್ರದ ಕೆಲವು ರೊಮ್ಯಾಂಟಿಕ್ ದೃಶ್ಯದ ಫೋಟೋಗಳು ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರೋ ಫೋಟೋದಲ್ಲಿ ಶ್ರದ್ಧಾ ಕಪೂರ್ ಪಿಂಕ್ ಬಣ್ಣದ ಉಡುಗೆಯಲ್ಲಿ ಮಿರಿ ಮಿರಿ ಮಿಂಚುತ್ತಿದ್ದಾರೆ. ಪ್ರಭಾಸ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ. ೩೦೦ ಕೋಟಿ ರೂಪಾಯಿ  ವಚ್ಚದಲ್ಲಿ  ತಯಾರಾಗಿರೋ ಸಾಹೋ ಚಿತ್ರ ಆಗಸ್ಟ್ ೧೫ ರಂದು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ  ಬೆಳ್ಳಿ ತೆರೆಗೆ ಅಪ್ಪಳಿಸಿದೆ.  ನಟ ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್ ಸೇರಿದಂತೆ ಮತ್ತಿತರರು ಸಾಹೋದ ಪ್ರಮುಖ ನಟರಾಗಿ ಕಾಣಿಸಿಕೊಂಡಿದ್ದಾರೆ. ಬಾಹುಬಲಿ-೨ ಚಿತ್ರದ ನಂತರ ಹಲವು ದಿನಗಳ ಬಳಿಕ ಪ್ರಭಾಸ್ ಅಭಿನಯದ ಸಾಹೋ ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ತಮ್ಮ ನಚ್ಚಿನ ನಾಯಕ ಪ್ರಭಾಸ್ ಅಭಿನಯದ ಈ ಚಿತ್ರ ಸಹಜವಾಗಿಯೇ ಅಪಾರ ನಿರೀಕ್ಷೆ ಹುಟ್ಟಿಸಿದೆ.

ಪ್ರಭಾಸ್ ಕೇವಲ ಫೇಸ್‌ಬುಕ್ ಅಕೌಂಟ್ ಹೊಂದಿದ್ದು, ೧೦ ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆ.  ಬಾಹುಬಲಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಗಳಿಸಿದ  ಬಳಿಕ, ಜಗತ್ತಿನಾದ್ಯಂತ ಇರುವ  ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಟನನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಪ್ರಭಾಸ್ ಅವರ  ಜೀವನದ ಒಳನೋಟಗಳನ್ನು ತಿಳಿದುಕೊಳ್ಳಲು ಬಯಸಿದ್ದರು.

vaividya-prabhas1

ಇತ್ತೀಚೆಗೆ ಬಿಡುಗಡೆಯಾದ ಅವರ ಮುಂದಿನ ಚಿತ್ರ ‘ಸಾಹೊ’ದ ಟ್ರೇಲರ್ ಸೇರಿದಂತೆ, ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಅವರ ಪ್ರತಿಯೊಂದು ಉಲ್ಲೇಖವೂ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಟ್ರೇಲರ್ ವೀಕ್ಷಿಸಿದರವರ ಸಂಖ್ಯೆ  ಕೇವಲ ೩ ದಿನಗಳಲ್ಲಿ  ೧೫ ದಶಲಕ್ಷ ದಾಟಿದೆ.  ಇದು ಚಿತ್ರದ ಮೇಲಿರುವ ಅಪಾರ ನಿರೀಕ್ಷೆಗೆ ತಾಜಾ ಉದಾಹರಣೆ.

ಹೊಸ ಚಿತ್ರದಲ್ಲಿ ಪ್ರಭಾಸ್ ಅವರ ಪಾತ್ರದ ಕುರಿತು ಅವರ ಅಭಿಮಾನಿಗಳು ಅಪಾರ ನಿರೀಕ್ಷೆ ಹೊಂದಿದ್ದಾರೆ. ಅಲ್ಲಿ ಅವರು ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಚಿತ್ರ ಜೀವನದಲ್ಲೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.

೭ ಲಕ್ಷ ಹಿಂಬಾಲಕರು

ಪ್ರಭಾಸ್ ಯಾವಾಗ ಇನ್‌ಸ್ಟಾಗ್ರಾಮ್‌ಗೆ ಬರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳು, ಅವರು ಖಾತೆ ತೆರೆಯುತ್ತದ್ದಂತೆ, ಅವರ ಹಿಂಬಾಲಕರಾಗಿದ್ದಾರೆ. ಕೆಲವೇ ದಿನಗಳಲ್ಲಿ ಪ್ರಭಾಸ್ ಸುಮಾರು ೭ ಲಕ್ಷ ಫಾಲೋವರ್‌ಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಏಪ್ರಿಲ್ ೧೩ಕ್ಕೆ ಇನ್‌ಸ್ಟಾಗ್ರಾಂಗೆ ಪವೇಶ ಕೊಟ್ಟಿರುವ ಪ್ರಭಾಸ್ ಇನ್ನು ಒಂದು ಸ್ಟೇಟಸ್ ಕೂಟ ಅಪ್‌ಲೋಡ್ ಮಾಡಿಲ್ಲ. ಅಷ್ಟೇ ಏಕೆ ಒಂದು ಫೋಟೊವನ್ನು ಹಾಕಿಲ್ಲ.ಆದರೂ  ಲಕ್ಷಾಂತರ ಅಭಿಮಾನಿಗಳು ಫಾಲೊವರ್‌ಗಳಾಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೂ ಅವರು ಯಾರನ್ನೂ ಫಾಲೋ ಕೂಡ ಮಾಡುತ್ತಿಲ್ಲ.. ಖಾಲಿ ಖಾಲಿ ಖಾತೆಗೆ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ ಅಂದರೆ ನಿಜಕ್ಕೂ ಅಚ್ಚರಿ. ಹೇಗಿದೆ ನೋಡಿ ಪ್ರಭಾಸ್ ಅಭಿಮಾನಿಗಳ ಮಹಿಮೆ.

ಪ್ರಭಾಸ್‌ನ ಪಿಆರ್ ಟೀಮ್‌ವೊಂದು ಪ್ರಭಾಸ್ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಪ್ರಕಟಣೆ ನೀಡಿದ್ದೇ ತಡ, ಪ್ರಭಾಸ್ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಜಪಾನ್,ಚೀನಾ ಸೇರಿದಂತೆ ದೇಶ ವಿದೇಶದ ಅಭಿಮಾನಿಗಳು ಮುಗಿಬಿದ್ದು ಖಾತೆಯನ್ನು ಫಾಲೋ ಮಾಡಲು ಶುರುಮಾಡಿದ್ದಾರೆ. ಪ್ರಭಾಸ್ ಅವರ ಮೊದಲ ಪೋಸ್ಟ್ ಹೇಗಿರುತ್ತದೆ ಎಂದು ನೋಡಲು ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Comment