ಇನ್ನೊಂದು ಸಾರಿ ಸಾಲ ಕೊಟ್ಟೀದ್ದೀನಿ ಅಂದ್ರೇ ಕೇಸ್

ಬೆಂಗಳೂರು : ನನಗೆ ಸಾಲ ಕೊಟ್ಟಿದ್ದೇನೆ ಎಂದು ಪದೇ ಪದೇ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಟಿ ಬಿ ನಾಗರಾಜ್ ಹೇಳುತ್ತಿದ್ದಾರೆ. ಅವರು ಇನ್ನೊಮ್ಮೆ ಹೀಗೆ ನನಗೆ ಸಾಲ ಕೊಟ್ಟಿದ್ದೇನೆ ಅಂತ ಹೇಳಿದ್ರೇ, ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮಾಲೂರು ಶಾಸಕ ನಂಜೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲೂರು ಶಾಸಕ ನಂಜೇಗೌಡ, ನಾನು ಎಂಟಿಬಿ ನಾಗರಾಜ್ ಅವರಿಂದ ಯಾವುದೇ ಸಾಲವನ್ನು ಪಡೆದಿಲ್ಲ. ಆದ್ರೇ.., ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಫಾರ್ಟಿ ಫಂಡ್ ಅಂತ ಎರಡು ಕೋಟಿ ಎಂಟಿಬಿ ನಾಗರಾಜ್ ಕೊಟ್ಟಿದ್ದರು. ಇದೇ ಹಣವನ್ನು ಎಂಟಿಬಿ ನಾಗರಾಜ್ ಈಗ ಸಾಲ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಕೊಟ್ಟಿರುವ ಹಣ ಕೋಲಾರದ ಮುಖಂಡರೊಬ್ಬರ ಅಕೌಂಟ್ ಗೆ ಹಾಕಿದ್ದು. ಅದು ಸಿಕ್ಕಿದ್ದು ಚುನಾವಣೆ ಮುಗಿದು 8 ದಿನಗಳ ನಂತ್ರ, ಆದ್ರೇ ಅದೇ ಹಣವನ್ನು ಫಾರ್ಟಿ ಫಂಡ್ ಗೆ ಅಂತ ಹೊಸೂರಿನ ಅಕೌಂಟ್ ಗೆ ಇವತ್ತು ಹಾಕಿದ್ದೇನೆ. ಮತ್ತೆ ಏನಾದ್ರೂ ಎಂಟಿಬಿ ನಾಗರಾಜ್ ನನಗೆ ಸಾಲ ಕೊಟ್ಟಿದ್ದೇನೆ ಎಂದು ಹೇಳಿದ್ರೇ, ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

Leave a Comment