ಇದೇ ಶನಿವಾರ ಕೊಹ್ಲಿ ಜತೆಯಾಗಲಿರುವ ಪತ್ನಿ ಅನುಷ್ಕಾ

ಲಂಡನ್‌, ಜೂ 19 – ಶನಿವಾರ ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್‌ ಪಂದ್ಯದ ವೇಳೆಗೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ತನ್ನ ಪತಿ ಹಾಗೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಜತೆಯಾಗಲಿದ್ದಾರೆ.
ಈ ವಾರದ ಆರಂಭದಲ್ಲಿ ವಿರುಷ್ಕಾ ದಂಪತಿಗಳು ಲಂಡನ್‌ನಲ್ಲಿ ಭೇಟಿಯಾಗಿರುವ ಫೋಟೊವೊಂದನ್ನು ಕೊಹ್ಲಿ ಅಭಿಮಾನಿಗಳ ಪೇಜ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿತ್ತು.

ಕಳೆದ ಮಂಗಳವಾರ “ಲಂಡನ್‌ನ ದಿ ಓಲ್ಡ್‌ ಬಾಂಡ್‌ ಸ್ಟ್ರೀಟ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಐ ಲವ್‌ ಅನುಷ್ಕಾ ನೂತನ ಕೇಶವಿನ್ಯಾಸ” ಎಂಬ ಶೀರ್ಷಿಕೆಯೊಂದಿಗೆ ಅವರ ಜತೆಯಲ್ಲಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿತ್ತು.
ಟೂರ್ನಿಯ ಆರಂಭದಲ್ಲೇ ಅನುಷ್ಕಾ ತನ್ನ ಪತಿ ವಿರಾಟ್‌ ಹಾಗೂ ತಂಡವನ್ನು ಪ್ರೋತ್ಸಾಹಿಸಲು ಇಲ್ಲಿಗೆ ಆಗಮಿಸಿದ್ದರು. ಈಗ ಮತ್ತೊಮ್ಮೆ ಶನಿವಾರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಪ್ರವಾಸಗಳಿಗೂ ಬಾಲಿವುಡ್‌ ತಾರೆ ತೆರಳಿದ್ದರು.

ಟೂರ್ನಿ ಆರಂಭದ 20 ದಿನಗಳಲ್ಲಿ ಟೀಂ ಇಂಡಿಯಾ ಆಟಗಾರರ ಕುಟುಂಬದ ಸದಸ್ಯರು ತಂಡದೊಂದಿಗೆ ಪ್ರಯಾಣ ಮಾಡಲು ನಿಷೇಧಿಸಿತ್ತು. ಇದೀಗ 20 ದಿನಗಳು ಮುಕ್ತಾಯವಾಗಲಿದ್ದು, ಶನಿವಾರ ನಡೆಯುವ ಪಂದ್ಯದ ಸಂದರ್ಭದಲ್ಲಿ ತಂಡದ ಆಟಗಾರರ ಕುಟುಂಬದ ಸದಸ್ಯರು ಕಾಣಿಸಿಕೊಳ್ಳಲಿದ್ದಾರೆ.

Leave a Comment