ಇದು ಹೊಸದಲ್ಲ – ಚಕ್ರವರ್ತಿ ಸೂಲಿಬೆಲೆ

ಹಾವೇರಿ : ದೇಶದ್ರೋಹಿಗಳು ನನ್ನನ್ನು ಹತ್ಯೆ ಮಾಡಲು ಟಾರ್ಗೆಟ್ ಮಾಡಿರುವುದಕ್ಕೆ ಹೆಮ್ಮೆ ಅನಿಸುತ್ತದೆ. ನನಗೇನೂ ಇದು ಹೊಸತಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ಡಿ.22 ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸ್ಕೆಚ್ ನಡೆದಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ ದೇಶವನ್ನು ಅಸ್ಥಿರಗೊಳಿಸುವಂತಹ ಹಾಗೂ ತುಂಡು, ತುಂಡು ಮಾಡುವಂತಹ ವ್ಯಕ್ತಿಗಳು ನನ್ನನ್ನು ಕೊಲೆ ಮಾಡುತ್ತಾರೆ ಎಂಬುದು ಆಶ್ಚರ್ಯಕರ.ಅಂದು ನಡೆದಿದ್ದ ಘಟನೆಯ ಬಗ್ಗೆ ಪೊಲೀಸ್ ಕಮೀಷನರ್ ಅವರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದರು.

ದೇಶದಲ್ಲಿ ಶಾಂತಿ, ಸುವ್ಯವಸ್ಥೆ ತೆಗೆದುಕೊಂಡು ಹೋಗುವಂತದ್ದು ಹಿಂದೂ ಸಮಾಜ ಪರವಾಗಿ ಹೋರಾಟ ಮಾಡಿದರೆ ಕೊಲೆ ಬೆದರಿಕೆಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಇಂತಹ ಕೊಲೆಗಾರರು ಎಸ್‍ಡಿಪಿಐ ಹಾಗೂ ಕರ್ನಾಟಕದಲ್ಲಿ ಐಸಿಸ್ ನಂತಹ ಉಗ್ರ ಸಂಘಟನೆ ನಿರ್ಮಾಣ ಮಾಡಬೇಕು ಎಂಬ ಕನಸು ಇದೆ. ಆದರೆ ಇಂತಹ ಸಂಘಟನೆಗಳು ಹತ್ತಿಕ್ಕಲು ನಾವು ಅಡ್ಡಗಾಲು ಆಗಿದ್ದೇವೆ. ಹೀಗಾಗಿ ಹತ್ಯೆಗೆ ಸಂಚು ರೂಪಿಸಿದ್ದರು. ತಮಗೆ ಇಂತಹ ಘಟನೆ ಹೊಸದೇನಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು…

Leave a Comment