ಇದು ಅಲರ್ಜಿ, ಫ್ಲೂ… ಇಲ್ಲ ಕೊರೊನಾ ಲಕ್ಷಣವೇ ಆತಂಕ ಬೇಡ

ಈ ಕೊರೋನಾ  ಸೋಂಕು ವಿಶ್ವದಾದ್ಯಂತ ಸಾವಿರಾರು ಜನರಿಗೆ ಹರಡಿದೆ ಆತಂಕ ಸೃಷ್ಟಿಸಿದೆ. ಇಂಟರ್ನೆಟ್, ಎಲ್ಲಾ ನ್ಯೂಸ್ ಚಾನೆಲ್‌ಗಳು, ದಿನಪತ್ರಿಕೆಗಳ ತುಂಬೆಲ್ಲಾ ಕೊರೋನಾವೈರಸ್‌ನ ಸುದ್ದಿಯೇ ತುಂಬಿ ತುಳುಕುತ್ತಿದೆ. ಇವುಗಳಲ್ಲಿ ಪ್ರಕಟವಾಗುತ್ತಿರುವ ಸೋಂಕಿನ ಸಂಖ್ಯೆಗಳು, ಮಾಹಿತಿಗಳು ಗೊಂದಲ ಮತ್ತು ಆತಂಕಕ್ಕೆ ಎಡೆ ಮಾಡಿಕೊಡುತ್ತಿವೆ. ನಮ್ಮ ಸುತ್ತಮುತ್ತ ಇಷ್ಟೆಲ್ಲಾ ಆಗುತ್ತಿದ್ದರೂ ನೀವು ಪ್ರತಿ ಬಾರಿ ಸೀನುವಾಗ ಅಥವಾ ಕೆಮ್ಮುವಾಗ ಆತಂಕಕ್ಕೆ ಒಳಗಾಗುವುದು ಸಾಮಾನ್ಯ ಎನಿಸಿದೆ.
ಈ ಕೊರೋನಾವೈರಸ್ ಬಗ್ಗೆ ಇಷ್ಟೊಂದು ಗಂಭೀರವಾಗಿದ್ದರೂ, ಸಾಮಾಜಿಕ ಅಂತರದಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಈ ಸೋಂಕು ಹರಡುವ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ಮೂಗು ಸೋರುವಿಕೆ ಆಗುತ್ತಿದ್ದರೆ ಅದರಿಂದ ಏನಾದರೂ ಸಮಸ್ಯೆ ಎದುರಾಗಬಹುದೇ ಎಂದು ಭಾವಿಸುವುದಾದರೆ, ನೀವು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿರುತ್ತದೆ.

ಕೊರೋನಾವೈರಸ್ ಸೋಂಕು ತಟ್ಟಿರುವುದು ೨ ರಿಂದ ೧೪ ದಿನಗಳ ನಂತರ ತಿಳಿಯುತ್ತದೆ. ಇದು ನಿಮ್ಮ ಕೆಳಗಿನ ಶ್ವಾಸಕೋಶ ಮಾರ್ಗದ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ಮಾಂಸಖಂಡಗಳು ಮತ್ತು ಕೀಲು ನೋವು ಕಾಣಿಸಿಕೊಳ್ಳುವುದು, ಗಂಟಲು ನೋವು, ಕೆಮ್ಮು ಮತ್ತು ಸಾಧಾರಣದಿಂದ ಅಧಿಕ ಜ್ವರ ಬರುವುದು ಸೇರಿದಂತೆ ಇನ್ನಿತರೆ ಅಂಶಗಳು ಈ ಕೋವಿಡ್-೧೯ ನ ಗುಣಲಕ್ಷಣಗಳಾಗಿವೆ.

ಸೀನುವುದು
ಸಾಮಾನ್ಯ ಶೀತವಾದಾಗ ಮತ್ತು ಕೆಲವೊಮ್ಮೆ ಅಲರ್ಜಿಯಿಂದ ಸೀನುವ ಲಕ್ಷಣವಿರುತ್ತದೆ. ಇದು ಕೊವಿಡ್-೧೯ ಗೆ ಹೆಚ್ಚು ಸಂಬಂಧಿತವಾಗಿರುವುದಿಲ್ಲ. ಶೀತ ಸಾಮಾನ್ಯವಾಗಿ ಕೆಲವು ದಿನಗಳ ನಂತರ ಹೋಗುತ್ತದೆ. ಆದರೆ, ಇದಾದ ಬಳಿಕವೂ ಕೆಲವು ದಿನಗಳವರೆಗೆ ಸೀನು ಬರುತ್ತದೆ. ಇದು ಅಲರ್ಜಿಯಿಂದ ಆಗಿರುವ ಸಾಧ್ಯತೆಗಳಿರುತ್ತದೆ. ಆದರೆ, ಸಾಮಾನ್ಯವಾಗಿ ಈ ಸೀನು ಒಂದೇ ಕೊವಿಡ್-೧೯ ನ ಗುಣಲಕ್ಷಣವಾಗಿರುವುದಿಲ್ಲ.

ಫ್ಲೂ vs ಕೊವೀದ್-೧೯

ಈ ಎರಡೂ ಲಕ್ಷಣಗಳು ಒಂದೇ ರೀತಿ ಇರುತ್ತವೆ. ಇವೆರಡೂ ನಿಮ್ಮನ್ನು ಜಡಗೊಳಿಸುತ್ತವೆ. ಒಣ ಕೆಮ್ಮು, ತಲೆ ನೋವು, ಗಂಟಲು ನೋವು, ಜ್ವರ ಈ ಎರಡರ ಸಾಮಾನ್ಯ ಗುಣಲಕ್ಷಣಗಳಾಗಿವೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ಉಸಿರಾಟದಲ್ಲಿ ತೊಂದರೆ ಉಂಟಾಗುವುದು.

ಅಲರ್ಜಿಗಳು vs ಕೊವಿಡ್-೧೯

ಸೀನುವುದು, ಮೂಗು ಸೋರುವುದು, ಮೂಗು ಉರಿ ಮತ್ತು ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುವುದು, ದದ್ದು, ತಲೆನೋವು ಮತ್ತು ಕೆಮ್ಮು ಸೇರಿದಂತೆ ಇನ್ನಿತರೆ ಅಲರ್ಜಿಗಳು ಇವೆ. ಈ ಅಲರ್ಜಿಗಳು ಪದೇ ಪದೆ ಬರುವ ಜನರೂ ಇರುತ್ತಾರೆ. ನೀವು ಅಲರ್ಜಿಯನ್ನು ಹೊಂದಿದ್ದೀರಿ ಎಂಬುದು ನಿಮಗೆ ತಿಳಿದಿರುತ್ತದೆ. ಒಂದು ವೇಳೆ, ನಿಮಗೆ ಅಲರ್ಜಿಕ್ ಇಲ್ಲದವರಾಗಿದ್ದು, ಈ ಗುಣಲಕ್ಷಣಗಳು ಕಂಡುಬಂದರೂ ಕೊವಿಡ್-೧೯ ಲಕ್ಷಣ ಇರಬೇಕೆಂಬ ಆತಂಕ ಬೇಡ. ಅದು ಸಾಮಾನ್ಯ ಶೀತವಾಗಿರಬಹುದು ಅಥವಾ ಹೊಸ ಅಲರ್ಜಿ ಉಂಟಾಗಿರುವ ಸಾಧ್ಯತೆಗಳಿರುತ್ತವೆ. ಆದರೆ, ಅದು ಕೊವಿಡ್-೧೯ ಆಗಿರುವುದಿಲ್ಲ. ದದ್ದುಗಳಂತಹ ಲಕ್ಷಣಗಳು ಅಲರ್ಜಿಗೆ ಸಂಬಂಧಿಸಿದ್ದಾಗಿರುತ್ತವೆ.

ಹೆಚ್ಚು ಜಾಗರೂಕವಾಗಿರುವ ಅಗತ್ಯವಿದೆ

ಕೊರೋನಾವೈರಸ್ ಸೋಂಕು ಹರಡಿರುವ ಪ್ರದೇಶಗಳಿಗೆ ನೀವು ಭೇಟಿ ನೀಡಿದ್ದರೆ ನಿಮಗೆ ಸಣ್ಣ ಪ್ರಮಾಣದ ಗುಣಲಕ್ಷಣದ ಅನುಮಾನ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಅದೇರೀತಿ, ಸೋಂಕು ಪೀಡಿತ ಪ್ರದೇಶದಲ್ಲಿ ವಾಸಿಸುವವರು ನಿಮ್ಮ ಬಳಿಗೆ ಅತಿಥಿಗಳಾಗಿ ಬಂದು ಹೋದ ನಂತರ ನಿಮ್ಮ ದೇಹದಲ್ಲಿನ ಕೆಲವು ಗುಣಲಕ್ಷಣಗಳ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ. ಸೋಂಕು ಪೀಡಿತ ಪ್ರದೇಶದಲ್ಲಿ ನೀವು ವಾಸಿಸುತ್ತಿದ್ದರೆ ಅಥವಾ ಅದರ ಹತ್ತಿರ ವಾಸವಾಗಿದ್ದರೆ ನೀವು ಜಾಗರೂಕರಾಗಿರಬೇಕು ಮತ್ತು ಸೂಕ್ತ ಆರೋಗ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಾಗ ವೈದ್ಯಕೀಯ ನೆರವು ಪಡೆಯಿರಿ ಎಂದು ಬಿಜಿಎಸ್‌ನ ಡಾ.ಸಿರಿ ಕಾಮತ್ ಅವರು ತಿಳಿಸಿದ್ದಾರೆ.

Leave a Comment