ಇತಿ ಎರಡನೇ ಇನ್ನಿಂಗ್ಸ್-‌ ಭ್ರಷ್ಟ್ರಾಚಾರ ವಿರೋಧಿ ಆಯೋಗದ ಸದಸ್ಯೆ

ಇತಿ ಆಚಾರ್ಯ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆ ಕವಚ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಪರದೆ ಮೇಲೆ ಅಭಿನೇತ್ರಿಯಾಗಿರುವ ಈಕೆ ನಿಜ ಜೀವನದಲ್ಲಿ ಮತ್ತೊಂದು ಪಾತ್ರ ನಿರ್ವಹಿಸುತ್ತಿದ್ದಾರೆ. ಈಕೆ ನಿಜ ಜೀವನದಲ್ಲಿ ಮತ್ತೊಂದು ಪಾತ್ರ ನಿರ್ವಹಿಸುತ್ತಿದ್ದಾರೆ. ಅದೇನೂ ಅಂತೀರಾ ? ಈಗಂತೂ ಎಲ್ಲೆಲ್ಲೂ ಭ್ರಷ್ಟ್ರಾಚಾರ ತಾಂಡವ ವಾಡುತ್ತಿದೆ. ಇದರ ವಿರುದ್ಧ ಎಷ್ಟೇ ಧ್ವನಿ ಎತ್ತಿ ಹೋರಾಟ ನಡೆಸಿದರೂ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಈಗ ಚಲನಚಿತ್ರ ತಾರೆಯರೂ ಕೈ ಜೋಡಿಸಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಇತಿ ಆಚಾರ್ಯ ಅವರನ್ನು ಬೆಂಗಳೂರಿನ ಭ್ರಷ್ಟ್ರಾಚಾರ ವಿರೋಧಿ ಆಯೋಗದ ಸದಸ್ಯೆಯನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಇತಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

iti-acharya1
ಅಂದ ಹಾಗೆ “ಧ್ವನಿ” ಡೀಲ್ ರಾಜ ಚಿತ್ರಗಳಲ್ಲಿ ನಟಿಸಿದ್ದ ಇತಿ ಆಚಾರ್ಯ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿರುವ ಶಿವರಾಜ್‌ಕುಮಾರ್ ಜತೆ ಕವಚ ಚಿತ್ರದಲ್ಲಿ ಪಂಜಾಬಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ನಂತರ “ಕಾಂಟ್ರಾಕ್ಟ್” ಚಿತ್ರದಲ್ಲಿ ನಟಿಸಿದ ನಂತರ ಟಾಲಿವುಡ್‌ನಲ್ಲೂ “ಲಕನ್” ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಂಬಂಧಿ ಅಲ್ಲೂ ವಂಶಿ ನಾಯಕನಾಗಿ ನಟಿಸಿದ್ದರು. ಅಷ್ಟೇ ಅಲ್ಲ ತಮಿಳಿನ ಆಲ್ಬಂ ಹಾಡಿಗೆ ಹೆಜ್ಜೆ ಹಾಕಿರುವ ಇತಿ “ಮಿಯಾ ಮೋರ್” ಎಂಬ ಇಂಗ್ಲಿಷ್ ಕಿರು ಚಿತ್ರದಲ್ಲೂ ಈಕೆ ಅಭಿನಯಿಸಿ ತಮ್ಮದೇ ವರ್ಚಸ್ಸನ್ನು ಚಿತ್ರರಂಗದಲ್ಲಿ ಮೂಡಿಸಿದ್ದಾರೆ.
ನಟನೆಯ ಜೊತೆ ಜೊತೆಗೆ ಇತಿ ಆಚಾರ್ಯ ಭ್ರಷ್ಟ್ರಾಚಾರ ವಿರುದ್ಧ ಧ್ವನಿ ಎತ್ತಲು ಮುಂದಾಗಿದ್ದಾರೆ. ಎಲ್ಲಾ ರಂಗದಲ್ಲೂ ಭ್ರಷ್ಟ್ರಾಚಾರ ತಾಂಡವ ವಾಡುತ್ತಿದೆ. ಭ್ರಷ್ಟ್ರಾಚಾರ ನಿರ್ಮೂಲನೆಗೆ ಎಷ್ಟೇ ಪ್ರಯತ್ನ ಪಟ್ಟರು. ಅದನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಆದರೂ ಹೋರಾಟ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಕವಚ ಚಿತ್ರದಲ್ಲಿ ನಟಿಸಿರುವ ಇತಿ ಆಚಾರ್ಯ ಅವರನ್ನು ಬೆಂಗಳೂರಿನ ಭ್ರಷ್ಟ್ರಾಚಾರ ವಿರೋಧಿ ಸದಸ್ಯೆಯನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಹೊಸ ಪಾತ್ರ ಮಾಡಲು ಅಣಿಯಾಗಿದ್ದಾರೆ.

iti-acharya
ಈ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ತಮಗೆ ತುಂಬಾ ಸಂತೋಷವಾಗುತ್ತದೆ. ನಮ್ಮ ದೇಶದಲ್ಲಿ ಭ್ರಷ್ಟ್ರಾಚಾರ ವ್ಯಾಪಕವಾಗಿದೆ. ನಾವೆಲ್ಲರೂ ಭ್ರಷ್ಟ್ರಾಚಾರ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಹೋರಾಟ ಮಾಡಬೇಕಾಗಿದೆ ಎನ್ನುತ್ತಾರೆ ಇತಿ ಆಚಾರ್ಯ. ಕಳೆದ ಮೂರು ವರ್ಷಗಳಿಂದ ಇತಿ ಅಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಭ್ರಷ್ಟ್ರಾಚಾರ ವಿರೋಧಿ ಆಯೋಗದ ಸದಸ್ಯತರದ ಹೊಣೆಯನ್ನು ಹೊತ್ತುಕೊಂಡು ಸಾಮಾಜಿಕ ಪಿಡುಗಾಗಿರುವ ಭ್ರಷ್ಟ್ರಾಚಾರ ನಿರ್ಮೂಲನೆಗೆ ಟೊಂಕಕಟ್ಟಿ ನಿಂತಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ತಾನೊಬ್ಬ ನಟಿಯಾಗಲು ಆಶೀರ್ವಾದ ಸಿಕ್ಕಿದೆ. ಈ ವೇದಿಕೆಯನ್ನೇ ಬಳಸಿಕೊಂಡು ಭ್ರಷ್ಟ್ರಾಚಾರ ವಿರುದ್ಧ ಧ್ವನಿಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ. ಈ ಮೂಲಕ ಸಾಮಾಜಿಕ ಸುಧಾರಣೆ ತಂದು ಸಮಾಜದಲ್ಲಿ ಬದಲಾವಣೆತರಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಇತಿ.

ಇತಿ ಆಚಾರ್ಯ ರಾಜಾಸ್ತಾನದಲ್ಲಿ ಜನಿಸಿ ಪಂಜಾಬ್‌ನಲ್ಲಿ ಬೆಳೆದರು. ಈಕೆಯ ತಾಯಿ ಮೂರು ವರ್ಷದವಳಾಗಿದ್ದಾಗಲೇ ಕಥಕ್ ಮತ್ತು ರಾಜಸ್ತಾನಿ ನೃತ್ಯ ಅಭ್ಯಾಸ ಮಾಡಲು ಸೇರಿಸಿದರು. ಶಾಲಾ ದಿನಗಳಲ್ಲೇ ರಂಗಭೂಮಿಯ ಹವ್ಯಾಸವೂ ಇತ್ತು. ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪದವಿ ಪಡೆಯಲು ಬೆಂಗಳೂರಿನತ್ತ ಮುಖ ಮಾಡಿದರು.

iti-acharya-pics-1
2010ರಲ್ಲಿ ಮೊದಲ ಬಾರಿ ರೂಪದರ್ಶಿಯಾಗಿ ವೃತ್ತಿ ಆರಂಭಿಸಿದಾಗ ಹಲವು ಪೋಟೋ ಶೂಟ್ ಮತ್ತು ಫ್ಯಾಷನ್ ಶೋಗಳಲ್ಲೂ ಭಾಗವಹಿಸಿದ್ದ ಇತಿ. ರೂಪದರ್ಶಿಗೆ ಇರಬೇಕಾದ ಅತ್ಯಾಕರ್ಷಕ ಉಡುಗೆ ಧರಿಸುವ ಜ್ಞಾನ ಹೊಂದಿದ್ದರಿಂದ ಗ್ಲಾಮರ್ ಜಗತ್ತಿನಲ್ಲಿ ಖ್ಯಾತಿ ಪಡೆಯಲು ಸಾಧ್ಯವಾಯಿತು. ಗ್ಲಾಮರ್ ಜಗತ್ತಿನಲ್ಲಿ ಮಿಂಚಿದ್ದೇ ತಡ 2012ರಲ್ಲಿ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆಯುವ ಮೂಲಕ ಇತಿ ಆಚಾರ್ಯ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಯಿತು.
2015ರಲ್ಲಿ ಸತ್ಯವತಿ ಎಂಬ ಮೊದಲ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದರು. 2016ರಲ್ಲಿ ಇತಿ ಆಚಾರ್ಯ ಮಿಸ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈಗ ಬೆಂಗಳೂರಿನಲ್ಲಿ ಭ್ರಷ್ಟ್ರಾಚಾರ ವಿರೋಧಿ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ.

Leave a Comment