ಇತಿಹಾಸ ಪ್ರಸಿದ್ದ ಕೈದಾಳ ಚನ್ನಕೇಶವ

ತುಮಕೂರು- ಕೈಧಾಳ ಎಂದೊಡನೆಯೇ ನಮಗೆ ನೆನಪಾಗುವುದು ಜಕಣಾಚಾರಿ ಈ ಶಿಲ್ಪಿಗಾರನ ಹುಟ್ಚೂರು, ಅಲ್ಲದೇ ಆತ ಕೆತ್ತಿದ ಶಿಲ್ಪಿ ಚನ್ನಕೇಶವ ವಿಗ್ರಹದಿಂದಲೂ ಪ್ರಸಿದ್ದ. ಇತ್ತೀಚಿಗೆ ನಡೆದ ಅಮಾನವೀಯ ಘಟನೆಯಿಂದ (ಜಮೀನು ವಿವಾದ) ಶ್ರೀ ಚನ್ನಕೇಶವ ವಿಗ್ರಹವನ್ನು ಕಿಡಿಗೇಡಿಯೊಬ್ಬ ತುಂಡರಿಸಿದ್ದರಿಂದ ಇಡೀ ನಾಡಿನ ಗಮನ ಸೆಳೆದಿತ್ತು. ಅದನ್ನು ಪುನರ್ ಜೋಡಿಸಲಾಗಿದೆ. ಐತಿಹಾಸಿಕ ಕೈಧಾಳ ಗ್ರಾಮ ತುಮಕೂರು ಜಿಲ್ಲಾ ಕೇಂದ್ರಕ್ಕೆ 8 ಕಿ.ಮೀ. ದೂರದಲ್ಲಿದೆ. ಇಲ್ಲಿನ ಶ್ರೀ ಚನ್ನಕೇಶವನೆ ಈ ನಾಡಿನ ಆರಾಧ್ಯ ದೈವ.

ಜಕಣಾಚಾರಿ ನಾನಾ ಭಾಗಗಳಲ್ಲಿ ಶಿಲ್ಪ ಕಲೆಗಳಲ್ಲಿ, ಶಿಲ್ಪ ಚಾತರ್ಯ ಪ್ರದರ್ಶಿಸುತ್ತದೆ. ತನ್ನ ಅದ್ಭುತ ಕಲಾಕೃತಿಗಳಲ್ಲಿ ಚಿರಸ್ಥಾಯಿಯಾಗದನ್ನು ಈತ ಮತ್ತೆ ತೊರೆದು ದೇಶಾಂತರದಲ್ಲಿದ್ದಾಗ ಜನಿಸಿದವನು. ಡಂಕಣಚಾರ್ಯ ಈತನ ಬಳಿಯಲ್ಲಿ ದೊಡ್ಡವನಾಗಿ, ಸ್ವಾತಂತ್ರ್ಯವಂತನಾಗಿ, ತನ್ನ ತಂದೆ ಜಕಣಾಚಾರಿಯನ್ನು ಹುಡುಕುತ್ತಾ ಬೇಲೂರು ಕಪ್ಪೆ ಚೆನ್ನಕೇಶರಾಯ ದೇಗುಲದ ಬಳಿ ಬಂದು ಕೆತ್ತನೆ ನಿರ್ವಹಿಸುತ್ತಿದ್ದ. ಜಕಣಾಚಾರಿ, ಕಪ್ಪೆ ಚನ್ನಿಗರಾಯನ ವಿಗ್ರಹದಲ್ಲಿ ಲೋಪ ಮಾಡಿರುವುದನ್ನು ಡಕಣಚಾರಿ ಪತ್ತೆ ಹಚ್ಚಿದಾಗ ತಂದೆ-ಮಗನ ನಡುವೆ ವಾಗ್ವಾದ ನಡೆದು ಡಕಣಾಚಾರಿ ತಪ್ಪನ್ನು ಗುರುತಿಸಿದಾಗ, ತಂದೆ ಜಕಣಾಚಾರಿ ತನ್ನ ಕೈ ಕತ್ತರಿಸಿಕೊಂಡು ತನ್ನ ಹುಟ್ಟೂರಾದ ಕೈಧಾಳಕ್ಕೆ ಹಿಂದಿರುಗಿದ. ಶ್ರೀ ಚನ್ನಕೇಶವಸ್ವಾಮಿ ಜಕಣಾಚಾರಿ ಕನಸಿನಲ್ಲಿ ಬಂದು ಕೈದಾಳದಲ್ಲಿ ದೇಗುಲ ನಿರ್ಮಿಸು ಎಂದಾಗ ಒಂದೇ ರಾತ್ರಿಯಲ್ಲಿ ತನ್ನ ಒಂದೇ ಕೈಯಲ್ಲಿ ಧಾಳ ಹಿಡಿದು, ಶ್ರೀ ಚನ್ನಕೇಶವಸ್ವಾಮಿ ವಿಗ್ರಹವನ್ನು ಕಡೆದಿದ್ದರಿಂದ ಕೈ ಬಂತಂತೆ. ಕೈ ಬಂದಿದ್ದರಿಂದ ಕೈ+ಧಾಳ ಇಂದು ಕೈಧಾಳವಾಗಿದೆ.

Leave a Comment