ಇತಿಹಾಸ, ಪರಂಪರೆಯನ್ನು ಮರೆಯುತ್ತಿರುವುದು ವಿಷಾದ

ಕೃಷ್ಣರಾಜಪೇಟೆ. ಜ.14. ಇಂದಿನ ಯುವಜನರು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಣೆ ಮಾಡದೇ ಸಿನಿಮಾ ನಟರನ್ನು ಅನುಕರಿಸಿ ಆದರ್ಶವನ್ನಾಗಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ದೇಶದ ಭವಿಶ್ಯದ ಹಿತದೃಷ್ಠಿಯಿಂದ ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಂಡ್ಯ ಜಿಲ್ಲಾ ಸೇವಾದಳ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಜಿ.ವಿ.ನಾಗರಾಜು ಹೇಳಿದರು.
ಅವರು ತಾಲೂಕಿನ ಶರಣ ಶ್ರದ್ಧಾಕೇಂದ್ರವಾದ ಕಾಪನಹಳ್ಳಿ ಗವಿಮಠದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ಧೇಶಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವ ನಮ್ಮ ಯುವಜನರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರ ಜೀವನ ಸಾಧನೆಯ ಬಗ್ಗೆ ತಿಳದುಕೊಳ್ಳದೇ ನಮ್ಮ ದೇಶದ ಇತಿಹಾಸ ಮತ್ತು ನಮ್ಮ ಪರಂಪರೆಯನ್ನು ಮರೆಯುತ್ತಿದ್ದಾರೆ. ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ದೇಶಭಕ್ತಿ, ರಾಷ್ಟ್ರಪ್ರೇಮ, ರಾಷ್ಟ್ರಧ್ವಜದ ಬಗ್ಗೆ ತಿಳಿಸಿ ದೇಶದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳುವ ಕಿಚ್ಚನ್ನು ಭಾರತ ಸೇವಾದಳವು ಹಚ್ಚುವ ಮೂಲಕ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಮಾಡುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರರಾಣಿ ಚೆನ್ನಮ್ಮ ಅವರ ಇತಿಹಾಸವನ್ನು ಪುಸ್ತಕಗಳನ್ನು ಓದಿ ತಿಳಿದುಕೊಳ್ಳದೇ ಚಿತ್ರನಟ ದರ್ಶನ್ ಅವರನ್ನು ಸಂಗೊಳ್ಳಿ ರಾಯಣ್ಣ ಎಂದರೆ ಚಿತ್ರನಟಿ ಬಿ.ಸರೋಜಾದೇವಿಯವರನ್ನು ಕಿತ್ತೂರರಾಣಿ ಚನ್ನಮ್ಮ, ಚಿತ್ರನಟಿ ಜಯಂತಿ ಅವರನ್ನು ಒನಕೆ ಓಬವ್ವ ಎಂದು ತಿಳಿದಿದ್ದಾರೆ. ದೇಶದ ನಿಜವಾದ ಇತಿಹಾಸವೇ ಬೇರೆಯಿದೆ. ಚಿತ್ರನಟರು ಅಂದಿನ ದಿನಗಳಲ್ಲಿ ನಡೆದ ಹೋರಾಟ ಮತ್ತು ದೇಶಪ್ರೇಮದ ಕಥೆಯನ್ನು ನಮಗೆ ತಿಳಿಸಿಕೊಡುತ್ತಿದ್ದಾರೆ ಅಷ್ಟೇ ಆದರೆ ವಾಸ್ತವ ಸತ್ಯವೇ ಬೇರೆಯಿದೆ. ಚಿತ್ರನಟರು ನಮಗೆ ಆದರ್ಶವಲ್ಲ, ಸಿನಿಮಾ ಕಥೆಗಳು ನಿಜವಲ್ಲಾ, ಸಿನಿಮಾ ಎಂಬುದು ಒಂದು ಭ್ರಮಾಲೋಕವಷ್ಟೇ ಆದ್ದರಿಂದ ದೇಶದ ಸತ್ಯ ಘಟನೆಗಳು, ದೇಶದ ಇತಿಹಾಸ, ನಮ್ಮ ರಾಷ್ಟ್ರ, ನಮ್ಮ ರಾಷ್ಟ್ರ ಧ್ವಜ, ನಮ್ಮ ಬ್ಯಾಂಡ್‍ಸೆಟ್ ಹಾಗೂ ನಮ್ಮ ದೇಶಭಕ್ತಿಗೀತೆಗಳ ಬಗ್ಗೆ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಭೇತಿ ಕೊಡಿಸಿ ಮಕ್ಕಳಿಗೆ ತಲುಪಿಸುವ ಕೆಲಸವನ್ನು ಭಾರತ ಸೇವಾದಳವು ಒಂದು ದೇಶಪ್ರೇಮಿ ಸಂಸ್ಥೆಯಾಠಗಿ ಪ್ರಾಮಾಣಿಕವಾಗಿ ಮಾಡುತ್ತಿದೆ. 6ದಿನಗಳ ಕಾಲ ನಡೆದ ಶಿಬಿರವು ಯಶಸ್ವಿಯಾಗಿ ನಡೆದಿದ್ದು ಮುಕ್ತಾಯಗೊಳ್ಳುತ್ತಿದೆ. ನಮ್ಮ ಯುವಜನರು ಹಾಗೂ ವಿದ್ಯಾರ್ಥಿಗಳು ನಮ್ಮ ರಾಷ್ಟ್ರ ಹಾಗೂ ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ದೇಶವನ್ನು ನಿರಂತರವಾದ ಹೋರಾಟ, ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರ ಜೀವನ ಸಾಧನೆಗಳು ಹಾಗೂ ಚರಿತ್ರೆಯನ್ನು ತಿಳಿಸಿಕೊಡುವ ಶಿಸ್ತುಬದ್ಧವಾದ ತರಬೇತಿಯನ್ನು ಕೊಡಿಸುವ ಮೂಲಕ ಬದ್ಧತೆಯಿಂದ ಸೇವಾದಳವು ಕೆಲಸ ಮಾಡುತ್ತಿದೆ ಎಂದು ನಾಗರಾಜು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗವಿಮಠ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಚನ್ನವೀರಯ್ಯ ಸ್ವಾಮೀಜಿಗಳು ಮಾತನಾಡಿ ಶಿಕ್ಷಕರು ಸಮಾಜದ ಪರಿವರ್ತಕರಾಗಿದ್ದಾರೆ. ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವು ನಿರ್ಣಾಯಕವಾಗಿದೆ. ಇಂದಿಗೂ ಸಮಾಜದಲ್ಲಿ ಗುರುವಿಗೆ ಅತ್ಯುನ್ನತವಾದ ಸ್ಥಾನವಿದೆ. ಆದ್ದರಿಂದ ಶಿಕ್ಷಕರನ್ನು ಕೇಂದ್ರೀಕರಿಸಿ ಸೂಕ್ತವಾದ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿರುವ ಭಾರತ ಸೇವಾದಳ ಸಂಸ್ಥೆಯು ವಿದ್ಯಾರ್ಥಿಗಳು ಹಾಗೂ ಯುವುಜನರಲ್ಲಿ ದೇಶ ಪ್ರೇಮವನ್ನು ಬೆಳೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ವಿದ್ಯಾರ್ಥಿಗಳು ಗುರುಗಳಿಗೆ ಹಾಗೂ ತಂದೆ-ತಾಯಿಗಳಿಗೆ ಋಣಿಗಳಾಗಿರುವ ಜೊತೆಗೆ  ಗುರುಹಿರಿಯರನ್ನು ಗೌರವಿಸುವ, ಪ್ರೀತಿಸುವ ಮನೋಭಾವನೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ನಮ್ಮ ನೆಲ-ಜಲ ಹಾಗೂ ಭಾಷೆಗೆ ಧಕ್ಕೆ ಎದುರಾದ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಸದಾ ಸಿದ್ಧರಿರಬೇಕು ಎಂದು ಚನ್ನವೀರಯ್ಯ ಸ್ವಾಮೀಜಿ ಕರೆ ನೀಡಿದರು.
ಗವಿಮಠದ ಮೊರಾರ್ಜಿದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಕೆ.ಎಂ.ಪ್ರಸನ್ನಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಪಟ್ಟಣದ ಮಹಿಳಾ ಪ್ರಥಮದರ್ಜೆ ಕಾಲೇಜಿನ ವ್ಯವಸ್ಥಾಪಕ ಬಳ್ಳೇಕೆರೆಮಂಜುನಾಥ್, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಸನ್ನಕುಮಾರ್, ಪರಿಸರಪ್ರೇಮಿ ಲವಕುಮಾರ್, ಭಾರತ ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ನಾಡಭೋಗನಹಳ್ಳಿ ಚಂದ್ರಪ್ಪ, ಕಾರ್ಯದರ್ಶಿ ಚಾಶಿ ಜಯಕುಮಾರ್, ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿಗಳಾದ ಧನಂಜಯ, ಕೆ.ಭೈರೇಗೌಡ, ಸಿದ್ಧರಾಮ, ಟಿ.ಸಿ.ವಸಂತಕುಮಾರ್, ಕಾಸಯ್ಯ, ಮಹದೇವ, ಜಿಲ್ಲಾ ಸಂಘಟಕ ಗಣೇಶ್ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ 6 ದಿನಗಳ ಯಶಸ್ವೀ ಶಿಬಿರ ನಡೆಯಲು ಸಂಪೂರ್ಣವಾದ ಸಹಕಾರವನ್ನು ನೀಡಿದ ಗವಿಮಠದ ಮೊರಾರ್ಜಿದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಕೆ.ಎಂ.ಪ್ರಸನ್ನಕುಮಾರ್ ಅವರನ್ನು ಭಾರತ ಸೇವಾದಳ ಕೃಷ್ಣರಾಜಪೇಟೆ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಿಭಿರಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ರಂಜಿಸಿತು. ಶಿಕ್ಷಕರಾದ ರವಿ ಮತ್ತು ಚಾಶಿ ಜಯಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

Leave a Comment