ಇತಿಹಾಸಕ್ಕೆ ಸರಿದ ಕೆಪ್ಲರ್ ಟೆಲೆಸ್ಕೋಪ್

ಉತ್ತನೂರು ವೆಂಕಟೇಶ್

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ  ಸೌರಮಂಡಲದ ಆಚೆಗಿನ ಗ್ರಹ ಮತ್ತು ನಕ್ಷತ್ರಗಳನ್ನು ಪತ್ತೆ ಹಚ್ಚುವಲ್ಲಿ ದಾಖಲೆಯ ಇತಿಹಾಸವನ್ನು ನಿರ್ಮಾಣಮಾಡಿದ್ದ ನಾಸಾದ ಕೆಪ್ಲರ್ ದೂರರ್ಶಕ ತನ್ನ ಒಂದು ದಶಕದ ಯಾನಕ್ಕೆ ಅಂತ್ಯಹಾಡಿದೆ. ಜೀವನ ಪಯಣ ಮುಗಿಸಿರುವ ಕೆಪ್ಲರ್ ಬಾಹ್ಯಾಕಾಶದಲ್ಲಿಯ ಉಳಿದ ನಿರ್ಜೀವ  ಆಕಾಶ ಕಾಯಗಳಂತೆ  ಸೂರ್ಯನ ಸುತ್ತ ಸುತ್ತುತ್ತ ತನ್ನ ಅವಸಾನದ ದಿನಗಳನ್ನು ಕಳೆಯಲಿದೆ.

ಕೆಪ್ಲರ್ ಟೆಲೆಸ್ಕೋಪ್ ಕಾರ್ಯಾ ನರ್ವಹಣೆಯನ್ನು ಅಕ್ಟೋಬರ್ ೩೦ ರಿಂದು ನಾಸಾ ಅಧಿಕೃತ ವಾಗಿ ಸ್ಥಗಿತ ಗೊಳಿಸಿದೆ. ಅದನ್ನು ಸ್ಥಗಿತ ಗೊಳಿಸುವ ಮುನ್ನ ಅದರಲ್ಲಿ ಅಳಿದುಳಿದಿದ್ದ  ಎಲ್ಲ ಮಾಹಿತಿಯನ್ನು ನಾಸಾ ಇಂಜಿನಿಯರ್‌ಗಳು ಅದರಿಮದ ಪಡೆದಿದ್ದಾರೆ ಎಂದು ನಾಸಾ ಹೇಳಿದೆ.

ಸೌರಮಂಡಲದ ಆಚೆಗಿನ  ಭೂಮಿಗಾತ್ರದ ಹಾಗೂ ಜೀವರಾಶಿಗೆ ಯೋಗ್ಯ ವಾತಾವರಣ ವಿರುವ ಗ್ರಹಗಳನ್ನು ಪತ್ಯೆಹಚ್ಚುವ ಗುರಿಯೊಂದಿಗೆ ಕೆಪ್ಲರ್ ಬಾಹ್ಯಾಕಾಶ ದೂರ ರ್ದರ್ಶಕವನ್ನು  ೨೦೦೯ರ ಮಾರ್ಚ್ ೭ ರಂದು ನಾಸಾ ಉಡಾವಣೆ ಮಾಡಿತ್ತು. ನಮ್ಮ ಕ್ಷೀರ ಪತದತ್ತ ಮುಖಮಾಡಿ ಸೌರಮಂಡಲದ ಆಚೆಗಿನ  ನಕ್ಷತ್ರ   ಗ್ರಹಗಳತ್ತ ನಿರಂತರವಾಗಿ ದೃಷ್ಟಿ ನೆಟ್ಟಿದ್ದ ಕೆಪ್ಲರ್, ಜಗತ್ತಿನಾದ್ಯಂತದ ಖಗೋಳ ವಿಜ್ಞಾನಿಗಳಿಗೆ ಹೊಸ ಗ್ರಹಗಳ ಕುರಿತಂತೆ ನಿರಂತರ ಮಾಹಿತಿಯನ್ನು ನೀಡುತ್ತಿತ್ತು.

ಇದು ಪತ್ತೆ ಹಚ್ಚುವ ಹೊಸ ಗ್ರಹ ನಕ್ಷತ್ರಗಳ ಮಾಹಿತಿಗಾಗಿ ವಿಜ್ಞಾನಿಗಳು ತುದಿಗಾಲಮೆಲೆ ನಿಲ್ಲುತ್ತಿಇದ್ದರು. ತನ್ನ ದಶಕದ ಶೋಧನಾ ಯಾನದಲ್ಲಿ ಕೆಪ್ಲರ್ ಟೆಲೆಸ್ಕೋಪ್ ೫೩೦,೫೦೬ ಹೊಸ ನಕ್ಷತ್ರಗಳನ್ನು ಮತ್ತು ೨೬೮೯ ಹೊಸ ಗ್ರಹಗಳನ್ನು ಪತ್ತೆ ಮಾಡಿದೆ.ಇದು ಪತ್ತೆ ಹಚ್ಚಿರುವ ಬಹುಪಾಲು ಗ್ರಹಗಳು ಭೂಮಿಯಷ್ಟು ಗಾತ್ರದ್ದಾಗಿದ್ದು ಭೂಮಿಯ ವಾತಾವರಣದಂತಹ ವಾತಾವರಣವನ್ನೂ ಹೊಂದಿದ್ದ ಗ್ರಹಗಳಿದ್ದವು. ಇದು ಪತ್ತೆ ಮಾಡಿರುವ ಸುಮಾರು ೨೮೯೯ ಗ್ರಹಗಳ ಬಗ್ಗೆ ಇನ್ನಷ್ಟು ಖಚಿತ ಮಹಿತಿಯನ್ನು ಶೋಧಿಸ ಬೇಕಿದೆ.

4vichara1

ಕೆಪ್ಲರ್ ಟೆಲೇಸ್ಕೋಪ್ ಅಕ್ತೋಬರ್ ೧೯ ರಂದೇ ತನ್ನಲ್ಲಿದ್ದ ಇಂಧನ ಖಾಲಿಯಾಗಿ ನಿತ್ರಾಣ ಸ್ಥಿತಿಗೆ ತಲುಪಿತ್ತು. ಅಕ್ತೋಬರ್ ೩೦ ರಂದು ನಾಸಾ ಇದರ ಕಾರ್ಯ ಸ್ಥಗಿತ ಗೊಳಿಸುವ ಮೂಲಕ ೬೦೦ ದಶಲಕ್ಷ ಡಾಲರ್‍ಸ್ ಮೊತ್ತದ ಯೋಜನೆಗೆ ಮಂಗಳ ಹಾಡಿದೆ.

ಸೌರಮಂಡಲದ ಆಚೆಗಿನ ಹೊಸ ನಕ್ಷತ್ರ, ಗ್ರಹಗಳನ್ನು ಪತ್ತೆ ಹಚ್ಚುವಲ್ಲಿ ವಿಕ್ರಮ ಸಾಧಿಸಿದ್ದ ಕೆಪ್ಲರ್ ಬಾಹ್ಯಾಕಾಶ ಟೆಲೆಸ್ಕೋಪ್ ಅಕ್ಟೋಬರ್ ೩೦ ರಂದು ತನ್ನ ಜೀವ ಪಯಣವನ್ನು ಅಂತ್ಯ ಗೊಳಿಸಿದೆ.

ಒಂದು ದಶಕದಿಂದ  ಲಕ್ಷ ಲಕ್ಷ ಗ್ರಹ ನಕ್ಷತ್ರಗಳ  ಮೇಲೆ ನಿರಂತರ ದೃಷ್ಟಿ ನೆಟ್ಟಿದ್ದ,ಲಕ್ಷ ಲಕ್ಷ ಹೊಸ ನಕ್ಷತ್ರ ಗ್ರಹಗಳನ್ನು ಪತ್ತೆ ಹಚ್ಚಿದ್ದ  ಈ ದೂರದರ್ಶಕ  ನಾಸಾದ ಅತ್ಯಂತ ಯಶಸ್ವಿ ಶೋಧನಾ ಭಾಗವಾಗಿತ್ತು.

ಅಂದಾಜಿಗಿಂತಲೂ ಅತಿ ಹೆಚ್ಚು ಅವಧಿ ಯಶಸ್ವಿ ಕಾರ್ಯದಲ್ಲಿ ತೊಡಗಿದ್ದ ಇದರಲ್ಲಿ ಇಂಧನ ಸಂಪೂರ್ಣ ಖಾಲಿಯಾದ ಹಿನ್ನೆಲೆಯಲ್ಲಿ ಇದರ ಕಾರ್ಯವನ್ನು ನಾಸಾ ಅಕ್ಟೋಬರ್ ೩೦ ರಂದು ಸ್ಥಗಿತ ಗೊಳಿಸಿದೆ.

ಇನ್ನಷ್ಟು ಮತ್ತಷ್ಟು ಎಂಬ ಶೋಧನಾ ದಾವಂತದಲ್ಲಿ  ಸೂರ್ಯನ ಸುತ್ತ ಸುತ್ತುತ್ತ ಶೋಧನೆಯಲ್ಲಿ ತೊಡಗಿದ್ದ ಇದು ಇಂದು ನಿರ್ಜೀವ ವಸ್ತುವಾಗಿ ಸೂರ್ಯನ ಸುತ್ತ ಸುತ್ತುತ್ತ ತನ್ನ ಅವಸಾದ ದಿನಗಳನ್ನು ಕಳೆಯ ಲಾರಂಭಿಸಿದೆ.

Leave a Comment