ಇಡ್ಲಿ ತಿಂದ ಬಿಲ್ ಕೇಳಿದಕ್ಕೆ ವ್ಯಾಪಾರಿ ಮೇಲೆ ರೌಡಿಶೀಟರ್ ಹಲ್ಲೆ

 

ಕಲಬುರಗಿ,ಫೆ.12-ಇಡ್ಲಿ ತಿಂದ ಬಿಲ್ ಕೇಳಿದ್ದಕ್ಕೆ ರೌಡಿಶೀಟರ್ ಒಬ್ಬ ಇಡ್ಲಿ ವ್ಯಾಪಾರಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ನಗರದ ಲಾಲಗೇರಿ ಕ್ರಾಸ್ ಬಳಿ ನಡೆದಿದೆ.

ಕುಖ್ಯಾತ ರೌಡಿಶೀಟರ್ ಅಪ್ಪಾಸಾಬ್‌ ಎಂಬಾತನೆ ಇಡ್ಲಿ ವ್ಯಾಪಾರಿ ಲೋಹಿತ್ ಎಂಬಾತನ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ತಲೆ ಭಾಗಕ್ಕೆ ಪೆಟ್ಟಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಲೋಹಿತ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬಿಸಿದ್ದಾರೆ.

Leave a Comment