ಇಡಿಯಿಂದ ‘ಟ್ರಬಲ್ ಶೂಟರ್’ ಡಿಕೆಶಿ ವಿಚಾರಣೆ ಮುಂದುವರಿಕೆ

ನವದೆಹಲಿ.ಸೆ.13. ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಮನೆಗೋ, ಜೈಲಿಗೋ, ಇಡಿ ಕಸ್ಟಡಿಗೋ ಎನ್ನುವುದು ಇಂದು ನಿರ್ಧಾರವಾಗಿದ್ದು, ಕೋರ್ಟ್ ಸೆ.17 ರವರೆಗೆ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಕೋರ್ಟ್ ತೀರ್ಪಿನ ಬಳಿಕ ಡಿಕೆಶಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

ಇಡಿ ಕಸ್ಟಡಿ ಅವಧಿ ಇಂದು ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಇಂದು ಮಧ್ಯಾಹ್ನ ಶುರುವಾದ ನ್ಯಾಯಾಲಯದ ಕಲಾಪದ ವೇಳೆಯಲ್ಲಿ ಡಿ.ಕೆ ಶಿ ಪರ ವಕೀಲರು ಆರೋಗ್ಯ ಸಮಸ್ಯೆ ಇರುವ ಕಾರಣ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸದ ನ್ಯಾಯಾಪೀಠ ಡಿ.ಕೆ ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡುವುದಕ್ಕೆ ನಿರಾಕರಣೆ ಮಾಡಿದೆ. ಇನ್ನು ಇದೇ ವೇಳೆ ಹೆಚ್ಚಿನ ವಿಚಾರಣೆಗಾಗಿ ಡಿ.ಕೆ ಶಿವಕುಮಾರ್‌ ಅವರು ಇನ್ನು 5 ದಿವಸಗಳ ಕಾಲ ನಮ್ಮ ಕಸ್ಟಡಿಗೆ ಬೇಕು ಅಂತ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಐದು ದಿವಸಗಳ ಬದಲಾಗಿ ಹೆಚ್ಚಿನ ವಿಚಾರಣೆಗಾಗಿ ಡಿ.ಕೆ ಶಿವಕುಮಾರ್‌ ಅವರನ್ನು ಸೆ 17 ರ ತನಕ ಇಡಿ ವಶಕ್ಕೆ ನ್ಯಾಯಾಪೀಠ ನೀಡಿದೆ.

ಕೋರ್ಟ್ ತೀರ್ಪಿನ ಬಳಿಕ ಡಿಕೆಶಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Comment