ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಮೈಲಾರಲಿಂಗಸ್ವಾಮಿ ಕಾರ್ಣಿಕ ಭವಿಷ್ಯ

 

ಚಿಕ್ಕಮಗಳೂರು.ಅ.೯. ಇತಿಹಾಸ ಪ್ರಸಿದ್ಧ ಬೀರೂರಿನ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಇಂದು ಸಂಪನ್ನಗೊಂಡಿದೆ. ಈ ಬಾರಿಯೂ ರಾಜ್ಯದ ಆಗುಹೋಗುಗಳು ಹಾಗೂ ರಾಜಕೀಯ ವಿಚಾರ ಕುರಿತು ಮೈಲಾರಲಿಂಗಸ್ವಾಮಿ ದಶರಥ ಪೂಜಾರರ ಬಾಯಲ್ಲಿ ಭವಿಷ್ಯ ನುಡಿಸಿದ್ದಾನೆ.
ಈ ಬಾರಿ ಭವಿಷ್ಯ ನುಡಿದಿರುವ ಕಾರ್ಣಿಕ ‘ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದ್ದಾಯಿತು. ಉತ್ತಮ ಮಳೆ ಸುರಿಸಿದಾವು. ಸರ್ವರು ಎಚ್ಚರದಿಂದಿರಬೇಕು’ ಎಂದು ಶ್ರೀ ಮೈಲಾರಲಿಂಗಸ್ವಾಮಿ ದಶರಥ ಪೂಜಾರರ ಬಾಯಲ್ಲಿ ಆಡಿಸಿದ್ದಾನೆ. ಇಲ್ಲಿನ ಕಾರ್ಣಿಕ ಭವಿಷ್ಯದ ಬಗ್ಗೆ ಸರಿಸುಮಾರು 400-500 ವರ್ಷಗಳಿಂದ ನಂಬಿಕೆಯಿದ್ದು, ಎಂದೂ ಸುಳ್ಳಾಗಿಲ್ಲ ಎಂತಲೇ ಹೇಳಲಾಗಿದೆ.
ಈ ಬಾರಿಯೂ ರಾಜಕೀಯ ಹೊರತು ಪಡಿಸಿ ಉತ್ತಮ ಮಳೆ ಸುರಿದಾವು ಎಂದು ನುಡಿದಿದೆ. ಮಳೆ ಇನ್ನೂ ಮುಗಿದಿಲ್ಲ, ಇನ್ನೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದುಮುನ್ಸೂಚನೆ ನೀಡಿದ್ದು, ರಾಜಕಾರಣ, ರಾಜಕಾರಣಿಗಳು ಹಾಗೂ ಮಳೆ ಈ ವಿಚಾರದಲ್ಲಿ ಜನ ಎಚ್ಚರದಿಂದಿರಬೇಕು ಎಂದು ಕಾರ್ಣಿಕ ಭವಿಷ್ಯವನ್ನು ಅರ್ಥೈಸಬಹುದಾಗಿದೆ…

Leave a Comment