ಇಟಲಿಯ ಪಾಂಪೈ ಪ್ರವಾಸಿಗರಿಗೆ ಮುಕ್ತ

ರೋಮ್, ಮೇ 26 – ವಿಶ್ವವಿಖ್ಯಾತ ಪುರಾತತ್ವ ತಾಣ ಪಾಂಪೈ ಅನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲು ಇಟಲಿ ಸರ್ಕಾರ ನಿರ್ಧರಿಸಿದೆ.

ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಇದೀಗ ದಿಗ್ಬಂಧನ ನಿರ್ಬಂಧಗಳನ್ನು ಸಡಿಲಿಸುತ್ತಿದ್ದು ಪ್ರವಾಸೋದ್ಯಮಕ್ಕೂ ಚೇತರಿಕೆ ನೀಡಲು ಮುಂದಾಗಿದೆ.

ರೋಮ್ ನ ಕೊಲೊಸೆಮ್ ನಂತರ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿರುವ ತಾಣ ಪಾಂಪೈ. ದಕ್ಷಿಣ ಇಟಲಿಯ ಕಂಪಾನಿಯಾ ಪ್ರದೇಶದಲ್ಲಿರುವ ಈ ತಾಣ ಸಮೀಪದ ಪರ್ವತ ವೆಸುವಿಸ್ ನ ಜ್ವಾಲಾಮುಖಿಗೆ ಕ್ರಿಶ 79 ರಲ್ಲಿ ನಿರ್ನಾಮವಾಗಿತ್ತು ಎಂದು ಹೇಳಲಾಗುತ್ತದೆ.
2019 ರಲ್ಲಿ ಪಾಂಪೈ ಸುಮಾರು 40 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿತ್ತು. ಇಟಲಿಯಲ್ಲಿ ಕೊರೊನಾ ಬಿಕ್ಕಟ್ಟು ಎದುರಾದಾಗ 104 ದಶಲಕ್ಷ ಮೌಲ್ಯದ ಪುನರ್ ಸ್ಥಾಪನ ಕಾರ್ಯ ಮುಗಿದಿತ್ತು. ಮಾರ್ಚ್ ನಿಂದ ಈ ತಾಣ ಸೇರಿದಂತೆ ಅನೇಕ ಸಾಂಸ್ಕೃತಿಕ ಸ್ಥಳಗಳು, ವಸ್ತು ಸಂಗ್ರಹಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಜೂನ್ ನಿಂದ ವಿದೇಶಿ ಪ್ರವಾಸಿಗರಿಗೆ ಅನುಮತಿ ನೀಡಲು ಇಟಲಿ ಸರ್ಕಾರ ನಿರ್ಧರಿಸಿದೆ.

Share

Leave a Comment