ಇಟಲಿಯಲ್ಲಿ ವಿರಾಟ್-ಅನುಷ್ಕಾ ಮದ್ವೆ

ನವದೆಹಲಿ, ಡಿ ೭- ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರ ಮದುವೆ ಸುದ್ದಿ ನಿನ್ನೆ ಸಂಜೆಯಿಂದ ಎಲ್ಲೆಡೆ ಗಿರಕಿ ಹೊಡೆಯುತ್ತಲೇ ಇದೆ. ಆದರೆ ಯಾವುದಕ್ಕೂ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಬಹಳ ದಿನದಿಂದ ಡೇಟಿಂಗ್ ನಡೆಸುತ್ತಿರುವ ವಿರಾಟ್- ಅನುಷ್ಕಾ ಅವರು ಮದುವೆ ಬಗ್ಗೆ ಸಾಕಷ್ಟು ಭಾರಿ ಗಾಳಿ ಸುದ್ದಿ ಹರಿದಾಡಿದೆ. ಆದರೆ ಆದ್ಯಾವುದು ಈ ಸುದ್ದಿಯಷ್ಟು ಸುದ್ದಿ ಮಾಡಿಲ್ಲ ಎನ್ನಬಹುದು. ಈ ಜೋಡಿ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಕೂಡ ಅಷ್ಟೆ ಕುತೂಹಲವಿದೆ. ಡಿ ೯ ರಿಂದ ೧೧ ರವರೆಗೆ ಇಟಲಿಯ ಮಿಲಾನ್ ನಲ್ಲಿ ಕೊಹ್ಲಿ ಮತ್ತು ಅನುಷ್ಕಾರ ಮದುವೆ ನಡೆಯಲಿದೆ ಎಂದು ಇಟಲಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲಕಡೆ ಡಿ೧೧ ರಿಂದ ೧೩ರಂದು ಮದುವೆಯಾಗಿ. ಡಿ ೨೨ ರಂದು ಭಾರತದಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ ಎಂದು ವರದಿಯಾಗಿತ್ತು.

ಈ ಹಿಂದೆ ೨೦೧೬ರಲ್ಲಿ ಡೆಹ್ರಾಡೂನ್‌ನಲ್ಲಿ ವಿರಾಮದಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್‌ತಾರೆ ಅನುಷ್ಕಾ ಶರ್ಮ ಇಬ್ಬರ -ನಡುವಿನ ಗೆಳೆತನ, ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಸಿಕ್ಕಿದೆ. ಆಪ್ತೇಷ್ಟರ ಸಮ್ಮುಖದಲ್ಲಿ ಗೌಪ್ಯವಾಗಿ ಸಮಾರಂಭ ಮುಕ್ತಾಯವಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಕೊಹ್ಲಿ ಅವರು ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊಹ್ಲಿ ಕೋಚ್ ರಜೆ
ಈ ಜೋಡಿ ಮದುವೆ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಅವರು ಕೂಡ ರಜೆಗೆ ಅರ್ಜಿ ಸಲ್ಲಿಸಿರುವುದು ಮತ್ತುಷ್ಟು ಕುತುಹಲ ಹೆಚ್ಚಿಸುವಂತೆ ಮಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಸಿಕೆ ನಾಯ್ಡು ಟ್ರೋಪಿಯ ಅಂಡರ್ ೨೩ ಸೆಮಿಪೈನಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ಕುಟುಂಬದ ಕೆಲ ಒಪ್ಪಂದಗಳಿವೆ ಎಂದು ರಜೆಗಾಗಿ ಕೋರಿದ್ದಾರೆ. ಅಂದರೆ ಕೊಹ್ಲಿ ಅವರ ಜೊತೆ ಇಟಲಿಗೆ ಇವರು ಪ್ರವಾಸ ಕೈಗೊಳ್ಳಬಹುದೇ ಎಂದು ಗುಮಾನಿ ಶುರುವಾಗಿದೆ.

ವಿನ್ಯಾಸಕರಿಂದ ಅನುಷ್ಕಾ ಭೇಟಿ
ಇಷ್ಟೆ ಅಲ್ಲ ಕಳೆದ ವಾರ ಪ್ರಸಿದ್ದ ವಿನ್ಯಾಸಕಿ ಸಭ್ಯಸಾಚಿ ಮುಖರ್ಜಿ ಅವರು ಅನುಷ್ಕಾ ಮನೆಗೆ ಭೇಟಿ ನೀಡಿ ಮದುವೆ ಉಡುಪುಗಳ ವಿನ್ಯಾಸದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಇಬ್ಬರದು ಇಟಲಿಯಲ್ಲಿ ನಡೆಯುವುದು ಮದುವೆಯೋ ಅಥವಾ ನಿಶ್ಚಿತಾರ್ಥವೂ ಯಾರಿಗೂ ತಿಳಿದಿಲ್ಲ.

ಅಕ್ಟೋಬರ್‌ನಲ್ಲೇ ಸುದ್ದಿ ಬ್ರೇಕ್
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಡಿಸೆಂಬರ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿಯೊಂದು ಬಾಲಿವುಡ್ ಮತ್ತು ಕ್ರಿಕೆಟ್ ಅಂಗಳದಲ್ಲಿ ಅಕ್ಟೋಬರ್ ತಿಂಗಳಿನಲ್ಲೇ ಹರಿದಾಡಿತ್ತು. ಆದರೆ ಅನುಷ್ಕಾರ ಟ್ಯಾಲೆಂಟ್ ಏಜೆನ್ಸಿ, ಅವರು ಡಿಸೆಂಬರ್‌ನಲ್ಲಿ ಮದುವೆ ಆಗುತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿತ್ತು. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಮದುವೆಯ ಬಗ್ಗೆ ಮಾತುಗಳನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಜಾಹೀರಾತಿನಲ್ಲಿ ಏನಿತ್ತು?:
ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದರು. ತಿಂಗಳಲ್ಲಿ ೧೫ ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದರು. ಇನ್ನು ವಿರಾಟ್ ಅನುಷ್ಕಾರನ್ನು ಯಾವಾಗಲೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲೆಂದೇ ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು.

ಶುದ್ದ ಸುಳ್ಳು
ಡಿಸೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ನಡೆಯಲಿದೆ ಎಂದು ಹತ್ತು ಹಲವು ಮಾಧ್ಯಮಗಳಲ್ಲಿ ಸಂಜೆಯಿಂದ ಬಿತ್ತರವಾಗುತ್ತಿರುವ ಈ ಸುದ್ದಿಯೆಲ್ಲ ಶುದ್ಧ ಸುಳ್ಳು ಎಂದು ನಟಿ ಅನುಷ್ಕಾ ಅವರ ವಕ್ತಾರರು ತಿಳಿಸಿದ್ದಾರೆ. ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ -೨೦ ಸರಣಿಯಿಂದ ಕೊಹ್ಲಿ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ, ಇದರರ್ಥ ಅವರು ಮದುವೆ ತಯಾರಿಯಲ್ಲಿದ್ದಾರೆ ಎಂಬುದಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ.

ವಿಶ್ರಾಂತಿ ಬೇಕು
ವಿರಾಟ್ ಕೊಹ್ಲಿ ಸತತ ೪೮ ತಿಂಗಳ ಕಾಲ ದೇಶಕ್ಕಾಗಿ ವಿಶ್ರಾಂತಿಯಿಲ್ಲದೆ ಹಲವಾರು ಟೂರ್ನಿಗಳಲ್ಲಿ ಭಾಗವಹಿಸಿಕೊಂಡು ಬಂದಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿ ತಮ್ಮ ನಾಯಕತ್ವಕ್ಕೆ ಸವಾಲಾಗಿದೆ. ಅಲ್ಲಿ ಹರಿಣಗಳ ವಿರುದ್ಧ ಮೂರು ರೀತಿಯ ಕ್ರಿಕೆಟ್ ಆಡಲು ಸುದೀರ್ಘ ಪಯಣ ಕೈಗೊಳ್ಳಬೇಕಾಗಿರುವುದರಿಂದ ಅಗತ್ಯವಾಗಿ ವಿಶ್ರಾಂತಿ ಬೇಕಾಗಿದೆ ಎಂದು ವಿವರಣೆ ನೀಡಿದ್ದಾರೆ

Leave a Comment