ಇಂಧನ ಉಳಿತಾಯ: ಸೈಕಲ್ ಜಾಥಾ 19 ರಂದು

 

ಕಲಬುರಗಿ ಜ17: ಇಂಧನ ಉಳಿತಾಯವನ್ನು ಪ್ರೋತ್ಸಾಹಿಸಲು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಸಹಯೋಗದಲ್ಲಿ ಜ.19 ರಂದು ಬೆಳಿಗ್ಗೆ 7.30ಕ್ಕೆ ನಗರದಲ್ಲಿ ‘ಸಕ್ಷಮ’ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಧಿಕಾರ

ಜಾಥಾ ಸಂಚಾಲಕ ಎಂ.ಶಿರೋಮಣಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ (ಮಿನಿ ವಿಧಾನಸೌಧ)ಆವರಣದಿಂದ ಸೇಡಂ ರಿಂಗ್ ರಸ್ತೆವರೆಗೂ  ಸೈಕಲ್ ಜಾಥಾ

ನಡೆಯಲಿದೆ.

ಪ್ರತಿ ತಿಂಗಳು ಕೊನೆ ಪಕ್ಷ ಒಂದು ದಿನ ಇಂಧನ ವಾಹನ ಬಳಸದೇ ಇರುವದನ್ನು ಪ್ರೋತ್ಸಾಹಿಸುವದು ನಮ್ಮ ಉದ್ದೇಶವಾಗಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ವೆಂಕಟೇಶ್ವರ ರಾಠೋಡ,ಮಹೇಶ ಶಿಲ್ಕೆ, ಮಯಾಂಕ್ ಪಿ ಉಪಸ್ಥಿತರಿದ್ದರು.

Leave a Comment