ಇಂದು ವಿಶ್ವ ಗುಬ್ಬಚ್ಚಿಗಳ ದಿನ: ಆಧುನಿಕತೆ ಭರಟೆಯಲ್ಲಿ ಗುಬ್ಬಚ್ಚಿ ಅಪ್ಪಚ್ಚಿ

ಬೆಂಗಳೂರು, ಮಾ. ೨೦- ಕಾಂಕ್ರೀಟ್ ಜಂಗಲ್‌ನಲ್ಲಿ ಗುಬ್ಬಚ್ಚಿಯಂಥ ಸಂವೇದನಾಶೀಲ ಪಕ್ಷಿ ಸಂಕುಲವಿಂದು ಅಳಿವಿನ ಅಂಚು ತಲುಪುವಂತಾಗಿದೆ. ಗೂಡು ಕಟ್ಟಿ ಕೊಳ್ಳಲು ಸ್ಥಳಾವಕಾಶವಿಲ್ಲದೇ ಸಣ್ಣ ಪಕ್ಷಿಯನ್ನು ನಾವೇ ಹೊರ ದಬ್ಬಿದಂತಾಗುತ್ತಿದೆ. ವಿಶಿಷ್ಟ ಧ್ವನಿಯಲ್ಲಿ, ಕ್ಷಣ ಹೊತ್ತೂ ಸುಮ್ಮನಿರದೆ ಚಿವ್‌ಗುಡುತ್ತ, ಜಿಗಿಯುತ್ತಾ, ಪುಟಿಯುತ್ತಿದ್ದ ಗುಬ್ಬಿ ಸಂಸಾರ ಸಮೇತ ನಾಪತ್ತೆಯಾಗಿದೆ.

ಹೌದು ಪಕ್ಷಿ ಪ್ರಪಂಚದಲ್ಲಿ ಅಳಿವಿನ ಅಂಚಿನಲ್ಲಿರುವ ಪಕ್ಷಿ ಗುಬ್ಬಚ್ಚಿ. ಇದು ಮನುಷ್ಯರ ಮಧ್ಯೆ ಬದುಕು ಕಟ್ಟಿಕೊಂಡಿರುವ ಪುಟ್ಟ ಹಕ್ಕಿ. ಊಹಿಸಲಾಗದ ನಗರೀಕರಣ, ಎಲ್ಲೆ ಮೀರಿದ ಮಾನವರ ಬದುಕಿನ ಶೈಲಿ ಗುಬ್ಬಚ್ಚಿಗಳನ್ನು ಅವಸಾನಕ್ಕೆ ತಳ್ಳಿದೆ. ಪ್ರತಿ ವರ್ಷ ಮಾರ್ಚ್ ೨೦ರಂದು ವಿಶ್ಚ ಗುಬ್ಬಚ್ಚಿಗಳ ದಿನ ಎಂದು ಆಚರಿಸಲಾಗುತ್ತಿದೆ. ನೇಚರ್ ಫಾರ್ ಸೊಸೈಟಿ ಫಾರ್ ಇಂಡಿಯಾ(ಎನ್‌ಎಫ್‌ಎಸ್‌ಐ) ಸಂಸ್ಥೆಯ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಅವರು ೨೦೧೦ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು.ಪ್ರತಿವರ್ಷ ಎನ್‌ಎಫ್‌ಎಸ್‌ಐ ವಿಶ್ವ ಗುಬ್ಬಚ್ಚಿಗಳ ದಿನವನ್ನು ಪ್ರಪಂಚದಾದ್ಯಂತ ಒಟ್ಟು ೫೦ ರಾಷ್ಟ್ರಗಳಲ್ಲಿ ಆಚರಿಸುತ್ತಿದೆ.

ಮನೆ ಮುಂದಿರುವ ಗಿಡ ಮರಗಳನ್ನೆಲ್ಲ ಕಡಿದು ಹಾಕಿ, ಗೂಡು ಕಟ್ಟಲು ಈ ಹಕ್ಕಿಗಳಿಗೇ ಜಾಗ ಇಲ್ಲ. ಅವು ನೀರಿಗೂ ಪರದಾಡಬೇಕಾಗಿದೆ. ಸದಾ ಚಿವ್‌ಚಿವ್ ಕಲರವದೊಂದಿಗೆ, ಜಿಗಿದಾಡುತ್ತಾ, ಹಾರಾಡುತ್ತಾ ಹುಲ್ಲಿನ ಎಳೆಗಳನ್ನು ತಂದು ಗೂಡು ಕಟ್ಟುತ್ತಾ, ಅಕ್ಕಿ-ಜೋಳ ಹಸನು ಮಾಡುತ್ತಿದ್ದ ಹೆಣ್ಮಕ್ಕಳ ಮುಂದೆ ಹಾರಿಬಂದು ಕುಳಿತು ಎಸೆಯುವ ಹರಳುಗಳ ನಡುವೆಯೇ ಬೀಳುವ ಕಾಳುಗಳನ್ನು ತಿನ್ನುತ್ತ ಕಲರವ ಮಾಡುತ್ತಿದ್ದ ಗುಬ್ಬಿಗಳ ಸಂಸಾರ ಇಂದು ನೇಪಥ್ಯ ಸೇರುತ್ತಿದೆ. ಮಾನವರಲ್ಲಿ ಬೇರೆಲ್ಲಾ ಪಕ್ಷಿಗಳಿಗಿಂತ ಗುಬ್ಬಚ್ಚಿಗೆ ವಿಶೇಷ ಸ್ಥಾನ. ಯಾವಾಗಲೂ ಮನುಷ್ಯರ ನಡುವೆ ಚಿಲಿಪಿಲಿ ಗುಟ್ಟುತ್ತಾ ಬದುಕುವ ಗುಬ್ಬಚ್ಚಿಗೆ ಮನುಷ್ಯರೇ ಮುಳುವಾಗಿದ್ದಾರೆ. ಅವರ ಜೀವನ ಕ್ರಮಗಳು ಅವುಗಳನ್ನು ಉಸಿರುಗಟ್ಟಿಸುತ್ತಿವೆ. ಇಂದಿನ ಪೀಳಿಗೆಯವರು, ನೆಮ್ಮದಿಯ ಗಣಿಯಾಗಿರುವ ಪ್ರಕೃತಿ ಸೌಂದರ್ಯವನ್ನು ಮೂಲೆಗುಂಪು ಮಾಡಿ ತಾಂತ್ರಿಕ ಬದುಕಿಗೆ ಜೋತುಬಿದ್ದಿದ್ದಾರೆ. ಅಪಾಯಕಾರಿ ಜೀವನ ಶೈಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಇದರಿಂದ ಮನುಷ್ಯ ಹಾಗೂ ಗುಬ್ಬಚ್ಚಿಗಳ ನಡುವೆ ಇರುವ ಭಾವಯಾನ ತುಂಡಾಗಿ ಹೋಗಿದೆ. ಇದು ಕೂಡ ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣ ಎನ್ನುತ್ತಾರೆ ಮೊಹಮ್ಮದ್ ದಿಲ್ವಾರ್.

ಫ್ಯಾಷನ್ ಜೀವನಶೈಲಿಯಲ್ಲಿ ಮುಳುಗಿರುವ ಮಾನವರು ತಮ್ಮ ವಾಸಸ್ಥಾನವು ಆಧುನಿಕತೆಗೆ ಹೊಂದಿಕೊಂಡಿರಬೇಕೆಂದು ಬಯಸುವುದು ಸಹಜ. ಇದು ಕೂಡ ಗುಬ್ಬಚ್ಚಿಗಳ ಜೀವಕ್ಕೆ ಕುತ್ತು ತಂದಿದೆ. ಗುಬ್ಬಚ್ಚಿಗಳಿಗೆ ಬೇಕಿರುವುದು ಅಂಗೈ ಅಗಲದಷ್ಟು ಗೂಡು. ನಮ್ಮ ಹಿಂದಿನ ಹಿರಿಯರ ಮನೆಗಳು ಹೆಚ್ಚಿನದಾಗಿ ಹಂಚಿನ , ಹುಲ್ಲಿನ ಮನೆಗಳು. ಇವುಗಳು ಗುಬ್ಬಚ್ಚಿಗಳಿಗೆ ಹೇಳಿ ಮಾಡಿಸಿದ ವಾಸಸ್ಥಾನವಾಗಿದ್ದವು. ಆದರೆ ಇಂದಿನ ಮನೆಗಳ ನಿರ್ಮಾಣವೂ ಸಂಪೂರ್ಣವಾಗಿ ಆಧುನಿಕರಣಕ್ಕೆ ಒಳಪಟ್ಟಿದೆ.
ಇಂತಹ ಮನೆಗಳಲ್ಲಿ ಗುಬ್ಬಚ್ಚಿಗಳು ಗೂಡಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೂಡಿಲ್ಲದೇ ಗುಬ್ಬಚ್ಚಿಗಳು ಬಿಸಿಲು, ಮಳೆ , ಗಾಳಿಗೆ ತತ್ತರಿಸುತ್ತಿದ್ದು ಅಳಿವಿನಂಚಿಗೆ ಸಾಗುತ್ತಿವೆ.

ಅಲ್ಲದೇ ಸಿಕ್ಕ ಹೊಲಗಳಿಗೆ ಹಾರಿ ಅಲ್ಲಿ ಸಿಗುವ ಹುಳು-ಹುಪ್ಪಟೆಗಳನ್ನೇ ತಮ್ಮ ಮರಿಗಳಿಗೆ ಉಣಿಸೋಣವೆಂದರೆ, ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಅವೂ ಸತ್ತಿವೆ. ರಣ ಬಿಸಿಲಿನಲ್ಲಿ ಬಾಯಾರಿಕೆಯಾಗಿ ನೀರು ಕುಡಿಯೋಣವೆಂದರೆ ಒಂದು ಕೆರೆ ಕೂಡ ಸಿಗುತ್ತಿಲ್ಲ, ಬಾವಿಗಳು ಬತ್ತಿವೆ. ಇನ್ನು ೨೦೦೫ರಲ್ಲಿ ಸ್ಥಾಪನೆಯಾದ ಎನ್‌ಎಫ್‌ಎಸ್‌ಐ ಗುಬ್ಬಚ್ಚಿಗಳು ಅವಸಾನಕ್ಕೆ ಹೋಗುತ್ತಿರುವುದನ್ನರಿತ ಅವುಗಳ ಬಗ್ಗೆ ಅರಿವು ಮೂಡಿಸಲು ಹಾಗೂ ವಾಸಸ್ಥಾನದ ಸಮಸ್ಯೆ ನಿವಾರಿಸಲು ಗೂಡುಗಳನ್ನು ಹಂಚಿಕೆ ಮಾಡಿತ್ತು. ಅವರವರ ಮನೆಯಲ್ಲಿ ಮರದ ಗೂಡುಗಳನ್ನು ನೇತುಹಾಕಲು ಹಾಗೂ ಸಣ್ಣ ಬಟ್ಟಲಿನಲ್ಲಿ ನೀರು ಇಡಲು ಸಲಹೆ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಇನ್ನು ಗುಬ್ಬಚ್ಚಿಯೇ ನಾಶವಾದರೆ, ಅತ್ಯಂತ ಅವಶ್ಯವಾಗಿ ಬೇಕಾಗಿರುವ ಜೀವ ವೈವಿಧ್ಯ ಇಲ್ಲವಾಗಿ ಮನುಷ್ಯನ ಅಸ್ತಿತ್ವಕ್ಕೆ ಕುತ್ತು ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Leave a Comment