ಇಂದು ಆಸ್ರಣ್ಣ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ.೧-ಕಟೀಲು ಗೋಪಾಲಕೃಷ್ಣ ಆಸ್ರಣ್ಣಅವರ ಸ್ಮಂಸ್ಮರಣಾರ್ಥ ನೀಡಲಾಗುವ ‘ಅಸ್ರಣ್ಣ ಪ್ರಶಸ್ತಿ-೨೦೧೮’ ಪ್ರದಾನ ಸಮಾರಂಭವು ಇಂದು (ಸೆ.೧) ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾ ಭವನದಲ್ಲಿಜರಗಲಿರುವುದು.
ಆಸ್ರಣ್ಣ ಶಿಷ್ಯವೃಂದ ಕದ್ರಿ-ಮಂಗಳೂರು ಇವರು ಕೊಡಮಾಡುವ ಈ ಪ್ರಸಸ್ತಿಗೆ ಕಟೀಲು ಮೇಳದ ಯಕ್ಷಗಾನ ವೇಷಧಾರಿ ಬಿ. ಐತ್ತಪ್ಪಗೌಡ ಆಯ್ಕೆಗೊಂಡಿದ್ದಾರೆ.
ಅವರು ಕಳೆದ ಸುಮಾರು ಮೂರು ದಶಕಗಳಿಂದ ಯಕ್ಷಗಾನಕ್ಷೇತ್ರದಲ್ಲಿ ಕಲಾಸೇವೆ ಗೈಯುತ್ತಿದ್ದಾರೆ. ದಿವಂಗತ ಮಿತ್ತನಡ್ಕ ರಾಮಕೃಷ್ಣಕಮ್ತಿಯವರ ಶಿಷ್ಯನಾಗಿ ಯಕ್ಷರಂಗ ಪ್ರವೇಶಿಸಿದ ಐತ್ತಪ್ಪಗೌಡರು ಧರ್ಮಸ್ಥಳ, ಮುಲ್ಕಿ, ಸುಬ್ರಹ್ಮಣ್ಯ, ವೇಣೂರು, ಚೌಡೇಶ್ವರಿ ಮುಂತಾದ ಮೇಳಗಳಲ್ಲಿ ಕಲಾ ಸೇವೆಗೈದಿದ್ದು, ಕಟೀಲು ಮೇಳದಲ್ಲಿ ಕಳೆದ ೨೮ ವರ್ಷಗಳಿಂದಲೂ ಪ್ರಮುಖವಾಗಿ ಬಣ್ಣದ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಕದ್ರಿ ನವನೀತ ಶೆಟ್ಟಿ ಪ್ರಕಟಣೆಂiiಲ್ಲಿ ತಿಳಿಸಿದ್ದಾರೆ.

Leave a Comment