ಇಂದಿರಾ ಜೈ ಸಿಂಗ್, ಆನಂದ್ ಗ್ರೋವರ್ ನಿವಾಸಗಳ ಮೇಲೆ ಸಿಬಿಐ ದಾಳಿ

ನವದೆಹಲಿ, ಜುಲೈ 11 – ವಿದೇಶಿ ವಿನಿಮಯ ಕಾಯಿದೆ ಉಲ್ಲಂಘನೆ ಮಾಡಿ ದೇಣಿಗೆ ಸಂಗ್ರಹ ಮಾಡಿದ ಆರೋಪದ ಮೇರೆಗೆ ಸಿಬಿಐ, ಸುಪ್ರಿಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ಮಾಡಿದೆ.

2009-2014ರ ಅವಧಿಯಲ್ಲಿ ದಂಪತಿಯ ಎನ್‌ಜಿಒ ಸಂಘಟನೆ ವಿದೇಶದಿಂದ ನಿಯಮಬಾಹಿರವಾಗಿ ಹಣ ಸಂಗ್ರಹ ಮಾಡಿದೆ ಎಂಬ ಆರೋಪದ ಮೇರೆಗೆ ದಾಳಿ ಮಾಡಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ಇಂದಿರಾ  ಮತ್ತು ಅವರ ಪತಿ ಗ್ರೋವರ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದ್ದು,  ಗ್ರೋವರ್ ಅವರು ಕಳೆದ ಆರು ವರ್ಷಗಳಿಂದ ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಇಂದಿರಾ ಜೈಸಿಂಗ್ ಅವರು  2009ರಿಂದ  – 2014ರ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದರು.

Leave a Comment