ಇಂದಿನಿಂದ ಸೆಮಿಸ್ ಕಾದಾಟ ಫಿಫಾ ವಿಶ್ವಕಪ್

ಮಾಸ್ಕೋ, ಜು ೧೦- ಫೀಫಾ ವಿಶ್ವಕಪ್ ಪುಟ್ಬಾಲ್‌ನಲ್ಲಿ ಇಂದಿನಿಂದ ಸೆಮಿಫೈನಲ್ ಕದನ ಶುರುವಾಗಲಿದ್ದು, ಫ್ರಾನ್ಸ್-ಬೆಲ್ಜಿಯಂ ನಡುವಿನ ಮೊದಲ ಸೆಮಿಫೈನಲ್ ಕಾದಾಟದಲ್ಲಿ ಗೆಲ್ಲುವ ತಂಡ ಯಾವುದು ಎಂಬ ಕುತುಹಲ ಹೆಚ್ಚಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಈ ಆಕರ್ಷಣೀಯ ಕ್ರೀಡಾ ಹಬ್ಬಕ್ಕೆ ತೆರೆ ಬೀಳಲಿದ್ದು, ಫೈನಲ್‌ಗೂ ಮುನ್ನ ನಡೆಯಲಿರುವ ಸೆಮಿಫೈನಲ್ ಪಂದ್ಯಗಳು ಭಾರಿ ಕುತುಹಲ ಮೂಡಿಸಿದೆ.

ಸದ್ಯದ ಫೀಫಾ ರ್‍ಯಾಂಕಿಂಗ್‌ನಲ್ಲಿ ಬೆಲ್ಜಿಯಂ ತಂಡ ಫ್ರಾನ್ಸ್‌ಗಿಂತ ಮೊದಲಿದೆ. ಬೆಲ್ಜಿಯಂ ೩ನೇ ಸ್ಥಾನದಲ್ಲಿದ್ದರೆ ಫ್ರಾನ್ಸ್ ೭ನೇ ಸ್ಥಾನದಲ್ಲಿದೆ. ಫೀಫಾ ರ್‍ಯಾಂಕಿಂಗ್ ಅವಲಂಭಿಸಿ ಪಂದ್ಯದ ಸೋಲು-ಗೆಲುವು ನಿರ್ಧಾರವಾಗೋಲ್ಲ ಅನ್ನೋದಕ್ಕೆ ಇದೇ ಫೀಫಾ ವಿಶ್ವಕಪ್ ನಲ್ಲಿ ನಡೆದ ಅನೇಕ ಪಂದ್ಯಗಳು ಸಾಕ್ಷಿಯಾಗಿವೆ.

ಫ್ರಾನ್ಸ್ ಇದು ೬ನೇ ಬಾರಿಗೆ ವರ್ಲ್ಡ್ ಕಪ್ ಸೆಮಿಫೈನಲ್‌ಗೆ ಪ್ರವೇಶಿಸುತ್ತಿದ್ದು, ಬೆಲ್ಜಿಯಂ ಕೇವಲ ಒಂದು ಬಾರಿ ಸೆಮಿಗೆ ಪ್ರವೇಶ ಪಡೆದಿದೆ, ಹಾಗಾಗಿ ಫ್ರಾನ್ಸ್ ಗೆಲ್ಲುವ ಪೇವರಿಟ್ ತಂಡ ಎನಿಸಿಕೊಂಡಿದೆ. ಆದರೆ ಈ ಫಿಫಾ ವಿಶ್ವಕಪ್ ಪಂದ್ಯಗಳನ್ನು ಗಮನಿಸಿದರೆ ಬೆಲ್ಜಿಯಂ ಸಕ್ಕತ್ ಫಾರ್ಮ್‌ನಲ್ಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಬೆಲ್ಜಿಯಂ ಬ್ರೇಜಿಲ್‌ನ ನೇಮರ್ ಬಳಗಕ್ಕೆ ಸೋಲುಣಿಸಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಇದರ ಜೊತೆ ಪಂದ್ಯಾಟದ ಉದ್ದಕ್ಕೂ ಬೆಲ್ಜಿಯಂ ಉತ್ತಮ ಪ್ರದರ್ಶನವನ್ನೇ ನೀಡಿರುವುದರು ತಂಡ ಬಲಿಷ್ಟವೆನ್ನುವುದಕ್ಕೆ ಮತ್ತೊಂದು ಸಾಕ್ಷಿ. ಬೆಲ್ಜಿಯಂನಲ್ಲಿ ಇ ಹಜಾರ್ಡ್, ಲುಕಾಕು, ವರ್ಟೊಂಗನ್ ನಂಥ ಅಪಾಯಕಾರಿ ಆಟಗಾರರಿದ್ದರೆ, ಫ್ರಾನ್ಸ್‌ನಲ್ಲಿ ಎಮ್ಬಪ್ಪೆ, ಗ್ರೀಜ್ಮನ್, ಪೋಗ್ಬಾ ನಂತ ಆಟಗಾರರಿದ್ದಾರೆ. ಹಾಗಾಗಿ ಗೆಲುವು ಯಾರುದು ಎಂದು ಹೇಳುವುದು ಕಷ್ಟವೇ ಸರಿ.

Leave a Comment