ಇಂದಿನಿಂದ ಪ್ರೋ ಕಬ್ಬಡ್ಡಿ ಲೀಗ್

ಚನ್ನೈ.ಅ.೭-ಪ್ರೋ ಕಬಡ್ಡಿ ಲೀಗ್ ನ ಆರನೇ ಋತು ಇಂದಿನಿಂದ ಆರಂಭವಾಗಲಿದೆ. ಈ ಬಾರಿ ೧೨ ತಂಡಗಳು ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ. ೧೨ ರಾಜ್ಯಗಳಲ್ಲಿ ಪಂದ್ಯ ನಡೆಯಲಿದೆ. ಲೀಗ್‌ನ ಮೊದಲ ಪಂದ್ಯ ಇಂದಿ ಚನ್ನೈನಲ್ಲಿ ಆರಂಭವಾಗಲಿದೆ.

ಪಾಟ್ನಾ ಪೈರೇಟ್ಸ್ ಮತ್ತು ತಮಿಳು ತಲೈವಾಸ್ ಮಧ್ಯೆ ನಡೆಯಲಿದೆ. ಇದ್ರ ಜೊತೆ ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆಯೂ ಭಾನುವಾರವೇ ಸೆಣೆಸಾಟ ನಡೆಯಲಿದೆ.

ಹಾಲಿ ಚಾಂಪಿಯನ್ ಪಾಟ್ನಾ ಮತ್ತೊಮ್ಮೆ ಡುಬ್ಕಿ ಕಿಂಗ್ ಪ್ರದೀಪ್ ಜೊತೆ ಪ್ರಶಸ್ತಿ ಗೆಲ್ಲುವ ಆತ್ಮವಿಚಿಸದೊಂದಿಗೆ ಕಣಕ್ಕಿಳಿಯಲಿದೆ. ಈ ಬಾರಿ ಲೀಗ್ ಹಿಂದಿನ ಬಾರಿಗಿಂತ ಮತ್ತಷ್ಟು ಆಕರ್ಷಕವಾಗಿರಲಿದೆ. ಇನ್ನು ಬೆಂಗಳೂರು ಬುಲ್ಸ್ ಉತ್ತಮ ಪ್ರದರ್ಶನಕ್ಕೆ ಸಜ್ಜಾಗಿದೆ.

ಈ ಬಾರಿ ರೋಹಿತ್ ಕುಮಾರ್ ತಂಡವನ್ನು ಮುನ್ನೆಡೆಸಲಿದ್ದಾರೆ. ರಣಧೀರ್ ಸಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ. ಜನವರಿ ಐದರಂದು ಮುಂಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Leave a Comment