ಇಂಡಿಯಾ ವಾಲಿ ಇರಾನಿ: ನೆನಪಿನ ಬುತ್ತಿ ಬಿಚ್ಚಿಟ್ಟ  ಸಚಿವೆ  ಸ್ಮೃತಿ ಇರಾನಿ .!!

ನವದೆಹಲಿ , ಫೆ 22- ಕಳದೆ  ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಗೆಲುವಿಗಾಗಿ ನಾನು ಇನು ಮುಂದೆ ಮುಂಬೈ ಬಿಟ್ಟು ಅಮೇಥಿಯಲ್ಲೇ  ಮನೆ ಕಟ್ಟಿ,  ವಾಸ ಮಾಡಿ ಜನರಿಗೆ ಹತ್ತಿರವಾಗಿರುವುದಾಗಿ  ಕೇಂದ್ರ ಸಚಿವೆ ಸ್ಮೃತಿ ಇರಾನಿ  ಸ್ಪಷ್ಟಪಡಿಸಿದ್ದಾರೆ.

ರಾಹುಲ್ ವಿರುದ್ದದ    ಗೆಲುವು ನನ್ನದಲ್ಲ. ಅದು ಅಮೇಥಿ ಜನರ ಗೆಲುವಾಗಿತ್ತು. ನಾನು ಕೇವಲ ಸಂಕೇತವಾಗಿದ್ದೆ. ಹೀಗಾಗಿ ನಾನು ಅಮೇಥಿಯ  ಸಹೋದರಿ, ಹೀಗಾಗಿ ಅಲ್ಲಿಯೇ ಮನೆಯೊಂದನ್ನು ನಿರ್ಮಿಸುವೆ  ಎಂದು ಹೇಳಿದ್ದಾರೆ.

ಈ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲಿದ್ದೇನೆ . ಅಮೇಥಿಯಲ್ಲಿ ಮನೆ ಕಟ್ಟುವ ಕೆಲಸ ಈಗಾಗಲೇ  ಆರಂಭವಾಗಿದೆ. ನಾನು ಬಹಳ  ಹಿಂದೆಯೇ ಮುಂಬೈಯನ್ನು ತ್ಯಜಿಸಿದ್ದೇನೆ. ಹೀಗಾಗಿ ನಾನೀಗ ಅಮೇಥಿ ಹಾಗೂ ದೆಹಲಿಯಲ್ಲಿ ಇರುತ್ತೇನೆ  ಎಂದೂ ಇರಾನಿ ಹೇಳಿಕೊಂಡಿದ್ದಾರೆ.

ಲಕ್ನೋದಲ್ಲಿ ನಡೆದ ‘ಹಿಂದೂಸ್ತಾನ್ ಶಿಖರ್ ಸಮಾಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು   ನನ್ನ ಹೆಸರಿನೊಂದಿಗೆ ಇರುವ ‘ಇರಾನಿ’ ಹೆಸರನ್ನು ನೋಡಿ ವಿದೇಶದ ವಿಮಾನ ನಿಲ್ದಾಣದಲ್ಲಿ ಅಲ್ಲಿನ  ಅಧಿಕಾರಿಗಳು ನನ್ನನ್ನು ತಡೆದಿದ್ದರು. ಆಗ ನಾನು ಅವರಿಗೆ ನನ್ನ ಹೆಸರಿನ ಬಗ್ಗೆ ಸ್ಪಷ್ಟನೆ ನೀಡಿದ್ದೆ ಎಂದು ಹಳೆಯ ನೆನಪು ಮೆಲಕು ಹಾಕಿದರು.

ಹೆಸರಿರುವ ಕಾರಣ ವಿದೇಶದ ವಿಮಾನ ನಿಲ್ದಾಣದಲ್ಲಿ ನನ್ನನ್ನು ತಡೆದು ಇದು ಯಾವ ಇರಾನಿ? ನೀವು ಯಾವ ಇರಾನಿ? ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದರು . ನಾನು ‘ಇಂಡಿಯಾ ವಾಲಿ ಇರಾನಿ’ ಎಂದೂ  ಉತ್ತರಿಸಿದ್ದೆ  ಎಂದೂ  ಆಕೆ ಟಿವಿ ಸಿರಿಯಲ್ ಮಾದರಿಯಲ್ಲೇ ಹಾಸ್ಯ ಚಟಾಕಿ ಹಾರಿಸಿದ್ದಾರೆ.

Leave a Comment