ಇಂಜಿನಿಯರಿಂಗ್ ಕಾಲೇಜಿನ ಸಮವಸ್ತ್ರ ನಿಷೇಧಕ್ಕೆ ಒತ್ತಾಯ

ರಾಯಚೂರು.ನ.07- ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು ಸಮವಸ್ತ್ರ ಹೆಸರಿನಲ್ಲಿ ಆನಾಗತ್ಯ ಕಿರುಕುಳ ನೀಡುತ್ತಿದ್ದಾರೆಂದು, ಆರೋಪಿಸಿ ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿಗೆ ಮನವಿ ಸಲ್ಲಿಸಿದರು.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯರು 2019-20 ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿದ್ದಾರೆ. ಸಮವಸ್ತ್ರ ಇರುವುದರಿಂದ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಕಲಿಕೆಯ ವಾತಾವರುಣ ನಿರ್ಮಾಣವಾಗುತ್ತದೆಂದು ಸತ್ಯವಾದ ಸಂಗತಿಯಾಗಿದೆ. ವಿದ್ಯಾರ್ಥಿನಿಯರು ಕಡ್ಡಾಯವಾಗಿ ಪ್ಯಾಂಟ್ ಶರ್ಟ್ ಹಾಗೂ ಕೊರ್ಟ್ ಹಾಕಬೇಕೆಂದು ಕಡ್ಡಾಯವಾಗಿ ನಿಯಮ ಮಾಡಿರುತ್ತಾರೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಈ ರೀತಿಯ ಸಮವಸ್ತ್ರವು ಧರಿಸಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ, ಆದಕಾರಣ ಪ್ರಾಚಾರ್ಯರು ಈ ಕುರಿತು ಸೂಕ್ತ ನಿರ್ದೇಶನ ನೀಡಿ ಸದರಿ ಸಮವಸ್ತ್ರದಿಂದ ವಿದ್ಯಾರ್ಥಿಗಳಿಗೆ ಮುಕ್ತಿ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಡಿ.ರಫೀಖ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment