ಆ.5 ಬರುಗೂರು ರಾಮಚಂದ್ರಪ್ಪರಿಗೆ ಪ್ರಶಸ್ತಿ ಪ್ರದಾನ

ರಾಯಚೂರು.ಆ.01- ಪ್ರತಿವರ್ಷದಂತೆ ಈ ವರ್ಷವೂ ಖೇಣೇದ್ ಮುರಿಗೆಪ್ಪ ಪ್ರತಿಷ್ಠಾನ ವತಿಯಿಂದ ಆ.5 ರಂದು ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಮುಖಂಡರಾದ ಡಾ.ಕಿರಣ್ ಖೇಣೇದ್ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯ ಖ್ಯಾತ ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕಾದ ನಾಡೋಜ ಪ್ರೋ. ಬರಗೂರು ರಾಮಚಂದ್ರಪ್ಪ ಅವರಿಂಗೆ ಖೇಣೇದ್ ಮುರಿಗೆಪ್ಪ ಪ್ರತಿಷ್ಠಾನದ ಪ್ರಶಸ್ತಿ ನೀಡಲಾಗುತ್ತಿದೆ. ವಿರುಪನಗೌಡ ಇಟಗಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ್ ಪಾಟೀಲ್, ಸಾಹಿತಿಗಳಾದ ಡಾ.ದಸ್ತಗಿರಿ ಸಾಬ್ ದಿನ್ನಿ, ಸಿದ್ದರಾಮ್ ಹೊನ್ಕಲ್, ಡಾ.ಕಿರಣ ಖೇಣೇದ್ ಉಪಸ್ಥಿತರಿರುವರೆಂದು ತಿಳಿಸಿದರು.
ಶರಣು ಖೇಣೇದ್, ಶಿವುಕುಮಾರ, ರಾಚಪ್ಪ, ಭೀಮನಗೌಡ ಇಟಗಿ ಉಪಸ್ಥಿತರಿದ್ದರು.

Leave a Comment