ಆ. 27 ರಾಜಭವನಕ್ಕೆ ವಾಟಾಳ್ ಮುತ್ತಿಗೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ.೨೪- ಪ್ರವಾಹ ಪೀಡಿತ ಕೊಡಗಿಗೆ ಪ್ರಧಾನಿ ಮಂತ್ರಿಗಳು ಭೇಟಿ ನೀಡಬೇಕು. ಹಾಗೂ ಕೊಡಗು ಪುನರ್ ನಿರ್ಮಾಣಕ್ಕೆ 5,000 ಕೋಟಿ ನೆರವು ನೀಡಬೇಕೆಂದು ಒತ್ತಾಯಿಸಿ ಆಗಸ್ಟ್ 27 ರಂದು ರಾಜ ಭವನ ಮುತ್ತಿಗೆ ಹಾಕಲು ಕನ್ನಡ ಒಕ್ಕೂಟ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಕೇರಳಕ್ಕೆ ಮಾತ್ರ ಭೇಟಿ ನೀಡಿದ್ದಾರೆ. ಮತ್ತು ಅಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ನೆರವನ್ನು ಸಹ ಘೋಷಿಸಿದ್ದಾರೆ. ಆದರೆ ಅದೇ ಪರಿಸ್ಥಿತಿ ಕರ್ನಾಟಕದ ಕೊಡಗಿನಲ್ಲಿ ಆಗಿದ್ದರೂ ಸಹ ಭೇಟಿ ನೀಡಿ ಸಮಸ್ಯೆಗಳನ್ನು ವೀಕ್ಷಿಸದೇ ನಿರ್ಲಕ್ಷಿಸಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಆಗಸ್ಟ್ 27ರ ಪ್ರತಿಭಟನೆಯ ನಂತರವೂ ಪ್ರಧಾನಿ ಮಂತ್ರಿಗಳು ರಾಜ್ಯಕ್ಕೆ ಆಗಮಿಸಿ ಈ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೇ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಸಾ.ರಾ.ಗೋವಿಂದು, ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕೆ.ಆರ್.ಕುಮಾರ್, ಮಂಜುದೇವ್, ಗಿರೀಶ್ ಗೌಡ ಇತರರು ಉಪಸ್ಥಿತರಿದ್ದರು.

Leave a Comment